ಛೋಟಾ ಶಕೀಲ್ ನನ್ನು ತಿಹಾರ್ ಜೈಲಿನಲ್ಲೇ ಮುಗಿಸಲು ದಾವೂದ್ ಇಬ್ರಾಹಿಂ ಸಂಚು?!

ಮುಂಬೈ, ಬುಧವಾರ, 27 ಡಿಸೆಂಬರ್ 2017 (10:11 IST)

ಮುಂಬೈ: ಮುಂಬೈ ಪೊಲೀಸರಿಂದ ಬಂಧನಕ್ಕೊಳಗಾಗಿ ಸದ್ಯಕ್ಕೆ ತಿಹಾರ್ ಜೈಲಿನಲ್ಲಿರುವ ಭೂಗತ ಪಾತಕಿ ಛೋಟಾ ಶಕೀಲ್ ನ್ನು ಹತ್ಯೆ ಮಾಡಲು ಭೂಗತ ದೊರೆ ದಾವೂದ್ ಇಬ್ರಾಹಿಂ ಸಂಚು ನಡೆಸಿದ್ದಾನೆ ಎಂದು ಗುಪ್ತಚರ ಇಲಾಖೆ ಎಚ್ಚರಿಕೆ ನೀಡಿದೆ.
 

ದಾವೂದ್ ಇಬ್ರಾಹಿಂ ಬಗ್ಗೆ ಛೋಟಾ ಶಕೀಲ್ ಹಲವು ರಹಸ್ಯಗಳನ್ನು ಬಿಟ್ಟುಕೊಟ್ಟಿದ್ದ. ಈ ಹಿನ್ನಲೆಯಲ್ಲಿ ತನಗೆ ಕುತ್ತು ಬರಬಹುದೆಂಬ ಭಯಕ್ಕೆ ದಾವೂದ್, ಶಕೀಲ್ ನನ್ನು ಜೈಲಿನಲ್ಲೇ ಮುಗಿಸಲು ಸಂಚು ರೂಪಿಸುತ್ತಿದ್ದಾನೆ ಎಂದು ಗುಪ್ತಚರ ಇಲಾಖೆ ಮೂಲಗಳು ತಿಹಾರ್ ಜೈಲು ಅಧಿಕಾರಿಗಳಿಗೆ ಮುನ್ನಚ್ಚರಿಕೆ ನೀಡಿದ್ದಾರೆ.
 
ದೆಹಲಿ ಮೂಲದ ಪಾತಕಿಯ ಮೂಲಕ ಈ ಕೆಲಸ ಮಾಡಿಸಲು ದಾವೂದ್ ಸಂಚು ರೂಪಿಸಿದ್ದಾನೆ ಎನ್ನಲಾಗಿದೆ.  ಈ ಹಿನ್ನಲೆಯಲ್ಲಿ ತಿಹಾರ್ ಜೈಲಿನಲ್ಲಿ ಬಿಗಿ ಭದ್ರತೆ ಹೆಚ್ಚಿಸಲಾಗಿದೆ. ಯಾವುದೇ ಪಾತಕಿಗಳು ಜೈಲಿನೊಳಗೆ ಬಂದು ಕೊಲೆ ನಡೆಸಲು ಸಾಧ್ಯವಿಲ್ಲ ಎಂದು ತಿಹಾರ್ ಜೈಲಾಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಸಂಪುಟದಿಂದ ಅನಂತಕುಮಾರ ಹೆಗಡೆ ವಜಾಗೊಳಿಸಲು ಬಿ.ಆರ್.ಪಾಟೀಲ ಒತ್ತಾಯ

ಸಂವಿಧಾನ ಬದಲಾವಣೆ ಮಾಡಲಿಕ್ಕೆ ನಾವು ಬಂದಿದ್ದೇವೆ ಎನ್ನುವ ಮೂಲಕ ಸಮಾಜದಲ್ಲಿ ಸ್ವಾಸ್ಥ್ಯಕ್ಕೆ ಧಕ್ಕೆ ...

news

ಉತ್ತರ ಕರ್ನಾಟಕ ಬಂದ್ ಗೆ ಜ್ಯೂನಿಯರ್ ಉಪೇಂದ್ರ ಸಾಥ್

ಹುಬ್ಬಳ್ಳಿ: ಮಹದಾಯಿ ನದಿ ನೀರಿಗೆ ಸಂಬಂಧಿಸಿದಂತೆ ಇಂದು ಉತ್ತರ ಕರ್ನಾಟಕ ಬಂದ್ ಗೆ ಕರೆ ನೀಡಲಾಗಿದ್ದು, ...

news

ಮಹದಾಯಿ ಹೋರಾಟಗಾರರಿಂದ ಪಾದಯಾತ್ರೆ ಮಾಡುವ ತೀರ್ಮಾನ

ಬೆಂಗಳೂರು: ಮಲ್ಲೇಶ್ವರಂ ನ ಬಿಜೆಪಿ ಕಚೇರಿಯ ಎದುರು ಮಹದಾಯಿ ಹೋರಾಟಗಾರರ ಪ್ರತಿಭಟನೆ ಮುಂದುವರಿದಿದ್ದು, ...

news

ಮಹದಾಯಿ ಕಿಚ್ಚು; ಉತ್ತರ ಕರ್ನಾಟಕ ಬಂದ್

ಉತ್ತರ ಕರ್ನಾಟಕ: ಮಹದಾಯಿ ಯೋಜನೆಗೆ ಆಗ್ರಹಿಸಿ ಇಂದು ಉತ್ತರ ಕರ್ನಾಟಕದಲ್ಲಿ ಜಯ ಕರ್ನಾಟಕ ಸಂಘಟನೆಯಿಂದ ಬಂದ್ ...

Widgets Magazine
Widgets Magazine