Widgets Magazine
Widgets Magazine

ತಂದೆ ಹತ್ಯೆ, ತಾಯಿಗೆ ಹಲ್ಲೆ; 11 ಪೊಲೀಸರನ್ನು ಗಾಯಗೊಳಿಸಿ ಹತ್ಯೆಯಾದ

ನವದೆಹಲಿ, ಸೋಮವಾರ, 9 ಜನವರಿ 2017 (11:26 IST)

Widgets Magazine

ದೇಶವನ್ನೇ ಬೆಚ್ಚಿ ಬೀಳಿಸುವ ಭೀಕರ ಘಟನೆಯೊಂದು ಪೂರ್ವದೆಹಲಿಯಲ್ಲಿ ನಡೆದಿದ್ದು ಪಾಪಿ ಪುತ್ರನೋರ್ವ ತಂದೆಯನ್ನು ಭೀಕರವಾಗಿ ಹತ್ಯೆಗೈದು ತಾಯಿಯ ಮೇಲೆ ಹಲ್ಲೆಗೈದಿದ್ದಲ್ಲದೇ ಸಿಲಿಂಡರ್ ಸ್ಪೋಟಿಸಿ ಮನೆಗೆ ಬೆಂಕಿ ಹಚ್ಚಿದ್ದಾನೆ. ಬಳಿಕ ಸ್ಥಳೀಯರಿಂದಲೇ ಆತ ಕೊಲೆಯಾಗಿದ್ದಾನೆ. 

ಭಾನುವಾರ ರಾಷ್ಟ್ರ ರಾಜಧಾನಿಯ ಮಧು ವಿಹಾರದಲ್ಲಿರುವ ಅಜಂತಾ ಅಪಾರ್ಟಮೆಂಟ್‌ನಲ್ಲಿ ಈ ಘಟನೆ ನಡೆದಿದ್ದು ಘಟನೆಯಲ್ಲಿ 11 ಪೊಲೀಸ್ ಸಿಬ್ಬಂದಿ ಸೇರಿದಂತೆ 13 ಮಂದಿ ಗಾಯಗೊಂಡಿದ್ದಾರೆ.
 
ಘಟನೆ ವಿವರ: ಭಾನುವಾರ ಮಧ್ಯಾಹ್ನ ಈ ಕರಾಳ ಕೃತ್ಯ ನಡೆದಿದ್ದು, ರಾಹುಲ್ ಮತಾ (30) ಎಂಬಾತ ತನ್ನ ತಂದೆ ಆರ್ಥಿಕ ವಲಯದ ನಿವೃತ್ತ ನೌಕರ  ಆರ್.ಪಿ. ಮತಾ ಅವರನ್ನು ಚಾಕುವಿನಿಂದ ಚುಚ್ಚಿ ಬರ್ಬರವಾಗಿ ಕೊಲೆಗೈದಿದ್ದಾನೆ. ತಾಯಿ ರೇಣು ಮತಾ ಪತಿಯನ್ನು ರಕ್ಷಿಸಲು ಬಂದಾಗ ಆಕೆಯ ಮೇಲೂ ಸಹ ಹಲ್ಲೆ ನಡೆಸಿದ್ದಾನೆ. ಮನೆಯಲ್ಲಿ ನಡೆಯುತ್ತಿರುವ ಗಲಾಟೆ ಕೇಳಿ ನೆರೆಹೊರೆಯವರು ಮತ್ತು ಹೌಸಿಂಗ್ ಸೊಸೈಟಿಯ ಭದ್ರತಾ ಸಿಬ್ಬಂದಿ ಸ್ಥಳಕ್ಕೋಡಿ ಬಂದಿದ್ದಾರೆ. ಅವರು ನೀಡಿದ ಮಾಹಿತಿಯ ಮೇರೆಗೆ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದಾರೆ. 
 
