ಟಿಟವಿ ದಿನಕರನ್ ವಿರುದ್ಧ ವಿವಾದಾತ್ಮಕ ಹೇಳಿಕೆ; ನಟ ಕಮಲ್ ಹಾಸನ್ ನಿವಾಸಕ್ಕೆ ಬಿಗಿ ಪೊಲೀಸ್ ಭದ್ರತೆ

ಚೆನ್ನೈ, ಶನಿವಾರ, 6 ಜನವರಿ 2018 (11:43 IST)

ಚೆನ್ನೈ : ನಟ ಕಮಲ್ ಹಾಸನ್ ಅವರು ಟಿಟಿವಿ ದಿನಕರನ್ ಅವರ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿರುವ ಹಿನ್ನಲೆಯಲ್ಲಿ ಕೆಲ ಸಂಘಟನೆಗಳು ಅವರ ನಿವಾಸದೆದುರು ಪ್ರತಿಭಟನೆ ಮಾಡುವುದಾಗಿ ಹೇಳಿಕೆ ನೀಡಿದ್ದ ಕಾರಣ ನಟ ಕಮಲ್ ಹಾಸನ್ ಅವರ ನಿವಾಸಕ್ಕೆ ಬಿಗಿ ಪೊಲೀಸ್ ಭದ್ರತೆಯನ್ನು ನೀಡಲಾಗಿದೆ.

 
ಇತ್ತಿಚೆಗೆ ನಡೆದ ಆರ್.ಕೆ.ನಗರ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ  ಪಕ್ಷೇತರ ಅಭ್ಯರ್ಥಿ ಟಿಟಿವಿ ದಿನಕರನ್ ಅವರು ಗೆಲುವು ಸಾಧಿಸಿದ್ದರು. ಇದಕ್ಕೆ ಸಂಬಂಧಿಸಿದಂತೆ, ತಮಿಳು ನಿಯತಕಾಲಿಕ ‘ಆನಂದ ವಿಕಟನ್’ ಗೆ ಬರೆದ ಲೇಖನದಲ್ಲಿ ವಿಧಾನಸಭಾ ಉಪಚುನಾವಣೆಯ ಫಲಿತಾಂಶದ ಕುರಿತು ಕಮಲ್ ಹಾಸನ್ ಅವರು ಪ್ರಸ್ತಾಪಿಸಿದ್ದು, ಆರ್.ಕೆ.ನಗರ ಕ್ಷೇತ್ರದ ಗೆಲುವನ್ನು ಖರೀದಿಸಲಾಗಿದೆ ಎಂದು ಟೀಕಿಸಿದ್ದು, ದಿನಕರನ್ ಗೆಲುವಿನ ಹಿಂದೆ ಹಣದ ಶಕ್ತಿ ಇದೆ ಎಂದು ಹೇಳಿದ್ದರು.

 
ಇದರಿಂದಾಗಿ ಆರ್.ಕೆ.ನಗರದ ಮತದಾರರು ತಮ್ಮನ್ನು ಅವಮಾನಿಸಿದರೆಂದು ಕೋಪಗೊಂಡಿದ್ದು, ಕೆಲ ಸಂಘಟನೆಗಳು ಕಮಲ್ ಹಾಸನ್ ಅವರ ನಿವಾಸದೆದುರು ಪ್ರತಿಭಟನೆ ಮಾಡಲು ಮುಂದಾಗಿದ್ದಾರೆ. ಅದಕ್ಕಾಗಿ ಅವರ ನಿವಾಸಕ್ಕೆ ಬಿಗಿ ಭದ್ರತೆ ಮಾಡಲಾಗಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಹಿಂದೂಗಳ ಹತ್ಯೆ ಜಿಲ್ಲಾ ಉಸ್ತುವಾರಿ ಸಚಿವರೇ ಕಾರಣ- ಸಂಸದ

ಹಿಂದೂಗಳ ಹತ್ಯೆ ನಡೆಯಲು ಜಿಲ್ಲಾ ಉಸ್ತುವಾರಿ ಸಚಿವರೇ ಕಾರಣರಾಗಿದ್ದಾರೆ ಎಂದು ಸಂಸದ ನಳಿನ್ ಕುಮಾರ ಕಟೀಲ್ ...

news

ಬಾಗಲಕೋಟೆ ಪ್ರವಾಸ ಕೈಗೊಂಡಿರುವ ಕುಮಾರಸ್ವಾಮಿ

ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅವರು ಇಂದಿನಿಂದ ಎರಡು ದಿನಗಳ ಪ್ರವಾಸವನ್ನು ಬಾಗಲಕೋಟೆ ...

news

ಮನಮೋಹನ್ ಸಿಂಗ್ ಬಳಿ ತಾವೇ ಹೋಗಿ ಕೈಕುಲುಕಿದ ಪ್ರಧಾನಿ ಮೋದಿ

ನವದೆಹಲಿ: ಇತ್ತೀಚೆಗಷ್ಟೇ ಪಾಕ್ ಅಧಿಕಾರಿಗಳ ಜತೆ ಸಭೆ ನಡೆಸಿದ್ದಾರೆಂದು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ...

news

ಅಸಮಾಧಾನ- ಪರಿವರ್ತನಾ ಯಾತ್ರೆಯಿಂದ ದೂರ ಉಳಿದ ಶಾಸಕ ಆನಂದಸಿಂಗ್

ಬಿಜೆಪಿ ಪಕ್ಷದಲ್ಲಿ ಅಸಮಾಧಾನ ತೀವ್ರಗೊಂಡಿದ್ದು, ಶಾಸಕ ಆನಂದ ಸಿಂಗ್ ಅವರ ಅನುಪಸ್ಥಿತಿಯಲ್ಲಿ ಹೊಸಪೇಟೆಯಲ್ಲಿ ...

Widgets Magazine
Widgets Magazine