ಮದುವೆಯಾಗುವುದನ್ನು ತಪ್ಪಿಸಲು ಪ್ರಿಯತಮೆಯ ಮೇಲೆ ಗೆಳೆಯರಿಂದ ರೇಪ್ ಮಾಡಿಸಿದ ಪ್ರಿಯಕರ

ಜಲಂಧರ್, ಗುರುವಾರ, 27 ಜುಲೈ 2017 (16:22 IST)

rape attempt

ಪ್ರಿಯತಮೆಯೊಂದಿಗೆ ಮದುವೆಯಾಗುವುದನ್ನು ತಪ್ಪಿಸಲು ಪಿತೂರಿ ನಡೆಸಿದ ಆರೋಪದ ಮೇಲೆ ಕಾಲೇಜು ವಿದ್ಯಾರ್ಥಿಯನ್ನು ಬಂಧಿಸಲಾಗಿದೆ.
 
ಆರೋಪಿ ವಿದ್ಯಾರ್ಥಿ, ಗೆಳೆಯರು ಆಕೆಯ ಮೇಲೆ ಅತ್ಯಾಚಾರವೆಸಗಿದಲ್ಲಿ ತಾನು ಆಕೆಯಿಂದ ದೂರವಾಗಬಹುದು ಎನ್ನುವ ಪಿತೂರಿ ನಡೆಸಿ, ತನ್ನ ಇಬ್ಬರು ಗೆಳೆಯರಿಗೆ ಪ್ರಿಯತಮೆಯ ಮೇಲೆ ಅತ್ಯಾಚಾರವೆಸಗುವಂತೆ ಪ್ರೇರೇಪಿಸಿದ್ದಾನೆ. 
 
ಪೋಷಕರನ್ನು ಭೇಟಿ ಮಾಡಿಸುತ್ತೇನೆ ಎನ್ನುವ ನೆಪವೊಡ್ಡಿ ಹರಪ್ರೀತ್ ಸಿಂಗ್, ನನ್ನನ್ನು ಕರೆದುಕೊಂಡು ಹೋಗಿದ್ದ. ಆದರೆ, ಮಾರ್ಗ ಮಧ್ಯದಲ್ಲಿಯೇ ಪೋಷಕರನ್ನು ಕರೆದುಕೊಂಡು ಬರುತ್ತೇನೆ ಇಲ್ಲಿಯೇ ಕಾಯುತ್ತಾ ಇರು ಎಂದು ಹೇಳಿ ತೆರಳಿದ್ದಾನೆ. ಆದರೆ, ಸ್ವಲ್ಪ ಸಮಯದಲ್ಲಿಯೇ ಆತನ ಇಬ್ಬರು ಗೆಳೆಯರು ಬಂದು ನನ್ನನ್ನು ನಿರ್ಜನ ಪ್ರದೇಶದಲ್ಲಿರುವ ಮನೆಯೊಂದಕ್ಕೆ ಕರೆದುಕೊಂಡು ಹೋಗಿ ಅತ್ಯಾಚಾರವೆಸಗಿದ್ದಾರೆ ಎಂದು ಯುವತಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾಳೆ.   
 
ಆಸ್ಪತ್ರೆಯಲ್ಲಿ ಯುವತಿಯ ಮೇಲೆ ಅತ್ಯಾಚಾರ ನಡೆದಿರುವುದು ಧೃಢಪಟ್ಟಿದೆ. ಆರೋಪಿ ಹರಪ್ರೀತ್ ಸಿಂಗ್‌ನನ್ನು ಈಗಾಗಲೇ ಬಂಧಿಸಲಾಗಿದ್ದು, ಇತರ ಇಬ್ಬರು ಆರೋಪಿಗಳಾದ ರವಿ ಮತ್ತು ಬಿಂದುನನ್ನು ಶೀಘ್ರದಲ್ಲಿಯೇ ಬಂಧಿಸಲಾಗುವುದು ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. ಇದರಲ್ಲಿ ಇನ್ನಷ್ಟು ಓದಿ :  
ಕಾಲೇಜು ವಿದ್ಯಾರ್ಥಿ ಯುವತಿ ರೇಪ್ ಪ್ರಿಯಕರ ಮದುವೆ ಸಂಚು Girlfriend Rape Marriage Conspiracy College Student

ಸುದ್ದಿಗಳು

news

ಬಿಜೆಪಿಗೆ ನಿತೀಶ್ ಬೆಂಬಲ: ಇಬ್ಬಾಗವಾಗುವತ್ತ ಜೆಡಿಯು ಪಕ್ಷ

ಪಾಟ್ನಾ: ಎನ್‌ಡಿಎ ಮೈತ್ರಿಕೂಟಕ್ಕೆ ಸೇರ್ಪಡೆಯಾದ ಬಿಹಾರ್ ಮುಖ್ಯಮಂತ್ರಿ ನಿತೀಶ್ ಕುಮಾರ್ ನಡೆಯಿಂದ ...

news

ಧರಂ ಸಿಂಗ್ ನಿಧನ: ಪ್ರಧಾನಿ ಮೋದಿ, ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಕಂಬನಿ

ಮಾಜಿ ಮುಖ್ಯಮಂತ್ರಿ ಎನ್ ಧರಂ ಸಿಂಗ್ ಅವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಸಂತಾಪ ಸೂಚಿಸಿದ್ದು, ಧರಂ ...

news

ಬಂಡಿಪೋರಾದಲ್ಲಿ ಉಗ್ರರ ಒಳನುಸುಳುವಿಕೆ ವಿಫಲ: ಮೂವರು ಭಯೋತ್ಪಾದಕರ ಹತ್ಯೆ

ಉತ್ತರ ಕಾಶ್ಮೀರದ ಬಂಡಿಪೊರಾ ಜಿಲ್ಲೆಯ ಗಡಿ ನಿಯಂತ್ರಣ ರೇಖೆ ಗುರೆಜ್ ಸೆಕ್ಟರ್ ನಲ್ಲಿ ಒಳನುಸುಳಲು ...

news

ಧರ್ಮಸಿಂಗ್‌ರೊಂದಿಗಿನ ಸಮ್ಮಿಶ್ರ ಸರಕಾರ ಮೆಲಕುಹಾಕಿದ ಕುಮಾರಸ್ವಾಮಿ

ಬೆಂಗಳೂರು: ಕಾಂಗ್ರೆಸ್‍ನ ಹಿರಿಯ ಮುಖಂಡ, ಮಾಜಿ ಮುಖ್ಯಮಂತ್ರಿ, ಧರ್ಮಸಿಂಗ್ ಅವರ ನಿಧನಕ್ಕೆ ಜೆಡಿಎಸ್ ...

Widgets Magazine