Widgets Magazine
Widgets Magazine

ಗೋವಾ, ಕರ್ನಾಟಕ ಉಸ್ತುವಾರಿಯಿಂದ ದಿಗ್ವಿಜಯ್ ಸಿಂಗ್ ಗೆ ಕೊಕ್

Bangalore, ಭಾನುವಾರ, 30 ಏಪ್ರಿಲ್ 2017 (07:12 IST)

Widgets Magazine

ಬೆಂಗಳೂರು: ಕಾಂಗ್ರೆಸ್ ಹಿರಿಯ ನಾಯಕ ದಿಗ್ವಿಜಯ್ ಸಿಂಗ್ ಗೆ ಪಕ್ಷ ಶಾಕ್ ಕೊಟ್ಟಿದೆ. ಕರ್ನಾಟಕ ಮತ್ತು ಗೋವಾ ರಾಜ್ಯಗಳ ಉಸ್ತುವಾರಿ ಜವಾಬ್ದಾರಿಯಿಂದ ಅವರಿಗೆ ಕೊಕ್ ನೀಡಲಾಗಿದೆ.


 
ಅವರ ಬದಲಿಯಾಗಿ ಕರ್ನಾಟಕಕ್ಕೆ ಸಂಸದ ಕೆಸಿ ವೇಣುಗೋಪಾಲ್ ಹಾಗೂ ಗೋವಾ ರಾಜ್ಯಕ್ಕೆ ಎ ಚೆಲ್ಲ ಕುಮಾರ್ ಅವರನ್ನು ನೇಮಕ ಮಾಡಲಾಗಿದೆ. ಗೋವಾದಲ್ಲಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದರೂ, ಸರ್ಕಾರ ರಚಿಸುವಲ್ಲಿ ವಿಫಲವಾದ ಹಿನ್ನಲೆಯಲ್ಲಿ ಅವರಿಗೆ ಆ ರಾಜ್ಯದ ಉಸ್ತುವಾರಿಯಿಂದ ಕೊಕ್ ನೀಡಲಾಗಿದೆ.
 
ಇನ್ನು ಕರ್ನಾಟಕದಲ್ಲಿ ಅವರ ಕಾರ್ಯ ವೈಖರಿಯ ಬಗ್ಗೆ ಪಕ್ಷದೊಳಗೇ ಅಸಮಾಧಾನವಿತ್ತು. ಅಲ್ಲದೆ, ಇತ್ತೀಚೆಗೆ ಸಿದ್ಧರಾಮಯ್ಯ ನೇತೃತ್ವದಲ್ಲಿಯೇ ಮುಂದಿನ ಚುನಾವಣೆ ಎದುರಿಸಲಾಗುವುದು ಎಂದು ಏಕಪಕ್ಷೀಯವಾಗಿ ಅವರು ಮಾಧ್ಯಮಗಳಿಗೆ ನೀಡಿದ ಹೇಳಿಕೆಗೆ ರಾಜ್ಯ ನಾಯಕರು ಹೈಕಮಾಂಡ್ ಗೆ ದೂರಿದ್ದರು.
 
ಈ ಎಲ್ಲಾ ಅಸಮಾಧಾನಗಳ ಹಿನ್ನಲೆಯಲ್ಲಿ ಅವರನ್ನು ಜವಾಬ್ದಾರಿಯಿಂದ ಮುಕ್ತಿಗೊಳಿಸಲಾಗಿದೆ. ಇದಲ್ಲದೆ, ಹಲವು ಬಾರಿ ಅವರೂ ಕೂಡಾ ರಾಹುಲ್ ಗಾಂಧಿ ಬಗ್ಗೆ ಪರೋಕ್ಷವಾಗಿ ಯಾರ ಮಾತನ್ನೂ ಕಿವಿ ಮೇಲೆ ಹಾಕಿಕೊಳ್ಳಲ್ಲ ಎಂದಿದ್ದರು.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ದೆಹಲಿ ಶಾಸಕರಿಗೆ ಕೇಜ್ರಿವಾಲ್ ಸಿಎಂ ರಾಜೀನಾಮೆ ಬೇಕಂತೆ!

ನವದೆಹಲಿ: ದೆಹಲಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಹೀನಾಯ ಸೋಲುಂಡ ಮೇಲೆ ಸಿಎಂ ಅರವಿಂದ್ ಕೇಜ್ರಿವಾಲ್ ...

news

ಬಹಿರಂಗ ಸಭೆ ನಡೆಸುವ ಮೂಲಕ ಈಶ್ವರಪ್ಪ ಪಕ್ಷಕ್ಕೆ ಡ್ಯಾಮೇಜ್ ಮಾಡಿದ್ದಾರೆ: ಆರ್. ಅಶೋಕ್

ಬಹಿರಂಗ ಸಭೆ ನಡೆಸುವ ಮೂಲಕ ಈಶ್ವರಪ್ಪ ಪಕ್ಷಕ್ಕೆ ಡ್ಯಾಮೇಜ್ ಮಾಡಿದ್ದಾರೆ ಎಂದು ಬೆಂಗಳೂರಿನ ಬಿಜೆಪಿ ...

news

ತ್ರಿವಳಿ ತಲಾಖ್ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ ಉತ್ತರ ಪ್ರದೇಶದ ಸಚಿವ

ತ್ರಿವಳಿ ತಲಾಖ್ ಬಗ್ಗೆ ಚರ್ಚೆ ನಡೆಯುತ್ತಿರುವ ಬೆನ್ನಲ್ಲೇ ಉತ್ತರ ಪ್ರದೇಶದ ಸಚಿವ ಸ್ವಾಮಿ ಪ್ರಸಾದ್ ಮೌರ್ಯ ...

news

ಬೆಳಗಾವಿಯ ಹಂಗರಗಾದಲ್ಲಿ ವಿಚಿತ್ರ ಘಟನೆ: ಮನೆಯಲ್ಲಿ ಕುದಿಯುತ್ತಿದೆ ಭೂಮಿ

ಮನೆಯ ನಿರ್ದಿಷ್ಟ ಜಾಗದಲ್ಲಿ ಭೂಮಿ ಕುದಿಯುತ್ತಿರುವ ವಿಚಿತ್ರ ಪ್ರಕರಣ ಬೆಳಗಾವಿ ಜಿಲ್ಲೆಯ ಹಂಗರಗಾ ...

Widgets Magazine Widgets Magazine Widgets Magazine