ಗುಜರಾತ್ ದಂಗೆಯನ್ನು ಬಂಗಾಳ ದಂಗೆಯೆಂದು ಬಿಂಬಿಸಿದ ಬಿಜೆಪಿ ನಾಯಕಿ

ನವದೆಹಲಿ, ಸೋಮವಾರ, 10 ಜುಲೈ 2017 (16:32 IST)

ಕಳೆದ 2002ರಲ್ಲಿ ನಡೆದ ಗುಜರಾತ್ ದಂಗೆಯ ಚಿತ್ರಗಳನ್ನು ಪಶ್ಚಿಮ ಬಂಗಾಳದ ಬಸೀರ್‌ಹಾಟ್ ದಂಗೆಯ ಚಿತ್ರಗಳು ಎಂದು ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿದ್ದ ದೆಹಲಿ ಬಿಜೆಪಿ ನಾಯಕಿ ನೂಪುರ್ ಶರ್ಮಾ, ಟ್ವಿಟ್ಟರ್ ಖಾತೆದಾರರು ತರಾಟೆಗೆ ತೆಗೆದುಕೊಂಡಿದ್ದಾರೆ.
 
ಬಸೀರ್‌ಹಾಟ್ ಹಿಂಸಾಚಾರದಿಂದ ನಿದ್ರೆಯಿಲ್ಲದೇ ರಾತ್ರಿಗಳನ್ನು ಕಳೆಯುತ್ತಿದ್ದೇವೆ. ಪೋಸ್ಟ್ ಮಾಡಿರುವ ಚಿತ್ರಗಳನ್ನು ಪೊಲೀಸರು ಗಮನಿಸುತ್ತಾರೆ ಎಂದು ಭಾವಿಸಿದ್ದಾಗಿ ಪೋಸ್ಟ್ ಮಾಡಿ, ಅದರೊಂದಿಗೆ ಹಿಂಸಾಚಾರದ ಚಿತ್ರಗಳನ್ನು ಪೋಸ್ಟ್ ಮಾಡಿದ್ದಾರೆ.
 
 ಬಿಜೆಪಿ ನಾಯಕಿ ನೂಪುರ್ ಶರ್ಮಾ ಪೋಸ್ಟ್ ಮಾಡಿದ ಚಿತ್ರಗಳು 2002ರ ಗುಜರಾತ್ ದಂಗೆಯ ಚಿತ್ರಗಳಾಗಿದ್ದು, ಸುಳ್ಳು ವರದಿಗಳನ್ನು ಹರಡುತ್ತಿದ್ದಾರೆ ಎಂದು ಟ್ವಿಟ್ಟರ್ ಖಾತೆದಾರರು ತರಾಟೆಗೆ ತೆಗೆದುಕೊಂಡಿದ್ದಾರೆ.
 
ಟ್ವಿಟ್ಟರ್ ಖಾತೆದಾರರು ಸತ್ಯ ಬಹಿರಂಗಪಡಿಸಿದ್ದರಿಂದ ಉಲ್ಟಾ ಹೊಡೆದ ಶರ್ಮಾ, ಸ್ಥಳ ಯಾವುದೇ ಆಗಲಿ ಬಂಗಾಳದ ಹಿಂಸಾಚಾರವನ್ನು ಪ್ರತಿಫಲಿಸುತ್ತದೆ. ಇವತ್ತಿಗೂ ಬಂಗಾಳದಲ್ಲಿ ಮೌನವೇ ರಾಗವಾಗಿದೆ ಎಂದು ತಿಳಿಸಿದ್ದಾರೆ.
 
ಹಲವು ಟ್ವಿಟ್ಟರ್ ಬಳಕೆದಾರರು ದೆಹಲಿ ಪೊಲೀಸರ ಗಮನವನ್ನು ಟ್ವೀಟರ್‌ಗೆ ಸೆಳೆಯಲು ಪ್ರಯತ್ನಿಸಿ ಕೂಡಲೇ ಬಿಜೆಪಿ ನಾಯಕಿ ನೂಪುರ್ ಶರ್ಮಾರನ್ನು ಬಂಧಿಸಬೇಕೆಂದು ಒತ್ತಾಯಿಸಿದರು.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 
 ಇದರಲ್ಲಿ ಇನ್ನಷ್ಟು ಓದಿ :  
ನೂಪುರ್ ಶರ್ಮಾ ದೆಹಲಿ ಬಿಜೆಪಿ ಪಶ್ಚಿಮ ಬಂಗಾಳ 2002 ಗುಜರಾತ್ ದಂಗೆ ಬಸೀರ್‌ಹಾಟ್ Basirhat Twitter West Bengal 2002 Gujarat Riots Nupur Sharma Delhi Bjp

ಸುದ್ದಿಗಳು

news

ಗನ್ ತೋರಿಸಿ ಪ್ರಿಯತಮನನ್ನು ಎತ್ತೊಯ್ದಾಕೆ ಕೊನೆಗೂ ವಿವಾಹವಾದಳು!

ಲಕ್ನೋ: ಮದುವೆ ಮನೆಯಿಂದಲೇ ಪ್ರಿಯತಮನನ್ನು ಗನ್ ತೋರಿಸಿ ತನ್ನೊಂದಿಗೆ ಕರೆದೊಯ್ದ ರಿವಾಲ್ವರ್ ರಾಣಿ ಕೊನೆಗೂ ...

news

ಪ್ರಜ್ವಲ್ ಹೇಳಿಕೆ ಬಗ್ಗೆ ಕುಮಾರಸ್ವಾಮಿ ಮೊದಲ ಪ್ರತಿಕ್ರಿಯೆ

ನಿಷ್ಠೆಯಿಂದ ದುಡಿದವರಿಗೆ ಹಿಂದೆ ಕುರ್ಚಿ ಹಾಕ್ತಾರೆ, ಸೂಟ್ ಕೇಸ್ ತಂದವರಿಗೆ ಮುಂದೆ ಕುರ್ಚಿ ಹಾಕುತ್ತಾರೆ ...

news

ಸೆಲ್ಫಿ ಹುಚ್ಚು: ದೋಣಿ ಮುಗುಚಿ ಎಂಟು ಯುವಕರ ಸಾವು

ನಾಗ್ಪುರ್: ನಾಗ್ಪುರದ ವೇನಾ ಅಣೆಕಟ್ಟಿನ ಹಿನ್ನಿರಿನಲ್ಲಿ ಫೇಸ್ಬುಕ್ ಲೈವ್ ಮಾಡುತ್ತಾ ಸೆಲ್ಫಿ ...

news

ಬಡತನ ತಾಳದೆ ಈ ಹೆತ್ತಮ್ಮ ಮಾಡಿದ್ದೇನು ಗೊತ್ತಾ?!

ಹೈದರಾಬಾದ್: ಬಡತನ ಮನುಷ್ಯನನ್ನು ಯಾವ ಮಟ್ಟಕ್ಕೆ ಇಳಿಸುತ್ತದೆ ನೋಡಿ. ಬಡತನದ ಬೇಗೆ ತಾಳಲಾದೆ ಇಲ್ಲೊಬ್ಬಳು ...

Widgets Magazine