ಮುಸ್ಲಿಮರು ಸೋಷಿಯಲ್ ಮೀಡಿಯಾದಲ್ಲಿ ಫೋಟೊ ಹಾಕುವುದು ಬ್ಯಾನ್

ನವದೆಹಲಿ, ಗುರುವಾರ, 19 ಅಕ್ಟೋಬರ್ 2017 (19:06 IST)

ನವದೆಹಲಿ: ಇತ್ತೀಚೆಗಷ್ಟೇ ಮುಸ್ಲಿಂ ಮಹಿಳೆಯರು ಹೇರ್ ಸ್ಟೈಲ್, ಐಬ್ರೋ ಶೇಪ್ ಮಾಡುವುದು ಧರ್ಮಕ್ಕೆ ವಿರುದ್ಧವಾದದ್ದು ಎಂದು ಫತ್ವಾ ಹೊರಡಿಸಿತ್ತು. ಇದಕ್ಕೆ ತೀವ್ರ ವಿರೋಧ ಕೂಡ ವ್ಯಕ್ತವಾಗಿತ್ತು. ಈಗ ಮತ್ತೊಂದು ಹೊಸ ಫತ್ವಾ ಹೊರಡಿಸಿದೆ. ಮುಸ್ಲಿಮರು ಸ್ತ್ರೀಯರಾಗಿರಲಿ, ಪುರುಷರಾಗಿರಲಿ ಸೋಷಿಯಲ್‌ ಮೀಡಿಯಾದಲ್ಲಿ ತಮ್ಮ ಫೋಟೊ ಹಾಕಬಾರದು ಎಂದು ಫತ್ವಾ ಹೊರಡಿಸಿದೆ.


ಉತ್ತರ ಪ್ರದೇಶದ ಶಹರನ್‌ ‌ಪುರ್‌‌ ಜಿಲ್ಲೆಯ ದಿಯೋಬಂದ್‌ ನ ದರುಲ್‌ ಉಲೂಮ್‌ ಎಂಬ ಇಸ್ಲಾಮಿಕ್‌ ಸೆಮಿನರಿ ಫತ್ವಾ ಹೊರಡಿಸಿದೆ. ಭಾರತೀಯ ಮುಸ್ಲಿಮರು ಸಾಮಾಜಿಕ ಜಾಲತಾಣಗಳಲ್ಲಿ ಫೋಟೊಗಳನ್ನು ಪೋಸ್ಟ್‌ ಮಾಡುವುದು ಇಸ್ಲಾಂ ಧರ್ಮಕ್ಕೆ ವಿರುದ್ಧ. ಹೀಗಾಗಿ ಮುಸ್ಲಿಂ ಪುರುಷರಾಗಲಿ, ಮಹಿಳೆಯರಾಗಿರಲಿ ತಮ್ಮ, ತಮ್ಮ ಕುಟುಂಬದವರ ಫೋಟೊಗಳನ್ನ ಪೋಸ್ಟ್‌ ಮಾಡಬಾರದು ಎಂದು ದರುಲ್‌ ಉಲೂಮ್‌ ಫತ್ವಾ ಹೊರಡಿಸಿದೆ.

ಅನಗತ್ಯವಾಗಿ ಸೋಷಿಯಲ್‌ ಮೀಡಿಯಾಗಳಲ್ಲಿ ಫೋಟೊಗಳನ್ನು ಹಾಕುವುದು ತಪ್ಪು. ದರುಲ್‌ ಉಲೂಮ್‌ ಹೊರಡಿಸಿರುವ ಫತ್ವಾಮೆಚ್ಚುವಂತಹದ್ದು ಎಂದು ದರುಲ್‌ ಉಲೂಮ್‌ ಮುಖಂಡ ಶಹನವಾಜ್‌ ಖಾದ್ರಿ ಹೇಳಿದ್ದಾರೆ.ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಸಾವು, ಬದುಕಿನ ನಡುವೆ ಹೋರಾಟದಲ್ಲಿ ಬದುಕಲಿಲ್ಲ ಸಂಜನಾ…

ಬೆಂಗಳೂರು: ಈಜಿಪುರ ಕಟ್ಟಡ ಕುಸಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಪವಾಡ ಸದೃಶ ಪಾರಾಗಿದ್ದ ಮೂರು ವರ್ಷದ ಮಗು ...

news

ಪಾಕ್ ರೋಗಿಗಳಿಗೆ ದೀಪಾವಳಿ ಬಂಪರ್ ಗಿಫ್ಟ್ ನೀಡಿದ ಸುಷ್ಮಾ ಸ್ವರಾಜ್

ನವದೆಹಲಿ: ಪಾಕಿಸ್ತಾನ ರೋಗಿಗಳಿಗೆ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ದೀಪಾವಳಿಗೆ ಬಂಪರ್ ಗಿಫ್ಟ್ ...

news

ಯೋಧರು ನಮ್ಮ ಕುಟುಂಬದ ಸದಸ್ಯರಿದ್ದಂತೆ: ಪ್ರಧಾನಿ ನರೇಂದ್ರ ಮೋದಿ

ಜಮ್ಮು ಕಾಶ್ಮೀರ: ಪ್ರತೀ ಬಾರಿಯಂತೆ ಈ ಬಾರಿಯೂ ಪ್ರಧಾನಿ ನರೇಂದ್ರ ಮೋದಿ ಬಿಎಸ್ಎಫ್ ಯೋಧರ ಜತೆ ದೀಪಾವಳಿ ...

news

ದೇವಾಲಯ ಧ್ವಂಸಗೊಳಿಸಿ ತಾಜ್ ಮಹಲ್ ಕಟ್ಟಲಾಗಿದೆ: ಸುಬ್ರಮಣಿಯನ್ ಸ್ವಾಮಿ

ನವದೆಹಲಿ: ತಾಜ್ ಮಹಲ್ ಬಗ್ಗೆ ಸೃಷ್ಟಿಯಾಗಿರುವ ವಿವಾದಕ್ಕೆ ಕೊನೆಯಾಗುವ ಲಕ್ಷಣ ಕಾಣುತ್ತಿಲ್ಲ. ಈಗ ಮತ್ತೊಬ್ಬ ...

Widgets Magazine
Widgets Magazine