ಶಶಿಕಲಾ, ದಿನಕರನ್`ಗೆ ಪನ್ನೀರ್-ಪಳನಿ ಶಾಕ್

ಚೆನ್ನೈ, ಮಂಗಳವಾರ, 18 ಏಪ್ರಿಲ್ 2017 (11:34 IST)

Widgets Magazine

ಮಹತ್ವದ ರಾಜಕೀಯ ಬೆಳವಣಿಗೆಯಲ್ಲಿ ಪಕ್ಷದ ಎರಡು ಎಲೆ ಚಿಹ್ನೆ ಉಳಿಸಿಕೊಳ್ಳಲು ಅಣ್ಣಾಡಿಎಂಕೆಯ ಪನ್ನೀರ್ ಸೆಲ್ವಂ ಮತ್ತು ಸಿಎಂ ಪಳನಿಸ್ವಾಮಿ ಬಣ ಒಂದಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಮಧ್ಯಾಹ್ನ ಎರಡೂ ಬಣಗಳ ಶಾಸಕರ ಸಭೆ ನಡೆಯಲಿದ್ದು, ಅಂತಿಮ ನಿರ್ಧಾರಕ್ಕೆ ಬರುವ ಸಾಧ್ಯತೆ ಇದೆ ಎನ್ನಲಾಗಿದೆ.


ಪಕ್ಷದ ಉಪ ಕಾರ್ಯದರ್ಶಿ ಟಿಟಿವಿ ದಿನಕರನ್ ವಿರುದ್ಧ ಪಕ್ಷದಲ್ಲಿ ಸುಪ್ತವಾಗಿದ್ದ ಆಕ್ರೋಶ ಈಗ ಭುಗಿಲೆದ್ದಿದೆ. ಕಳೆದ ರಾತ್ರಿಯೇ 25 ಸಚಿವರು ಮತ್ತು ಶಾಸಕರನ್ನೊಳಗೊಂಡ ಸಭೆ ನಡೆದಿದ್ದು, ಎರಡೂ ಬಣಗಳು ಒಟ್ಟಾಗಿ ಹೋಗುವ ನಿರ್ಧಾರ ಕೈಗೊಳ್ಳಲಾಗಿದೆ ಎನ್ನಲಾಗಿದೆ.

ಆದರೆ, ಪನ್ನೀರ್ ಸೆಲ್ವಂ ಬಣದ ವಿಲೀನಕ್ಕೆ ಶಶಿಕಲಾ ಮತ್ತು ದಿನಕರನ್ ವಿರೋಧಿಸುವ ಸಾಧ್ಯತೆ ಇದ್ದು, ಅವರನ್ನೇ ಪಕ್ಷದಿಂದ ಉಚ್ಚಾಟಿಸಲಾಗುತ್ತೆ ಎಂಬ ಮಾತುಗಳು ಕೇಳಿಬರುತ್ತಿವೆ. ಪನ್ನೀರ್ ಸೆಲ್ವಂ ಪಕ್ಷದ ಪ್ರಧಾನ ಕಾರ್ಯದರ್ಶಿ ಹುದ್ದೆ ನೀಡಿ ವಾಪಸ್ ಕರೆ ತರುವ ಯತ್ನ ನಡೆದಿದೆ ಎನ್ನಲಾಗಿದೆ.

ಉಪಚುನಾವಣೆಯ ಭ್ರಷ್ಟಾಚಾರ ಮತ್ತು ಚಿಹ್ನೆಗಾಗಿ ಚುನಾವಣಾ ಆಯೋಗಕ್ಕೇ ಲಂಚ ನೀಡಿದ ಆರೋಪ ಎದುರಿಸುತ್ತಿರುವ ಟಿಟಿವಿ ದಿನಕರನ್`ನಿಂದಾಗಿ ಪಕ್ಷದ ಇಮೇಜ್`ಗೆ ಧಕ್ಕೆಯಾಗಿದೆ. ಹೀಗಾಗಿ, ಅವರನ್ನ ಹೊರಹಾಕಿ, ಪನ್ನೀರ್ ಸೆಲ್ವಂ ಬಣವನ್ನ ವಾಪಸ್ ಕರೆ ತಂದು ಎರಡು ಎಲೆ ಚಿಹ್ನೆ ವಾಪಸ್ ಪಡೆಯುವುದು ಮುಖಂಡರ ಉದ್ದೇಶವಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿWidgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ಕೆಪಿಸಿಸಿ ಹುದ್ದೆ ಖಾಲಿ ಇಲ್ಲ, ಲಿಂಗಾಯತರು ಕಾಂಗ್ರೆಸ್ ಜೊತೆಗಿದ್ದಾರೆ: ದಿಗ್ವಿಜಯ್ ಸಿಂಗ್

ಕೆಪಿಸಿಸಿ ಹುದ್ದೆ ಖಾಲಿ ಇಲ್ಲ ಎಂದು ಹೇಳುವ ಮೂಲಕ ರಾಜ್ಯ ಕಾಂಗ್ರೆಸ್ ಉಸ್ತುವಾರಿ ದಿಗ್ವಿಜಯ್ ಸಿಂಗ್ ...

news

ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಭೂಕಂಪನದ ಅನುಭವ

ಬಿಸಿಲ ಬೇಗೆ ಹೆಚ್ಚುತ್ತಿರುವ ಬೆನ್ನಲ್ಲೇ ರಾಜ್ಯದ ಹಲವೆಡೆ ಭೂಕಂಪನದ ಅನುಭವವಾಗಿದೆ. ರಾಮನಗರ, ಕನಕಪುರ, ...

news

ತಮಿಳುನಾಡಿನಲ್ಲಿ ಮತ್ತೊಂದು ರಾಜಕೀಯ ಕ್ಷಿಪ್ರ ಕ್ರಾಂತಿ!

ಚೆನ್ನೈ: ತಮಳುನಾಡಿನಲ್ಲಿ ಮತ್ತೆ ರಾಜಕೀಯ ಮೇಲಾಟ ನಡೆಯುವ ಸ್ಪಷ್ಟ ಸೂಚನೆ ಲಭಿಸಿದೆ. ಎಐಎಡಿಎಂಕೆ ಶಶಿಕಲಾ ...

news

ಕೊನೆಗೂ ಭಾರತೀಯರ ಪ್ರತಿಭಟನೆಗೆ ಬೆಚ್ಚಿದ ಸ್ನ್ಯಾಪ್ ಚಾಟ್

ನವದೆಹಲಿ: ಭಾರತ ಒಂದು ಬಡರಾಷ್ಟ್ರ ಎಂದು ಸ್ನ್ಯಾಪ್ ಚಾಟ್ ಸಿಇಒ ಇವಾನ್ ಸ್ಪಿಗಲ್ ಹೇಳಿದ್ದರೆಂದು ಮಾಜಿ ...

Widgets Magazine