ಶಶಿಕಲಾ ಪತಿ ನಟರಾಜನ್ ಗೆ ಶಸ್ತ್ರಚಿಕಿತ್ಸೆ: ಇದೀಗ ವಿವಾದದಲ್ಲಿ

ಚೆನ್ನೈ, ಗುರುವಾರ, 5 ಅಕ್ಟೋಬರ್ 2017 (09:55 IST)

ಚೆನ್ನೈ: ಅಕ್ರಮ ಆಸ್ಥಿ ಗಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲು ಶಿಕ್ಷೆ ಅನುಭವಿಸುತ್ತಿರುವ ಎಐಎಡಿಎಂಕೆ ಮಾಜಿ ಪ್ರಧಾನ ಕಾರ್ಯದರ್ಶಿ ಶಶಿಕಲಾ ಪತಿ ನಟರಾಜನ್ ಅಂಗ ಕಸಿ ಶಸ್ತ್ರಚಿಕಿತ್ಸೆಯ ಸುತ್ತ ಇದೀಗ ವಿವಾದ ಅಂಟಿಕೊಂಡಿದೆ.


 
ಚೆನ್ನೈನ ಗ್ಲೋಬಲ್ ಸಿಟಿ ಆಸ್ಪತ್ರೆಯಲ್ಲಿ ನಟರಾಜನ್ ಗೆ ಶಸ್ತ್ರಚಿಕಿತ್ಸೆ ನಡೆಸಲಾಗಿತ್ತು. ಇದೇ ಆಸ್ಪತ್ರೆಗೆ ಅಪಘಾತದಲ್ಲಿ ತೀವ್ರ ಗಾಯಗೊಂಡು ಮೆದುಳು ನಿಷ್ಕ್ರಿಯಗೊಂಡ 19 ವರ್ಷದ ಯುವಕ ದಾಖಲಾಗಿದ್ದ. ಆತನ ಅಂಗಾಂಗಳನ್ನು ನಟರಾಜನ್ ಗೆ ಜೋಡಿಸಲಾಗಿದೆ.
 
ಈ ಸಂದರ್ಭದಲ್ಲಿ ನಿಯಮಗಳನ್ನು ಗಾಳಿಗೆ ತೂರಲಾಗಿದೆ  ಎಂದು ದೂರಲಾಗಿದೆ. ಆದರೆ ಆಸ್ಪತ್ರೆ ಮೂಲಗಳು ಇದನ್ನು ನಿರಾಕರಿಸಿದ್ದು, ಅಂಗಾಂಗ ಆಕಾಂಕ್ಷಿಗಳ ಪಟ್ಟಿಯಲ್ಲಿ ನಟರಾಜನ್ ಹೆಸರು ಮುಂಚೂಣಿಯಲ್ಲಿತ್ತು. ಹೀಗಾಗಿ ಯುವಕನ ಕುಟುಂಬದವರ ಒಪ್ಪಿಗೆಯೊಂದಿಗೇ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಅಲ್ಲದೆ, ಯುವಕನ ಒಂದು ಮೂತ್ರಪಿಂಡವನ್ನು ಸರ್ಕಾರಿ ಆಸ್ಪತ್ರೆಗೆ ನೀಡಲಾಗಿದೆ.
 
ಉಳಿದ ಅಂಗಾಂಗಳನ್ನು ನಿಯಮದಂತೇ ಗ್ಲೋಬಲ್ ಆಸ್ಪತ್ರೆಗೆ ಬಳಸಲು ಅವಕಾಶವಿದೆ ಎಂದು ಆಸ್ಪತ್ರೆ ಸ್ಪಷ್ಟನೆ ನೀಡಿದೆ. ನಟರಾಜನ್ ಗೆ ಒಂದು ಕಿಡ್ನಿ ಮತ್ತು ಪಿತ್ತಜನಕಾಂಗವನ್ನು ಶಸ್ತ್ರಚಿಕಿತ್ಸೆ ಮೂಲಕ ಜೋಡಿಸಲಾಗಿದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ನಾಯಿಗಳನ್ನು ಸಾಮೂಹಿಕವಾಗಿ ಜೀವಂತ ಸುಟ್ಟ ದುಷ್ಕರ್ಮಿಗಳು!

ಮುಂಬೈ: ಪ್ರಾಣಿಗಳೇ ಆದರೂ ಅವರಿಗೂ ಜೀವಿಸುವ ಹಕ್ಕಿಲ್ಲವೇ? ಆದರೆ ಪುಣೆಯಲ್ಲಿ ನಡೆದ ಧಾರುಣ ಘಟನೆಯೊಂದಲ್ಲಿ ...

news

ಕೇರಳದಲ್ಲಿ ಬಿಜೆಪಿ ಯಾತ್ರೆ: ಕಾಂಗ್ರೆಸ್ ಗೆ ಶುರುವಾಗಿದ್ಯಾ ನಡುಕ?

ಕೊಚ್ಚಿ: ಕೇರಳದಲ್ಲಿ ತನ್ನ ಪ್ರಾಬಲ್ಯ ವಿಸ್ತರಿಸಲು ಶತಪ್ರಯತ್ನ ನಡೆಸುತ್ತಿರುವ ಬಿಜೆಪಿ ಘಟಾನುಘಟಿ ನಾಯಕರ ...

news

ಪ್ರಧಾನಿ ಮೋದಿಗೆ ಸಮಸ್ಯೆ ಪರಿಹರಿಸಲಾಗದಿದ್ರೆ ಕಾಂಗ್ರೆಸ್ ಮೊರೆ ಹೋಗಲಿ: ರಾಹುಲ್ ಗಾಂಧಿ

ಅಮೇಥಿ: ಪ್ರಧಾನಮಂತ್ರಿ ನರೇಂದ್ರ ಮೋದಿ ವಿರುದ್ಧ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ವಾಗ್ದಾಳಿ ...

news

ಕೆಲವರಿಗೆ ನಮ್ಮ ಸರ್ಕಾರ ಟೀಕಿಸದಿದ್ರೆ ನಿದ್ದೆ ಬರೋಲ್ಲ: ಪ್ರಧಾನಿ ಮೋದಿ

ನವದೆಹಲಿ: ಕೆಲವರಿಗೆ ನಮ್ಮ ಸರ್ಕಾರವನ್ನು ಟೀಕಿಸದಿದ್ರೆ ನಿದ್ದೆ ಬರೋಲ್ಲ. ಸರಕಾರವನ್ನು ಟೀಕಿಸುವುದೇ ...

Widgets Magazine
Widgets Magazine