ಪ್ರೀತಿಸಿದ ಹುಡುಗನ ಜೊತೆ ಓಡಿ ಹೋಗಿದ್ದಕ್ಕೆ ಗ್ರಾಮಸ್ಥರೆಲ್ಲಾ ಸೇರಿ ಯುವತಿಗೆ ಮಾಡಿದ್ದೇನು ಗೊತ್ತಾ?

ಪಾಟ್ನಾ, ಭಾನುವಾರ, 7 ಅಕ್ಟೋಬರ್ 2018 (08:40 IST)

ಪಾಟ್ನಾ : ಬೇರೆ ಜಾತಿಯ ಯುವಕನೊಂದಿಗೆ ಪ್ರೀತಿ ಮಾಡಿ ಓಡಿ ಹೋಗಿದ್ದಕ್ಕೆ ಗ್ರಾಮಸ್ಥರೆಲ್ಲಾ ಸೇರಿ ಯುವತಿಯನ್ನು ಮರಕ್ಕೆ ಕಟ್ಟಿ ಥಳಿಸಿರುವ ಅಮಾನವೀಯ ಘಟನೆ ಬಿಹಾರದ ನಾವಡದಲ್ಲಿ ನಡೆದಿದೆ.


ಯುವತಿಯೊಬ್ಬಳು ತಾನು ಪ್ರೀತಿಸುತ್ತಿದ್ದ ಬೇರೆ ಜಾತಿಯ ಯುವಕನೊಂದಿಗೆ ಓಡಿಹೋಗಿ ಊರಿನ ಪಕ್ಕದಲ್ಲೇ ವಾಸವಾಗಿದ್ದಳು. ಆದರೆ ಗ್ರಾಮಸ್ಥರು ಹಾಗೂ ಕುಟುಂಬದವರೂ ಅವರನ್ನು ಪತ್ತೆ ಮಾಡಿ ಗ್ರಾಮಕ್ಕೆ ಕರೆತಂದು ಆಕೆಯ ಮೇಲೆ ಅಮಾನವೀಯ ಕೃತ್ಯ ಎಸಗಿದ್ದಾರೆ.


ಗ್ರಾಮದ ಪಂಚಾಯತ್ ತಮ್ಮನ್ನು ಹೊರತುಪಡಿಸಿ ಬೇರೆ ಜಾತಿಯ ಯುವಕನನ್ನು ಪ್ರೀತಿಸಿ ಓಡಿಹೋಗಿದ್ದಕ್ಕೆ ಶಿಕ್ಷೆಯನ್ನು ನೀಡಲು ನಿರ್ಧರಿಸಿದ ಕಾರಣ ಪಂಚಾಯತ್ ಆದೇಶದಂತೆ ಗ್ರಾಮಸ್ಥರೆಲ್ಲಾ ಸೇರಿ ಯುವತಿಯನ್ನು ಮರಕ್ಕೆ ಕಟ್ಟಿ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಅದಕ್ಕೆ ಯುವತಿಯ ಮನೆಯವರು ಕೂಡ ಬೆಂಬಲಿಸಿ ಮನಬಂದತೆ ಹಲ್ಲೆ ಮಾಡಿದ್ದಾರೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ತೈಲ ಬೆಲೆ ನಂತರ ರೂಪಾಯಿ ಕುಸಿತಕ್ಕೂ ಯೋಜನೆ ರೂಪಿಸಿದೆಯಂತೆ ಕೇಂದ್ರ

ನವದೆಹಲಿ: ತೈಲ ಬೆಲೆ ಏರಿಕೆಗೆ ಕಡಿವಾಣ ಹಾಕಲು ಸುಂಕ ಕಡಿತಗೊಳಿಸಿ 2.50 ರೂ.ಗೆ ಪೆಟ್ರೋಲ್, ಡೀಸೆಲ್ ಬೆಲೆ ...

news

17 ವರ್ಷದ ಶಾಲಾ ವಿದ್ಯಾರ್ಥಿನಿಯನ್ನು ಅಪಹರಿಸಿ ಅತ್ಯಾಚಾರ ಎಸಗಿದ ಕಾಮುಕರು

ಮುಂಬೈ : ಬ್ಯಾಂಕ್ ನಿಂದ ಮರಳುತ್ತಿದ್ದ 17 ವರ್ಷದ ಶಾಲಾ ವಿದ್ಯಾರ್ಥಿನಿಯೊಬ್ಬಳ ಮೇಲೆ ಇಬ್ಬರು ಕಾಮುಕರು ...

news

ರಕ್ಷಣೆ ನೀಡಬೇಕಾಗಿದ್ದ ಪೊಲೀಸ್ ಅಧಿಕಾರಿಯಿಂದಲೇ 6 ತಿಂಗಳ ಗರ್ಭಿಣಿಯ ಮೇಲೆ ಅತ್ಯಾಚಾರ

ಬಳ್ಳಾರಿ : ಮಹಿಳೆಯರಿಗೆ ರಕ್ಷಣೆ ನೀಡಬೇಕಾಗಿದ್ದ ಪೊಲೀಸ್ ಅಧಿಕಾರಿಯೇ 6 ತಿಂಗಳ ಗರ್ಭಿಣಿಯ ಮೇಲೆ ...

news

ಮಮತಾ ಬ್ಯಾನರ್ಜಿ ಕಾಂಗ್ರೆಸ್ ಗೆ ಕೈ ಕೊಡಲು ಮುಂದಾಗಿರುವುದೇಕೆ ಗೊತ್ತಾ?

ನವದೆಹಲಿ: ಮಾಯಾವತಿ ನಂತರ ಮಮತಾ ಬ್ಯಾನರ್ಜಿ ಕೂಡಾ ಕಾಂಗ್ರೆಸ್ ನ ಮಹಾಘಟಬಂಧನ್ ನಿಂದ ಹೊರಬರಲು ಚಿಂತನೆ ...

Widgets Magazine