ವಿಶ್ವಾಸಮತಯಾಚನೆಗೆ ಸೂಚಿಸದಿದ್ದರೆ ಕಾನೂನು ಹೋರಾಟ: ಸ್ಟ್ಯಾಲಿನ್

ಚೆನ್ನೈ, ಭಾನುವಾರ, 10 ಸೆಪ್ಟಂಬರ್ 2017 (19:56 IST)

Widgets Magazine

ತಮಿಳುನಾಡಿನಲ್ಲಿ ಮತ್ತೆ ರಾಜಕೀಯ ಮೇಲಾಟಗಳು ಗರಿಗೆದರಿವೆ. ಸಿಎಂ ಪಳನಿಸ್ವಾಮಿಯವರನ್ನ ವಿಶ್ವಾಸಮತಯಾಚನೆಗೆ ರಾಜ್ಯಪಾಲರು ಸೂಚಿಸದಿದ್ದರೆ ಕಾನೂನು ಹೋರಾಟ ನಡೆಸುವುದಾಗಿ ಡಿಎಂಕೆ ಮುಖಂಡ ಎಂ.ಕೆ. ಸ್ಟಾಲಿನ್ ಹೇಳಿದ್ದಾರೆ.
 


ಚೆನ್ನೈನಲ್ಲಿ ರಾಜ್ಯಪಾಲರಿಗೆ ಮನವಿ ಸಲ್ಲಿಸಿದ ಸ್ಟಾಲಿನ್ ವಿಶ್ವಾಸಮತ ಯಾಚನೆಗೆ ಸೂಚಿಸುವಂತೆ ಕೋರಿದರು. ಗವರ್ನರ್ ಭೇಟಿ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಸ್ಟಾಲಿನ್, 2ನೇ ಬಾರಿಗೆ ರಾಜ್ಯಪಾಲ ವಿದ್ಯಾಸಾಗರ್ ರಾವ್`ಗೆ ಮನವಿ ಸಲ್ಲಿಸಿದ್ದೇನೆ. ಇದೇ ಕೊನೆಯ ಮನವಿ. ವಿಶ್ವಾಸಮತ ಯಾಚನೆಗೆ ಸೂಚಿಸಲು ಒಂದು ವಾರ ಸಮಯ ನೀಡಿದ್ದೇವೆ. ಮುಂದೆ ಕೋರ್ಟ್`ಗೆ ಹೋಗುತ್ತೇವೆ ಎಂದು ಸ್ಟಾಲಿನ್ ಹೇಳಿದ್ದಾರೆ.
 
ಇತ್ತೀಚೆಗೆ ಅಣ್ಣಾಡಿಎಂಕೆಯ ಪಳನಿಸ್ವಾಮಿ ಮತ್ತು ಪನ್ನೀರ್ ಸೆಲ್ವಂ ಬಣ ಒಂದಾದ ಬಳಿಕ ಮೂಲೆಗುಂಪಾಗಿದ್ದ ಶಶಿಕಲಾ ಆಪ್ತ ಟಿಟಿವಿ ದಿನಕರನ್ ಬಹಿರಂಗ ಬಂಡಾಯದ ಬಾವುಟ ಹಾರಿಸಿದ್ದರು. ರಾಜ್ಯಪಾಲರನ್ನ ಭೇಟಿ ಮಾಡಿ ನಮ್ಮ ಬೆಂಬಲ ಪಳನಿಸ್ವಾಮಿಗೆ ಇಲ್ಲವೆಂದು ಮನವಿ ತಿಳಿಸಿದ್ದರು. ಹೀಗಾಗಿ, ಪಳನಿಸ್ವಾಮಿ ಸರ್ಕಾರಕ್ಕೆ ಬಹುಮತ ಇಲ್ಲವೆಂಬುದು ಸ್ಟಾಲಿನ್ ವಾದ. ಈ ಮಧ್ಯೆ, ಇಬ್ಬರ ಜಗಳ ಮೂರನೇಯವರಿಗೆ ಲಾಭ ಎಂಬಂತೆ 89 ಶಾಸಕರನ್ನ ಹೊಂದಿರುವ ಡಿಎಂಕೆ, ಕಾಂಗ್ರೆಸ್, ಅಣ್ಣಾಡಿಎಂಕೆಯ ಬಂಡಾಯ ಶಾಸಕರ ಬೆಂಬಲ ಪಡೆದು ಸರ್ಕಾರ ರಚಿಸುವ ಕನಸು ಕಾಣುತ್ತಿದೆ ಎಂಬ ವರದಿಗಳು ಕೇಳಿಬರುತ್ತಿವೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿWidgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ವಿಷಾನಿಲ ದಾಳಿಗೆ ಉಗ್ರರ ಸಂಚು: ದೇಶಾದ್ಯಂತ ಹೈಅಲರ್ಟ್

ಏರ್ ಪೋರ್ಟ್, ಮೆಟ್ರೋ ರೈಲು, ರೈಲು ಮತ್ತು ಬಸ್ ನಿಲ್ದಾಣಗಳಲ್ಲಿ ಭದ್ರತೆ ಹೆಚ್ಚಿಸುವಂತೆ ಕೇಂದ್ರ ಗೃಹ ...

news

ಗೌರಿ ಲಂಕೇಶ್ ಹಂತಕರ ಪತ್ತೆಗೆ ಪೊಲೀಸರ ತಂತ್ರ

ಬೆಂಗಳೂರು: ಪತ್ರಕರ್ತೆ ಗೌರಿ ಲಂಕೇಶ್ ಹಂತಕರನ್ನು ಪತ್ತೆಹಚ್ಚಲು ಪೊಲೀಸರು ಶತಾಯಗತಾಯ ಯತ್ನಿಸುತ್ತಿದ್ದು, ...

news

ಪ್ರಧಾನಿ ಮೋದಿ ಚಿತ್ರ ಬರೆದ ತಪ್ಪಿಗೆ ಈಕೆಗೆ ಸಿಕ್ಕ ಶಿಕ್ಷೆಯೇನು ಗೊತ್ತಾ?

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಮತ್ತು ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಚಿತ್ರ ಬರೆದ ತಪ್ಪಿಗೆ ...

news

ಮೊಬೈಲ್ ಗೆ ಆಧಾರ್ ಲಿಂಕ್ ಮಾಡಿಲ್ಲವೇ? ಹಾಗಿದ್ದರೆ ತಕ್ಷಣ ಮಾಡಿಸಿ!

ನವದೆಹಲಿ: ಮೊಬೈಲ್ ಸಂಖ್ಯೆಗೆ ಆಧಾರ್ ಲಿಂಕ್ ಮಾಡಬೇಕೆಂದು ಸರ್ಕಾರ ಕೆಲವು ದಿನಗಳ ಹಿಂದೆಯೇ ಆದೇಶಿಸಿತ್ತು. ...

Widgets Magazine