ತಮಿಳುನಾಡು ಸ್ಪೀಕರ್ ಚೇರ್‌ನ್ನು ಮ್ಯೂಸಿಕ್ ಚೇರ್‌ ಆಗಿಸಿದ ಡಿಎಂಕೆ ಶಾಸಕರು

ಚೆನ್ನೈ, ಶನಿವಾರ, 18 ಫೆಬ್ರವರಿ 2017 (13:07 IST)

Widgets Magazine

ಸ್ಪೀಕರ್​ ಮೈಕುಗಳನ್ನು ಕಿತ್ತೆಸೆದು ಆರ್ಭಟಿಸಿದ ಶಾಸಕರು, ಅವಾಚ್ಯ ಶಬ್ದಗಳಿಂದ ಸ್ಪೀಕರ್‌ರನ್ನು ನಿಂದಿಸಿದ್ದಾರೆ.ಸ್ಪೀಕರ್‌ರನ್ನು ಹೊರಗೆ ತಳ್ಳಿ ಅವರ ಖುರ್ಚಿಯ ಮೇಲೆ ಸರದಿಯಂತೆ ಶಾಸಕರು ಕುಳಿತು ಮ್ಯೂಸಿಕ್ ಚೇರ್ ಮಾಡಿಕೊಂಡು ಪ್ರಜಾಪ್ರಭಉತ್ವಕ್ಕೆ ಮಸಿ ಬಳೆದಿದ್ದಾರೆ. 

ಶಾಸಕರ ಕೂಗಾಟ, ಹೊಡೆದಾಟ, ಬೈಗುಳಗಳ ಅಬ್ಬರಕ್ಕೆ ಸದನದಲ್ಲಿದ್ದ ಕುರ್ಚಿಗಳು ಪುಡಿಪುಡಿಯಾಗಿದ್ದು ಮೇಜುಗಳು ಜಖಂಗೊಂಡಿದ್ದು, ಒಬ್ಬ ಅಟೆಂಡರ್‌ಗೆ ಗಾಯವಾಗಿದೆ. ಅಂಬುಲೆನ್ಸ್‌ನಲ್ಲಿ ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.  
 
ಸದನ ಆರಂಭವಾಗುತ್ತಿದ್ದಂತೆ ಪನ್ನೀರ್ ಸೆಲ್ವಂ ಬಣ, ಡಿಎಂಕೆ, ಹಾಗೂ ಇತರ ವಿಪಕ್ಷಗಳು ರಹಸ್ಯ ಮತದಾನ ನಡೆಸುವಂತೆ ಆಗ್ರಹಿಸಿದ್ದಾರೆ. ಆದರೆ ಅದಕ್ಕೊಪ್ಪದ ಸ್ಪೀಕರ್ ಧ್ವನಿ ಮತದಾನ ನಡೆಸಲು ಆರಂಭಿಸಿದ್ದಾರೆ.
 
ಸಭಾಪತಿಯ ವರ್ತನೆಯಿಂದ ಆಕ್ರೋಶಗೊಂಡ ಶಾಸಕರು ಮೈಕ್ ಕಿತ್ತುಹಾಕಿ ಟೇಬಲ್‌ನ್ನು ಅವರ ಮೇಲೆಯೇ ತಳ್ಳಿದ್ದಾರೆ ಎಂದು ಮೂಲಗಳು ತಿಳಿಸಿವೆ.
 
ಇದೀಗ ಸಭಾಪತಿ ಧನಪಾಲ್, ಡಿಎಂಕೆ ಮತ್ತು ಎಐಎಡಿಎಂಕೆ ಶಾಸಕರೊಂದಿಗೆ ವಿಶ್ವಾಸಮತಯಾಚನೆ ಕಲಾಪವನ್ನು ಮುಂದೂಡುವ ಕುರಿತಂತೆ ಚರ್ಚೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

ಫೇಸ್‌ಬುಕ್ ಸುಂದರಿಯರಿಂದ ದೂರವಿರಿ, ಇಲ್ಲ ನಿಮ್ಮ ಶಿರಚ್ಛೇದನ ಖಚಿತ

ಫೇಸ್‌ಬುಕ್‌ನಲ್ಲಿ ಸುಂದರ ಮುಖಾರವಿಂದದ ಹುಡುಗಿಯರ ಜತೆ ಸಲಿಗೆಯಿಂದಿದ್ದೀರಾ? ನಿಮ್ಮ ಉತ್ತರ ಹೌದೆಂದಾದಲ್ಲಿ ...

news

ಹೆಲಿಕಾಪ್ಟರ್ ಇಳಿಸಿ ಅಡ್ರಸ್ ಕೇಳಿದ ಪೈಲಟ್

ವಿಮಾನ ಮತ್ತು ಹೆಲಿಕಾಪ್ಟರ್‌ಗಲೂ ಮೊದಲೇ ತಮ್ಮ ನಿರ್ದೇಶಿತ ಗುರಿಯನ್ನು ನಿರ್ಧಿರಿಕೊಂಡು ಏರ್ ಟ್ರಾಫಿಕ್ ...

news

ಆನ್‍ಲೈನ್‍ನಲ್ಲಿ ಅಪರಿಚಿತರ ಗೆಳೆತನ ಬೆಳೆಸುವಾಗ ಇರಲಿ ಎಚ್ಚರ

ಅರುಷಾ ಕಂಜಿಲಾಲ್ ಎಂಬ ಸಾಫ್ಟ್‌ವೇರ್ ತಂತ್ರಜ್ಞೆ, ತಮ್ಮ 13 ವರ್ಷದ ಮಗಳು, ಆಕೆಯ ಇತರೆ ಗೆಳತಿಯರಂತಲ್ಲ, ...

news

ವಿಶ್ವಾಸಮತಯಾಚನೆ: ಸ್ಪೀಕರ್ ಮೈಕ್ ಕಿತ್ತು, ಟೇಬಲ್ ಪುಡಿ ಪುಡಿ ಮಾಡಿದ ವಿಪಕ್ಷಗಳು

ಚೆನ್ನೈ: ತಮಿಳುನಾಡು ವಿಧಾನಸಭೆಯ ಸಭಾಪತಿ ಧನಪಾಲ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ವಿಪಕ್ಷಗಳು ಸ್ಪೀಕರ್ ...

Widgets Magazine