ಮಾಲೀಕಳ ಜೀವ ಉಳಿಸಲು ತನ್ನ ಪ್ರಾಣವನ್ನೇ ತ್ಯಾಗ ಮಾಡಿದ ನಾಯಿ..!

ಮುಂಬೈ, ಶನಿವಾರ, 15 ಏಪ್ರಿಲ್ 2017 (18:20 IST)

Widgets Magazine

ನಾಯಿ ನಂಬಿಕಸ್ಥ ಪ್ರಾಣಿ. ತುತ್ತು ಅನ್ನ ಹಾಕಿದ ಮಾಲೀಕನ ರಕ್ಷಣೆಗೆ ಯಾವುದೇ ಹಂತದಲ್ಲೂ ಸಿದ್ಧವಿರುತ್ತದೆ ಎಂಬುದಕ್ಕೆ ಮುಂಬೈನ ಈ ಪ್ರಕರಣ ಸಾಕ್ಷಿ. ಚಾಕುವಿನಿಂದ ಇರಿಯಲು ಬಂದ ವ್ಯಕ್ತಿಯಿಂದ ತನ್ನ ಮಾಲೀಕಳನ್ನ ರಕ್ಷಿಸಲು ತನ್ನ ಪ್ರಾಣವನ್ನೇ ಅರ್ಪಿಸಿರುವ ಘಟನೆ ಮುಂಬೈನ ಸಿಯೋನ್ ಕೋಲಿವಾಡ ಪ್ರದೇಶದಲ್ಲಿ ನಡೆದಿದೆ.


ಏನಿದು ಘಟನೆ..?: ನಾಯಿಯನ್ನ ಸಾಕಿಕೊಂಡಿದ್ದ ಸುಮತಿಯ ಸ್ನೇಹಿತೆ ತನ್ನ ಪ್ರಿಯಕರ ವೆಂಕಟೇಶನಿಂದ ದಾಳಿಗೊಳಗಾಗಿದ್ದಳು. ಚಾಕು ಹಿಡಿದು ಮನೆಗೆ ನುಗ್ಗಿದ್ದ ವೆಂಕಟೇಶ ಕೊಲೆಗೆ ಮುಂದಾಗಿದ್ದ. ಆತನಿಂದ ತಪ್ಪಿಸಿಕೊಂಡ ಆಕೆ ಸುಮತಿ ಮನೆಗೆ ಬಂದಳು. ಅಲ್ಲಿಗೂ ಹಿಂಬಾಲಿಸಿ ಬಂದಿದ್ದ ವೆಂಕಟೇಶ್`ನನ್ನ ಮನೆಗೆ ಪ್ರವೇಶಿಸದಂತೆ ಸುಮತಿ ಪ್ರತಿರೋಧ ಒಡ್ಡಿದ್ದಾಳೆ. ಈ ಸಂದರ್ಭ ಆಕೆ ಮೇಲೆಯೇ ಹಲ್ಲೆಗೆ ಮುಂದಾಗಿದ್ದ. ಇದನ್ನ ನೋಡುತ್ತಿದ್ದ ಪೆಟ್ ಡಾಗ್ ರಿಕ್ಕಿ ವೆಂಕಟೇಶ್ ಮೇಲೆ ದಾಳಿ ನಡೆಸಿ 2 ಬಾರಿ ಕಚ್ಚಿದೆ. ಈ ಸಂದರ್ಭ ಮಾನವೀಯತೆಯನ್ನೇ ಮರೆತಿದ್ದ ಆತ ಚಾಕುವಿನಿಂದ ನಾಯಿಗೆ ಚುಚ್ಚಿ ಪರಾರಿಯಾಗಿದ್ದಾನೆ. ಮೂಕಪ್ರಾಣಿ ಮಾಲೀಕಳನ್ನ ರಕ್ಷಿಸಲು ಹೋಗಿ ಪ್ರಾಣ ಬಿಟ್ಟಿದೆ.

ಪೊಲೀಸರು ವೆಂಕಟೇಶನನ್ನ ಬಂಧಿಸಿದ್ದಾರಾದರೂ ಅಂದೇ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾನೆ. ನಾಯಿಯನ್ನೇ ತನ್ನ ಸರ್ವಸ್ವ ಅಂದುಕೊಂಡಿದ್ದ ಸುಮತಿ ಕಣ್ಣೀರಲ್ಲಿ ಕೈತೊಳೆಯುತ್ತಿದ್ದಾರೆ.
 Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ಮಟ್ರೋ ನಿಲ್ದಾಣದ ಬಿಗ್ ಸ್ಕ್ರೀನ್`ನಲ್ಲಿ ಸೆಕ್ಸ್ ವಿಡಿಯೋ ಪ್ರಸಾರ.. ಬೆಚ್ಚಿಬಿದ್ದ ಪ್ರಯಾಣಿಕರು

ದೆಹಲಿಯ ರಾಜೀವ್ ಚೌಕ್ ಮೆಟ್ರೋ ಸ್ಟೇಶನ್`ನಲ್ಲಿ ಪೋರ್ನ್ ವಿಡಿಯೋ ಪ್ರಸಾರವಾದ ಬಗ್ಗೆ ಸೋಶಿಯಲ್ ...

news

ಬೆಳಗಾವಿಯ 8 ವಿದ್ಯಾರ್ಥಿಗಳು ವೈರಿ ಬೀಚ್`ನಲ್ಲಿ ನೀರು ಪಾಲು

ಬೀಚ್`ನಲ್ಲಿ ಈಜಲು ತೆರಳಿದ್ದ ಬೆಳಗಾವಿಯ ವಿದ್ಯಾರ್ಥಿಗಳು ನೀರು ಪಾಲಾಗಿರುವ ಘಟನೆ ಮಹಾರಾಷ್ಟ್ರದ ವೈರ್ ...

news

ರಾಹುಲ್ ಗಾಂಧಿ ಭೇಟಿಯಾದ ಸಿಎಂ ಸಿದ್ದರಾಮಯ್ಯ

ಉಪಚುನಾವಣೆಯ ಗೆಲುವಿನ ಬಳಿಕ ಸಿಎಂ ಸಿದ್ದರಾಮಯ್ಯ ಅಂಡ್ ಟೀಮ್ ದಿಲ್ಲಿಯಲ್ಲಿ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ...

news

1,590 ರೂ. ಮೊಬೈಲ್ EMI ಪಾವತಿಸಿ 1 ಕೋಟಿ ರೂ. ಗೆದ್ದ ವಿದ್ಯಾರ್ಥಿನಿ

ಡಿಜಿಟಲ್ ಪೇಮೆಂಟ್ ಉತ್ತೇಜನಕ್ಕಾಗಿ ಸರ್ಕಾರ ಜಾರಿಗೆ ತಂದಿರುವ ಲಕ್ಕಿ ಗ್ರಾಹಕ್ ಯೋಜನೆಯ ಲಕ್ಕಿ ಡ್ರಾನಲ್ಲಿ ...

Widgets Magazine