ಕಳೆದ ವರ್ಷ ಮುಂಬೈಗೆ ಭೇಟಿ ನೀಡಿದ್ದ ದಾವೂದ್ ಇಬ್ರಾಹಿಂ ಪತ್ನಿ

ಮುಂಬೈ, ಶುಕ್ರವಾರ, 22 ಸೆಪ್ಟಂಬರ್ 2017 (20:37 IST)

Widgets Magazine

ಅಂಡರ್ವರ್ಲ್ಡ್ ಡಾನ್ ದಾವೂದ್ ಇಬ್ರಾಹಿಂ ಅವರ ಪತ್ನಿ ಮೆಹಜಬಿನ್ ಶೇಖ್ ಮುಂಬೈಗೆ ಭೇಟಿ ನೀಡಿದ್ದು, ಕಳೆದ ವರ್ಷ ತನ್ನ ತಂದೆಯನ್ನು ಭೇಟಿ ಮಾಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. 
ಹಫ್ತಾ ವಸೂಲಿ ಪ್ರಕರಣದಲ್ಲಿ ಪೊಲೀಸ್ ವಿಚಾರಣೆ ಎದುರಿಸುತ್ತಿರುವ ದಾವೂದ್ ಸಹೋದರ ಇಕ್ಬಾಲ್ ಕಸ್ಕರ್, ಪೊಲೀಸರ ವಿಚಾರಣೆ ಸಂದರ್ಭದಲ್ಲಿ ಸಹೋದರ ಜಾಗತಿಕ ಭಯೋತ್ಪಾದಕ ದಾವೂದ್ ಇಬ್ರಾಹಿಂ ಪಾಕಿಸ್ತಾನದಲ್ಲಿದ್ದಾನೆ ಎಂದು ತಿಳಿಸಿದ್ದಾನೆ.
 
ದಾವೂದ್ ಅವರ ಹೆಂಡತಿ ಮೆಹಜಬಿನ್ ಶೇಖ್ ಅಲಿಯಾಸ್ ಜುಬೀನಾ ಝರಿನ್ ಕಳೆದ ವರ್ಷ ಮುಂಬೈಗೆ ಆಗಮಿಸಿ. ಅವರ ತಂದೆ ಸಲೀಂ ಕಾಶ್ಮೀರಿ ಅವರನ್ನು ಭೇಟಿಯಾಗಿದ್ದರು ಎಂದು ಕಸ್ಕರ್ ಹೇಳಿದ್ದಾನೆ.
 
ಕಾಶ್ಮೀರಿ ಮತ್ತು ಅವರ ಕುಟುಂಬದ ಸದಸ್ಯರನ್ನು ಭೇಟಿಯಾದ ನಂತರ, ಮೆಹಜಬಿನ್ ದೇಶವನ್ನು ಸದ್ದಿಲ್ಲದೆ ಬಿಟ್ಟರು ಎಂದು ತಿಳಿಸಿದ್ದಾನೆ. ದಾವೂದ್‌ನ ನಾಲ್ಕು ಮನೆಗಳ ವಿಳಾಸಗಳನ್ನು ಕೂಡಾ ಕಸ್ಕರ್ ನೀಡಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
 
ದಾವೂದ್, ಅವರ ಸಹೋದರ ಅನೀಸ್ ಇಬ್ರಾಹಿಂ ಮತ್ತು ಅವರ ನಿಕಟ ಸಹಾಯಕ ಚೋಟಾ ಶಕೀಲ್ ಅವರು ಪಾಕಿಸ್ತಾನಿ ಬಂದರು ನಗರದಲ್ಲಿನ ಐಷಾರಾಮಿ ಪ್ರದೇಶದಲ್ಲೇ ವಾಸವಾಗಿದ್ದಾರೆ ಎಂದು ತಿಳಿಸಿದ್ದಾನೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
 
ಈದ್ ಹಬ್ಬದ ಸಂದರ್ಭದಲ್ಲಿ ಅನೀಸ್ ಇಬ್ರಾಹಿಂ ಕುಟುಂಬದ ಸದಸ್ಯರೊಂದಿಗೆ ದೂರವಾಣಿ ಕರೆ ಮಾಡಿ ಯೋಗಕ್ಷೇಮ ವಿಚಾರಿಸುತ್ತಾರೆ. ದಾವೂದ್ ಇಬ್ರಾಹಿಂ ಆರೋಗ್ಯದಿಂದಾನೆ. ಯಾವುದೇ ಅನಾರೋಗ್ಯ ಕಾಡುತ್ತಿಲ್ಲ ಎಂದು ಇಕ್ಬಾಲ್ ಕಸ್ಕರ್ ತಿಳಿಸಿದ್ದಾನೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.   
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ರೈತ ದಸರಾ ಉದ್ಘಾಟಿಸಿದ ಮೇಯರ್ ರವಿಕುಮಾರ್

ಮೈಸೂರು: ದಸರಾ ಮಹೋತ್ಸವದ ಅಂಗವಾಗಿ ಇಂದಿನಿಂದ ಮೂರು ದಿನಗಳ ಕಾಲ ಜೆ.ಕೆ.ಮೈದಾನದಲ್ಲಿ ರೈತ ದಸರಾ ನಡೆಯಲಿದೆ. ...

news

`ಮನೆ ಮನೆಗೆ ಕಾಂಗ್ರೆಸ್’ ಕಾರ್ಯಕ್ರಮಕ್ಕೆ ನಾಳೆ ಚಾಲನೆ

ಬೆಂಗಳೂರು: 2018ರ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಭರ್ಜರಿ ತಯಾರಿ ನಡೆಸಿದೆ. ಈ ನಿಟ್ಟಿನಲ್ಲಿ ನಾಳೆಯಿಂದ ...

news

ಸಿಎಂ ಸಿದ್ದರಾಮಯ್ಯ ವಿರುದ್ಧ ದೇವೇಗೌಡ ವಾಗ್ದಾಳಿ

ಬೆಂಗಳೂರು: ಅಕ್ರಮ ಸಕ್ರಮದಿಂದ ಸಾಕಷ್ಟು ಜನರಿಗೆ ಮೋಸ,ಸಮಸ್ಯೆಗಳಾಗುತ್ತಿವೆ ಎಂದು ಸಿಎಂ ಸಿದ್ದರಾಮಯ್ಯ ...

news

ಭಾರತ, ಪಾಕ್ ದ್ವಿಪಕ್ಷೀಯವಾಗಿ ಕಾಶ್ಮಿರ ಸಮಸ್ಯೆ ಇತ್ಯರ್ಥಗೊಳಿಸಲಿ: ಚೀನಾ

ವಿಶ್ವಸಂಸ್ಥೆ: ಕಾಶ್ಮೀರ ಸಮಸ್ಯೆಯನ್ನು ಭಾರತ ಮತ್ತು ಪಾಕಿಸ್ತಾನ ದ್ವಿಪಕ್ಷೀಯವಾಗಿ ಮಾತುಕತೆಗಳ ಮೂಲಕ ...

Widgets Magazine