ಅಣ್ಣನನ್ನು ಮದುವೆಯಾದ ಮಗಳಿಗೆ ತಾಯಿ ಮಾಡಿದ್ದೇನು ಗೊತ್ತಾ?

ಚಂಡೀಘಡ, ಸೋಮವಾರ, 14 ಜನವರಿ 2019 (07:22 IST)

: ಸಂಬಂಧದಲ್ಲಿ ಅಣ್ಣನಾದ ವ್ಯಕ್ತಿಯನ್ನು ಮದುವೆಯಾದ ಕಾರಣಕ್ಕೆ ತಾಯಿಯೇ ಮಗಳ  ಮೇಲೆ ಚಾಕುವಿನಿಂದ ಹಲ್ಲೆ ಮಾಡಿದ ಘಟನೆ ಹರ್ಯಾಣದ ಪಾಣಿಪಾತ್‍ ನಲ್ಲಿ ನಡೆದಿದೆ.


ಅಮಂದೀಪ್ ಕೌರ್ ಹಲ್ಲೆಗೊಳಗಾದ ಯುವತಿ. ಪರಮಜಿತ್ ಕೌರ್ ಮಗಳ ಮೇಲೆ ಹಲ್ಲೆ ಮಾಡಿದ ತಾಯಿ. ಅಮಂದೀಪ್ ಕೌರ್ 2018ರ ಮಾರ್ಚ್ 21ರಂದು ಸಂಬಂಧದಲ್ಲಿ ಅಣ್ಣನಾದ ಜಸ್ವಿಂದರ್ ಸಿಂಗ್‍ನನ್ನು ಮದುವೆಯಾಗಿದ್ದಳು. ಮದುವೆಯ ನಂತರ ಇಬ್ಬರು ಕುಟುಂಬದವರಿಂದ ದೂರ ವಾಸಿಸುತ್ತಿದ್ದರು.


ಆದರೆ ಜನವರಿ 9 ರಂದು ಸಂಜೆ ಕೌರ್ ಮನೆಯಲ್ಲಿ ಒಬ್ಬಳೇ ಇದ್ದಾಗ ತಾಯಿ ಪರಮಜಿತ್ ಕೌರ್ ತನ್ನ ಕುಟುಂಬದವರ ಜೊತೆ ಬಂದು ಮಗಳ ಮೇಲೆ ಚಾಕುವಿನಿಂದ ಹಲ್ಲೆ ಮಾಡಿದ್ದಾಳೆ. ತಕ್ಷಣ ನೆರೆಹೊರೆಯವರು ಬಂದು ಆಕೆಯನ್ನು ಸಮೀಪದ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ವೈದ್ಯರು ಆಕೆಯ ಸ್ಥಿತಿ ತುಂಬಾ ಗಂಭೀರವಾಗಿದ್ದು, ಆಕೆಯನ್ನು ಚಂಡೀಗಢಕ್ಕೆ ಕರೆದುಕೊಂಡು ಹೋಗುವಂತೆ ತಿಳಿಸಿದ್ದಾರೆ.


ಈ ಸಂಬಂಧ ಅಮಂದೀಪ್ ಪತಿ ಜಸ್ವಿಂದರ್ ಸಿಂಗ್ ಆಕೆಯ ಕುಟುಂಬಸ್ಥರ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾನೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.
 

 ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಅತ್ಯಾಚಾರ ಸಂತ್ರಸ್ತೆ ಕೋರ್ಟ್ ನಲ್ಲಿ ಸಾಕ್ಷಿ ಹೇಳಬಾರದೆಂದು ದುಷ್ಕರ್ಮಿಗಳು ಮಾಡಿದ್ದೇನು ಗೊತ್ತಾ?

ಗುಜರಾತ್ : ನ್ಯಾಯಾಲಯದಲ್ಲಿ ಸಾಕ್ಷಿ ಹೇಳಬಾರದು ಎಂದು ಅತ್ಯಾಚಾರ ಸಂತ್ರಸ್ತೆಗೆ ದುಷ್ಕರ್ಮಿಗಳು ...

news

ದೇವರ ಮೊರೆ ಹೋದ ಪುಟ್ಟರಂಗಶೆಟ್ಟಿ…

ವಿಧಾನಸೌಧದಲ್ಲಿ ಹಣ ಸಿಕ್ಕ ಪ್ರಕರಣದಿಂದ ರಾಜೀನಾಮೆ ನೀಡಬೇಕೆನ್ನುವ ವಿರೋಧ ಪಕ್ಷಗಳ ಒತ್ತಡ ಹಿನ್ನೆಲೆಯಲ್ಲಿ ...

news

ನಮೋ ಭಾರತ್ ಸಂಘಟನೆಯಿಂದ ರನ್ ಫಾರ್‌ ಮೋದಿ

ನಮೋ ಭಾರತ್ ಸಂಘಟನೆಯಿಂದ ರನ್ ಫಾರ್‌ ಮೋದಿ ಜಾಥಾ ಆಯೋಜನೆ ಮಾಡಲಾಗಿತ್ತು.

news

ದೇಗುಲ ಮುಂಭಾಗ ಜೂಜಾಟ: 9 ಮಂದಿ ಅಂದರ್

ಖಾಸಗಿ ಜಮೀನೊಂದರಲ್ಲಿ ಅಂದರ್ ಬಾಹರ್ ಆಡುತ್ತಿದ್ದ 9 ಆರೋಪಿಗಳನ್ನು ಪೊಲೀಸರು ಅಂದರ್ ಮಾಡಿದ್ದಾರೆ.