ಪತ್ನಿ, ಪ್ರಿಯಕರನ ಜೊತೆ ರೂಮಿನಲ್ಲಿರುವುದನ್ನು ಕಂಡು ಪತಿ ಮಾಡಿದ್ದೇನು ಗೊತ್ತಾ?

ಹೈದರಾಬಾದ್, ಗುರುವಾರ, 3 ಜನವರಿ 2019 (06:39 IST)

ಹೈದರಾಬಾದ್ : ತನ್ನ ಪತ್ನಿ, ಪ್ರಿಯಕರನ ಜೊತೆ ರೂಮಿನಲ್ಲಿರುವುದನ್ನು ಕಂಡು ಪತಿ ರೂಮಿನಲ್ಲಿ ಅವರನ್ನು ಕೂಡಿಹಾಕಿ ಬೆಂಕಿ ಹಚ್ಚಿರುವ ಘಟನೆ ತೆಲಂಗಾಣದ ಚೆವೆಲ್ಲಾದಲ್ಲಿ ನಡೆದಿದೆ.


ರವಿ ಬೆಂಕಿ ಹಚ್ಚಿದ ಪತಿ. ಈತ ಭಾಗ್ಯಲಕ್ಷ್ಮಿಯ ಜೊತೆ 10 ವರ್ಷಗಳ ಹಿಂದೆ ಮದುವೆಯಾಗಿದ್ದು, ಈ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಆದರೆ ಜಗಳವಾಡಿಕೊಂಡು ಇಬ್ಬರು ಬೇರೆ ಬೇರೆಯಾಗಿ ವಾಸಿಸುತ್ತಿದ್ದರು. ಆದರೆ ಪತ್ನಿ ಭಾಗ್ಯಲಕ್ಷ್ಮಿ ಬೇರೆಯವರ ಜೊತೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದಳು. ಈ ವಿಚಾರ ತಿಳಿದ ರವಿ ಭಾನುವಾರ ಬೆಳಗ್ಗೆ ಪತ್ನಿಯ ಮನೆಗೆ ಹೋಗಿದಾಗ ಅಲ್ಲಿ ಭಾಗ್ಯಲಕ್ಷ್ಮಿ ಆಕೆಯ ಪ್ರಿಯತಮನ ಜೊತೆ ರೂಮಿನಲ್ಲಿ ಇದ್ದಳು. ಇದನ್ನು ನೋಡಿದ ರವಿ ರೂಮನ್ನು ಹೊರಗಿನಿಂದ ಲಾಕ್ ಮಾಡಿಕೊಂಡು ಮಕ್ಕಳನ್ನು ಮನೆಯಿಂದ ಹೊರಗಡೆ ಕರೆದುಕೊಂಡು ಬಂದು ರೂಮಿಗೆ ಪೆಟ್ರೋಲ್ ಹಾಕಿ ಬೆಂಕಿ ಹಚ್ಚಿದ್ದಾನೆ.


ತಕ್ಷಣ ನೆರೆಹೊರೆಯವರು ಬಂದು ಬಾಗಿಲು ಮುರಿದು ಮನೆಯೊಳಗೆ ಹೋಗಿ ಗಂಭೀರವಾಗಿ ಸುಟ್ಟು ಹೋದ ಸ್ಥಿತಿಯಲ್ಲಿರುವ ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ನಂತರ ಅಗ್ನಿಶಾಮಕ ದಳ ಸ್ಥಳಕ್ಕೆ ಬಂದು ಬೆಂಕಿ ನಂದಿಸಿದ್ದಾರೆ. ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿ ಪ್ರಕರಣವನ್ನು ದಾಖಲಿಸಿಕೊಂಡಿದ್ದು, ತನಿಖೆಯನ್ನು ಮುಂದುವರಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.
 ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಟಾಟಾ ಸಫಾರಿ ಕಾರು ಢಿಕ್ಕಿ: ಮೂವರ ಸಾವು

ಟಾಟಾ ಸಫಾರಿ ಕಾರೊಂದು ಡಿವೈಡರ್‌ಗೆ ಢಿಕ್ಕಿ ಹೊಡೆದ ಪರಿಣಾಮ ಮೂವರು ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ...

news

ವಿದ್ಯಾರ್ಥಿ ಮೇಲೆ ಯುವಕನಿಂದ ಲೈಂಗಿಕ ದೌರ್ಜನ್ಯ

ವಿದ್ಯಾರ್ಥಿಯೊಬ್ಬನ ಮೇಲೆ ಯುವಕನೊಬ್ಬ ಲೈಂಗಿಕ ದೌರ್ಜನ್ಯ ಎಸಗಿರುವ ಪ್ರಕರಣ ವರದಿಯಾಗಿದೆ.

news

ಮಾಜಿ ಸಚಿವ ರಮೇಶ್ ಜಾರಕಿಹೊಳಿ ಪ್ರತ್ಯಕ್ಷ: ನಡೆ ನಿಗೂಢ

ಕಾಂಗ್ರೆಸ್ – ಜೆಡಿಎಸ್ ಮೈತ್ರಿ ಸರಕಾರದ ಸಂಪುಟದಿಂದ ಕೈ ಬಿಟ್ಟ ಹಿನ್ನೆಲೆಯಲ್ಲಿ ಯಾರ ಸಂಪರ್ಕಕ್ಕೂ ಸಿಗದಂತೆ ...

news

ಕಲಾಪ್ರೇಮಿಗಳ ಹಬ್ಬ: 6 ರಂದು ಚಿತ್ರಸಂತೆ

ರಾಜಧಾನಿಯ ಕುಮಾರಕೃಪ ರಸ್ತೆ ಮತ್ತು ಚಿತ್ರಕಲಾ ಪರಿಷತ್‌ನ ಆವರಣದಲ್ಲಿ ಜನೇವರಿ 6 ರಂದು ಚಿತ್ರಸಂತೆ ...