‘ನೀವೇ ಅಧ್ಯಕ್ಷರಾಗಬೇಕು’ ದೆಹಲಿ ಕಾಂಗ್ರೆಸ್ಸಿಗರಿಂದ ರಾಹುಲ್ ಗೆ ಒತ್ತಾಯ

ನವದೆಹಲಿ, ಭಾನುವಾರ, 8 ಅಕ್ಟೋಬರ್ 2017 (08:30 IST)

ನವದೆಹಲಿ: ಉಪಾಧ್ಯಕ್ಷರಾಗಿರುವ ರಾಹುಲ್ ಗಾಂಧಿ ತಕ್ಷಣವೇ  ಪಕ್ಷದ ಅಧ್ಯಕ್ಷರಾಗಬೇಕೆಂದು ಆಗ್ರಹಿಸಿ ದೆಹಲಿ ಕಾಂಗ್ರೆಸ್ ನಿರ್ಣಯವೊಂದನ್ನು ಮಂಡಿಸಿದೆ.


 
ದೆಹಲಿಗೆ ಕಾಂಗ್ರೆಸ್ ಗೆ ಹೊಸದಾಗಿ ಸೇರ್ಪಡೆಗೊಂಡಿರುವ ಸದಸ್ಯರು ಈ ಒತ್ತಾಯ ಮಾಡಿದ್ದಾರೆ. ರಾಹುಲ್ ಶೀಘ್ರದಲ್ಲೇ ಪಕ್ಷದ ಚುಕ್ಕಾಣಿ ಹಿಡಿಯಬೇಕೆಂದು ಕಾಂಗ್ರೆಸ್ ನ ಹಲವು ನಾಯಕರು ಒತ್ತಾಯಿಸುತ್ತಿರುವ ಬೆನ್ನಲ್ಲೇ ದೆಹಲಿ ಕಾಂಗ್ರೆಸ್ ಈ ನಿರ್ಣಯ ಕೈಗೊಂಡಿದೆ.
 
ವಿಶೇಷವೆಂದರೆ ಈ ನಿರ್ಣಯ ಕೈಗೊಂಡ ಸಭೆಗೆ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ನೇತೃತ್ವ ವಹಿಸಿದ್ದರು. ಮುಂಬರುವ ಲೋಕಸಭೆ ಚುನಾವಣೆಗೆ ಮೊದಲು ಪಕ್ಷವನ್ನು ಸಜ್ಜುಗೊಳಿಸಲು ಶೀಘ್ರದಲ್ಲೇ ರಾಹುಲ್ ಅಧ್ಯಕ್ಷ ಸ್ಥಾನಕ್ಕೇರುವ ಬಗ್ಗೆ ಕಾಂಗ್ರೆಸ್ ಮೂಲಗಳಿಂದ ಒತ್ತಾಯ ಹೆಚ್ಚುತ್ತಿದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ



ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಕಲಬುರ್ಗಿ ಜಿಲ್ಲಾಸ್ಪತ್ರೆಯಲ್ಲಿ ಆಕಸ್ಮಿಕ ಬೆಂಕಿ: ನಾಲ್ವರು ಸಿಬ್ಬಂದಿ ಅಸ್ವಸ್ಥ

ಕಲಬುರ್ಗಿ: ಜಿಲ್ಲಾ ಆಸ್ಪತ್ರೆಯ ಎಕ್ಸ್ ರೇ ತೆಗೆಯುವ ಕೋಣೆಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ನಾಲ್ವರು ...

news

ಶಾಂತಿಭಂಗಕ್ಕೆ ಯತ್ನ: ಓರ್ವ ಗಡಿಪಾರು, ಮತ್ತೋರ್ವನ ಬಂಧನ

ಧಾರವಾಡ: ಕಾನೂನುಬಾಹಿರ ಚಟುವಟಿಕೆ ಹಾಗೂ ಶಾಂತಿಭಂಗ ಮಾಡುತ್ತಿದ್ದ ಇಬ್ಬರ ಮೇಲೆ ಹುಬ್ಬಳ್ಳಿ-ಧಾರವಾಡ ಆಯುಕ್ತ ...

news

ಕಾಂಗ್ರೆಸ್ ಹಿರಿಯ ಮುಖಂಡ ಮಲ್ಲಿಕಾರ್ಜುನ ಖರ್ಗೆ ಅತ್ತೆ ವಿಧಿವಶ

ಕಲಬುರ್ಗಿ: ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅತ್ತೆ ಶಿವಮ್ಮ ದೊಡ್ಮನಿ(95) ಇಹಲೋಕ ...

news

ಬನ್ನೇರುಘಟ್ಟ ಸಫಾರಿಯಲ್ಲಿ ಬಿಳಿ ಹುಲಿ ದಾಳಿಗೆ ಕಾವಲುಗಾರ ಬಲಿ

ಆನೇಕಲ್: ಬನ್ನೇರುಘಟ್ಟ ಜೈವಿಕ ಉದ್ಯಾನದ ಹುಲಿ ಸಫಾರಿಯಲ್ಲಿ ಆಹಾರ ಹಾಕುತ್ತಿದ್ದ ಕಾವಲುಗಾರನ ಮೇಲೆ ಒಂದೂವರೆ ...

Widgets Magazine
Widgets Magazine