ವ್ಯಕ್ತಿಯ ಹೊಟ್ಟೆಯಲ್ಲಿದ್ದ ಬರೋಬ್ಬರಿ 116 ಕಬ್ಬಿಣದ ಮೊಳೆಗಳನ್ನು ಹೊರತೆಗೆದ ವೈದ್ಯರು

ಜೈಪುರ, ಬುಧವಾರ, 15 ಮೇ 2019 (14:12 IST)

: ವ್ಯಕ್ತಿಯೊಬ್ಬನ ಹೊಟ್ಟೆಯಲ್ಲಿ ಇದ್ದ ಬರೋಬ್ಬರಿ 116 ಕಬ್ಬಿಣದ ಮೊಳೆಗಳು ಹಾಗೂ ವೈರ್ ಗಳನ್ನು ವೈದ್ಯರು ಶಸ್ತ್ರಚಿಕಿತ್ಸೆ ಮಾಡಿ ಹೊರತೆಗೆದ ಘಟನೆ ರಾಜಸ್ಥಾನದ ಬುಂಡಿಯಲ್ಲಿರುವ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದಿದೆ.




ಭೋಲಾ ಶಂಕರ್(42) ಎಂಬುವವರು ಭಾನುವಾರದಂದು ಹೊಟ್ಟೆ ನೋವು ಎಂದು ಆಸ್ಪತ್ರೆಗೆ ಬಂದಿದ್ದರು. ಈ ವೇಳೆ ವೈದ್ಯರು ಅವರ ಎಕ್ಸ್-ರೇ ಮಾಡಿದಾಗ ಹೊಟ್ಟೆಯಲ್ಲಿ ಮೊಳೆಗಳು ಹಾಗೂ ವೈರ್ ಗಳು ಇರುವುದು ತಿಳಿದಿದೆ. ಆದಕಾರಣ ಸೋಮವಾರದಂದು ರೋಗಿಗೆ ಒಂದೂವರೆ ಗಂಟೆಗಳ ಕಾಲ  ಶಸ್ತ್ರಚಿಕಿತ್ಸೆ ಮಾಡಿ ಕಬ್ಬಿಣದ ಮೊಳೆಗಳು ಹಾಗೂ ವೈರ್ ಗಳನ್ನು ವೈದ್ಯರು ಹೊರತೆಗೆದಿದ್ದಾರೆ. ಅದರಲ್ಲಿ ಬಹುತೇಕ ಮೊಳೆಗಳು 6.5 ಸೆ.ಮೀ ಉದ್ದವಿತ್ತು ಎಂದು ವೈದ್ಯರು ತಿಳಿಸಿದ್ದಾರೆ.


ಆದರೆ ತೋಟವೊಂದರಲ್ಲಿ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದ ಭೋಲಾ ಶಂಕರ್ ಹೊಟ್ಟೆಯೊಳಗೆ ಈ ಕಬ್ಬಿಣದ ವಸ್ತುಗಳು ಹೇಗೆ ಸೇರಿತು ಎನ್ನುವ ಬಗ್ಗೆ ಆತನಿಗಾಗಲಿ, ಆತನ ಮನೆಯವರಿಗಾಗಲಿ ಗೊತ್ತಿರಲಿಲ್ಲ ಎಂಬುದೇ ಒಂದು ವಿಚಿತ್ರ ಸಂಗತಿ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ



ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಕೆಆರ್ ಮಾರುಕಟ್ಟೆನಲ್ಲಿ 4 ಅಡಿ ಜಾಗಕ್ಕೆ ವ್ಯಾಪಾರಿಯ ಬರ್ಬರ ಹತ್ಯೆ

ಬೆಂಗಳೂರು : ಫುಟ್ ಪಾತ್ ಮೇಲೆ ನಿಂಬೆ ಹಣ್ಣಿನ ಅಂಗಡಿ ಹಾಕಲು 4 ಅಡಿ ಜಾಗದ ವಿಚಾರಕ್ಕೆ ...

news

ಜಮೀರ್ ಒಬ್ಬ ಕಳ್ಳ, ಆತ ವಾಚ್ ಮ್ಯಾನ್ ಕೆಲಸಕ್ಕೆ ನಾಲಾಯಕ್ ಎಂದ ಈಶ್ವರಪ್ಪ

ಹುಬ್ಬಳ್ಳಿ : ಆಗಾಗ ಮೈತ್ರಿ ಪಕ್ಷದ ನಾಯಕರ ವಿರುದ್ಧ ಟೀಕಾ ಪ್ರಹಾರ ಮಾಡುತ್ತಿರುವ ಬಿಜೆಪಿ ಮುಖಂಡ ...

news

ಜೀವ ಜಲಕ್ಕಾಗಿ ಜೀವ ಒತ್ತೆ ಇಡುತ್ತಿರೋ ಜನರು!

ಮಳೆಯಾಗದ ಹಿನ್ನಲೆಯಲ್ಲಿ ಕೆರೆಗಳು ಖಾಲಿ ಖಾಲಿಯಾಗಿದ್ದು, ಜನರು ಜೀವದ ಹಂಗು ತೊರೆದು ಜೀವಜಲಕ್ಕಾಗಿ ಹೋರಾಟ ...

news

ಬೋರ್ವೆಲ್ ಕರೆಂಟ್ ಕಟ್ ಮಾಡಿದ ಹೆಸ್ಕಾಂ; ಜನ್ರು ಮಾಡಿದ್ದೇನು?

ಬೇಸಿಗೆಯಲ್ಲಿ ಕುಡಿಯುವ ನೀರಿಗೂ ತತ್ವಾರ ತಪ್ಪಿದ್ದಲ್ಲ. ಇಂಥ ಪರಿಸ್ಥಿತಿಯಲ್ಲಿ ಹೆಸ್ಕಾಂ ಮಾಡಬಾರದ ಕೆಲಸ ...

Widgets Magazine