ಕಟ್ಟಡದ ನಾಲ್ಕನೇ ಮಹಡಿಯಲ್ಲಿರುವ ಮಾತಾ ನಿವಾಸಕ್ಕೆ ಪೊಲೀಸರು ತಲುಪಿದ್ದಂತೆ ಆರೋಪಿ ಅಡುಗೆ ಕೋಣೆಯಲ್ಲಿ ಕದ ಹಾಕಿಕೊಂಡು ಗ್ಯಾಸ್ ಸಿಲಿಂಡರ್‌ಗೆ ಬೆಂಕಿ ಹಚ್ಚಿ ಸ್ಪೋಟಿಸಿದ್ದಾನೆ. ಪರಿಣಾಮ ರಾಹುಲ್, ಒಬ್ಬ ನೆರೆಮನೆಯಾತ ಮತ್ತು 11 ಪೊಲೀಸರು ಗಾಯಗೊಂಡಿದ್ದಾರೆ.
 
ಗಾಯಗೊಂಡರೂ ಲೆಕ್ಕಿಸದೇ ಪೊಲೀಸರು ಆತನನ್ನು ಬಂಧಿಸಲು ಯತ್ನಿಸಿದ್ದಾರೆ. ಆದರೆ ನೆರೆಹೊರೆಯವರು ಆತನನ್ನು ಹಿಡಿದು ಥಳಿಸಿ ಕೊಂದು ಹಾಕಿದ್ದಾರೆ. 
 
ಮೃತ ಆರೋಪಿ ರಾಹುಲ್ ಅಪರಾಧಿಕ ಹಿನ್ನೆಲೆ ಹೊಂದಿದ್ದು ಕಳೆದ ವರ್ಷ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ನಾಲ್ಕು ದಿನ ತಿಹಾರ್ ಜೈಲಿನಲ್ಲಿದ್ದ.  ಆಸ್ತಿವಿವಾದದ ಹಿನ್ನೆಲೆಯಲ್ಲಿ ಈ ಕೃತ್ಯ ನಡೆದಿದೆ ಎಂದು ಹೇಳಲಾಗುತ್ತದೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ
 Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ಕಾಂಗ್ರೆಸ್ ನಾಯಕನ ಮೇಲೆ ಬಿಜೆಪಿ ಶಾಸಕನ ಪುತ್ರಿಯ ಡೆಡ್ಲಿ ಅಟ್ಯಾಕ್!

ಫೇಸ್‌ಬುಕ್‌ನಲ್ಲಿ ಕೆಟ್ಟದಾಗಿ ಕಮೆಂಟ್ ಮಾಡಿದ್ದಕ್ಕೆ ಕಾಂಗ್ರೆಸ್ ನಾಯಕನ ಮನೆಗೆ ನುಗ್ಗಿ ಬಿಜೆಪಿ ಶಾಸಕನ ...

news

16 ಮಹಿಳೆಯರ ಮೇಲೆ ಪೊಲೀಸರಿಂದ ಅತ್ಯಾಚಾರ

ಇದು ಬೇಲಿಯೇ ಎದ್ದು ಹೊಲ ಮೇಯ್ದ ಕಥೆ, ರಕ್ಷಕರೇ ಭಕ್ಷಕರಾದ ಹೇಯ ಕೃತ್ಯ. ರಕ್ಷಣೆ ನೀಡಬೇಕಾದ ಆರಕ್ಷಕರೇ ...

news

ಬೇರೆ ಮದುವೆಯಾಗಬಾರದೆಂದು ನಾಲಿಗೆ, ತುಟಿ ಕಚ್ಚಿದನಂತೆ!

ಕೆ.ಜಿ ಹಳ್ಳಿಯಲ್ಲಿ ನಡೆದಿದ್ದ ಯುವತಿ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ. ...

news

ಯಾರೇರುತ್ತಾರೆ ಸೈಕಲ್? ಅಪ್ಪಾನಾ, ಮಗನಾ?

ಉತ್ತರ ಪ್ರದೇಶದಲ್ಲಿ ವಿಧಾನಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿದ್ದರೂ ಅಪ್ಪ- ಮಗನ ನಡುವೆ ನಡೆಯುತ್ತಿರುವ ...

Widgets Magazine Widgets Magazine Widgets Magazine