ಗುಜರಾತ್ ರಾಜ್ಯದಲ್ಲಿ ಪ್ರಜಾಪ್ರಭುತ್ವ ಸತ್ತು ಹೋಗಿದೆ: ಪರೇಶ್ ರಾವಲ್

ಬೆಂಗಳೂರು, ಗುರುವಾರ, 3 ಆಗಸ್ಟ್ 2017 (20:34 IST)

ನಿನ್ನೆ ಸಿಆರ್‌ಪಿಎಫ್‌ ಜೊತೆಯಲ್ಲಿ ಬಂದವರು ನಮ್ಮನ್ನು ಹೆದರಿಸಿದ್ದಾರೆ. ಗುಜರಾತ್ ರಾಜ್ಯದಲ್ಲಿ ಪ್ರಜಾಪ್ರಭುತ್ವ ಸತ್ತು ಹೋಗಿದೆ ಎಂದು ಗುಜರಾತ್‌ನ ಕಾಂಗ್ರೆಸ್ ಶಾಸಕ ಪರೇಶ್ ರಾವಲ್ ಕಣ್ಣೀರು ಹಾಕಿದ್ದಾರೆ.
 
ಮಾಧ್ಯಮಗಳ ಎದುರು ಕಣ್ಣೀರು ಹಾಕಿ ಪ್ರತಿಕ್ರಿಯಿಸಿದ ಶಾಸಕ ರಾವಲ್, ಬಿಜೆಪಿಯ ಬೆದರಿಕೆಗಳಿಗೆ ನಾವು ಬಗ್ಗುವುದಿಲ್ಲ. ನಾವೆಲ್ಲಾ ಕಾಂಗ್ರೆಸ್ ಶಾಸಕರು ಒಗ್ಗಟ್ಟಾಗಿದ್ದೇವೆ ಎಂದು ತಿಳಿಸಿದ್ದಾರೆ.
 
ರೆಸಾರ್ಟ್‌ನ ಲಾಬಿಯಲ್ಲಿ ಗನ್ ಹಿಡಿದು ಉಗ್ರರಂತೆ ನಿಂತಿದ್ದ ಸಿಆರ್‌ಪಿಎಫ್ ಯೋಧರು ಬೆದರಿಕೆಯೊಡ್ಡಿದ್ದಾರೆ. ಗುಜರಾತ್‌ಗೆ ಮರಳಲು ಹೆದರಿಕೆಯಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
 
ರಾಜ್ಯಸಭಾ ಚುನಾವಣೆಯಲ್ಲಿ ನಮ್ಮ ಅಭ್ಯರ್ಥಿ ಒಂದು ಮತದಿಂದ ಗೆಲ್ಲುತ್ತಾರೆ. ನಾವು ಶಾಸಕರು ಒಂದಾಗಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸುತ್ತೇವೆ ಎಂದು ಗುಜರಾತ್ ಶಾಸಕ ಪರೇಶ್ ರಾವಲ್ ತಿಳಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಪಾಕ್ ಜತೆ ಮಾತುಕತೆಗೆ ಪ್ರಧಾನಿ ಮೋದಿ ಸಿದ್ದ: ಸುಷ್ಮಾ ಸ್ವರಾಜ್

ನವದೆಹಲಿ: ಪಾಕಿಸ್ತಾನದೊಂದಿಗೆ ಪ್ರಧಾನಿ ಮೋದಿ ಮಾತುಕತೆಗೆ ಮುಂದಾಗಿರುವುದು ಉತ್ತಮ ಬೆಳವಣಿಗೆ ಎಂದು ಕೇಂದ್ರ ...

news

ಗುಜರಾತ್‌ನ ಶಾಸಕರು ಆರೋಗ್ಯವಾಗಿದ್ದಾರೆ: ಜಿ.ಪರಮೇಶ್ವರ್

ಬೆಂಗಳೂರು: ಬಿಡದಿ ರೆಸಾರ್ಟ್‌ನಲ್ಲಿರುವ ಗುಜರಾತ್‌ನ ಎಲ್ಲಾ ಕಾಂಗ್ರೆಸ್ ಶಾಸಕರು ಆರೋಗ್ಯವಾಗಿದ್ದಾರೆ ಎಂದು ...

news

ಐಟಿ ದಾಳಿಗೆ ತಿರುಗೇಟು: ಬಿಎಸ್‌ವೈ-ಕರಂದ್ಲಾಜೆಗೆ ಬಂತು ಸಂಕಷ್ಟ?

ಬೆಂಗಳೂರು: ಇಂಧನ ಖಾತೆ ಸಚಿವ ಡಿ.ಕೆ.ಶಿವಕುಮಾರ್ ಮೇಲಿನ ಐಟಿ ದಾಳಿಗೆ ಪ್ರತಿಯಾಗಿ ಬಿಜೆಪಿ ರಾಜ್ಯಾಧ್ಯಕ್ಷ ...

news

ಡಿಕೆಶಿ ಮನೆಯಲ್ಲಿ ದಾಖಲೆಗಳು ಬಿಟ್ಟರೆ ಬೇರಾವುದೇ ಹಣ, ಒಡವೆ ಸಿಕ್ಕಿಲ್ಲ: ವರದಿ

33 ಗಂಟೆಗಳ ಬಳಿಕವೂ ಇಂಧನ ಸಚಿವ ಡಿ.ಕೆ. ಶಿವಕುಮಾರ್ ಅವರ ಮನೆ ಮೇಲೆ ಐಟಿ ದಾಳಿ ನಡೆಯುತ್ತಿದೆ. ಐಟಿ ...

Widgets Magazine