ಮಗನ ಮೇಲೆ ಬಂದೂಕಿನಿಂದ ಗುರಿಯಿಟ್ಟಿದ್ದನ್ನು ಕಂಡ ತಾಯಿಗೆ ಆಗಿದ್ದೇನು ಗೊತ್ತಾ?

ಭೋಪಾಲ್| pavithra| Last Modified ಶನಿವಾರ, 2 ಜನವರಿ 2021 (08:26 IST)
ಭೋಪಾಲ್ : ವ್ಯಕ್ತಿಯೊಬ್ಬ ಮಗನ  ಮೇಲೆ ಬಂದೂಕು ಇಟ್ಟು ಬೆದರಿಸಿದ್ದನ್ನು ಕಂಡು ತಾಯಿ ಹೃದಯಾಘಾತದಿಂದ ಸಾವನಪ್ಪಿದ ಘಟನೆ ಮಧ್ಯ ಪ್ರದೇಶದ ಭೋಪಾಲ್ ನಲ್ಲಿ ನಡೆದಿದೆ.

ಮೃತ ಮಹಿಳೆಯ ಅಪ್ರಾಪ್ತ ಪಕ್ಕದ ಮನೆಯ ಯುವಕನ ಜೊತೆ ಜಗಳವಾಡುತ್ತಿದ್ದ ಆ ವೇಳೆ ಯುವಕ ಬಂದೂಕು ತಂದು ಹುಡುಗನ ಕಡೆಗೆ ಗುರಿಯಿಟ್ಟು ಸಾಯಿಸುವುದಾಗಿ ಬೆದರಿಕೆ ಹಾಕಿದ್ದಾನೆ. ಇದನ್ನು ಕಂಡ ತಾಯಿ ಹೃದಯಾಘಾತದಿಂದ ಕುಸಿದು ಬಿದ್ದು ಸಾವನಪ್ಪಿದ್ದಾಳೆ

ಈ ಬಗ್ಗೆ ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ, ಯಾರನ್ನೂ ಬಂಧಿಸಿಲ್ಲ ಎನ್ನಲಾಗಿದೆ.ಇದರಲ್ಲಿ ಇನ್ನಷ್ಟು ಓದಿ :