ಬಿಜೆಪಿ ಜಾಹೀರಾತಿನಲ್ಲಿ "ಪಪ್ಪು" ಪದ ಬಳಕೆಗೆ ಚು.ಆಯೋಗ ನಿಷೇಧ

ನವದೆಹಲಿ, ಬುಧವಾರ, 15 ನವೆಂಬರ್ 2017 (17:36 IST)

Widgets Magazine

ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಗುರಿಯಾಗಿಟ್ಟುಕೊಂಡು ಎಲೆಕ್ಟ್ರಾನಿಕ್ ಜಾಹೀರಾತಿನಲ್ಲಿ "ಪಪ್ಪು" ಪದವನ್ನು ಬಳಸದಂತೆ ಚುನಾವಣಾ ಆಯೋಗ ಗುಜರಾತ್ ಬಿಜೆಪಿ ಘಟಕಕ್ಕೆ ಆದೇಶಿಸಿದೆ. ಇದೊಂದು "ಅವಹೇಳನಕಾರಿ ಎಂದು ಅಭಿಪ್ರಾಯಪಟ್ಟಿದೆ. 
ಈ ಬೆಳವಣಿಗೆಯನ್ನು ದೃಢೀಕರಿಸಿದ ಬಿಜೆಪಿ ಮೂಲಗಳು, ಜಾಹೀರಾತಿನ ಸ್ಕ್ರಿಪ್ಟ್ ಯಾವುದೇ ವ್ಯಕ್ತಿಗೆ ಪದವನ್ನು ಲಿಂಕ್ ಮಾಡಿಲ್ಲವೆಂದು ಹೇಳಿದೆ.
 
ಬಿಜೆಪಿ ಮೂಲಗಳ ಪ್ರಕಾರ, ಗುಜರಾತ್ ಮುಖ್ಯ ಚುನಾವಣಾ ಅಧಿಕಾರಿ (ಸಿಇಒ) ನೇತೃತ್ವದ ಮಾಧ್ಯಮ ಸಮಿತಿಯು ಕಳೆದ ತಿಂಗಳು ಅನುಮೋದನೆಗಾಗಿ ಪಕ್ಷ ಸಲ್ಲಿಸಿದ ಜಾಹೀರಾತಿನ ಸ್ಕ್ರಿಪ್ಟ್‌ನಲ್ಲಿ ಉಲ್ಲೇಖಿಸಿದ ಪಪ್ಪು ಪದವನ್ನು ವಿರೋಧಿಸಿದೆ.
 
ಚುನಾವಣೆಗೆ ಸಂಬಂಧಿಸಿದ ಯಾವುದೇ ಜಾಹೀರಾತನ್ನು ಮಾಡುವ ಮೊದಲು, ನಾವು ಪ್ರಮಾಣಪತ್ರವನ್ನು ಪಡೆಯಲು ಸಮಿತಿಗೆ ಸ್ಕ್ರಿಪ್ಟ್ ಸಲ್ಲಿಸಬೇಕು. ಆದರೆ ಅವರು ಪಪ್ಪು ಎಂಬ ಶಬ್ದದ ಆಕ್ಷೇಪವನ್ನು ಎತ್ತಿದರು.ಇದು ಅವಹೇಳನಕಾರಿ ಎಂದು ಆಯೋಗ ಹೇಳಿದೆ ಎಂದು ಬಿಜೆಪಿ ನಾಯಕರು ತಿಳಿಸಿದ್ದಾರೆ.
 
 ಪಕ್ಷ ಪಪ್ಪು ಪದವನ್ನು ಬದಲಿಸಿ ಚುನಾವಣೆ ಆಯೋಗದ ಅನುಮೋದನೆಗೆ ಹೊಸ ಸ್ಕ್ರಿಪ್ಟ್ ಸಲ್ಲಿಸಲಾಗುವುದು ಎಂದು ಬಿಜೆಪಿ ನಾಯಕರು ತಿಳಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ಮಾನವ ಮೂತ್ರದ ಬ್ಯಾಂಕ್‌ಗಳ ಸ್ಥಾಪನೆಗೆ ಆದ್ಯತೆ: ನಿತಿನ್ ಗಡ್ಕರಿ

ನವದೆಹಲಿ: ಮಾನವನ ಮೂತ್ರವನ್ನು ಸಂಗ್ರಹಿಸಿದಲ್ಲಿ ರಸಗೊಬ್ಬರವಾದ ಯೂರಿಯಾ ತಯಾರಿಸಲು ಉಪಯೋಗವಾಗುತ್ತದೆ. ...

news

ಅಶ್ಲೀಲ ಸಿನೆಮಾ ನೋಡುವಾಗ ರೆಡ್ ಹ್ಯಾಂಡ್‌ ಸಿಕ್ಕು ಬಿದ್ದಿದ್ದೆ: ಸಿಎಂ ಮನೋಹರ್ ಪರಿಕ್ಕರ್

ಗೋವಾ: ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಅಶ್ಲೀಲ ಸಿನೆಮಾ ನೋಡುತ್ತಿದ್ದಾಗಿ ಒಂದು ಬಾರಿ ...

news

ಮಾಜಿ ಸಚಿವ ಅಂಬರೀಶ್ ವರ್ತನೆಗೆ ಕಾಂಗ್ರೆಸ್ ನಾಯಕರ ಆಕ್ರೋಶ

ಬೆಂಗಳೂರು: ವಿಧಾನಮಂಡಲದ ಅಧಿವೇಶನಕ್ಕೆ ಗೈರುಹಾಜರಾಗಿ ನಟಿಯೊಬ್ಬಳೊಂದಿಗೆ ಡಾನ್ಸ್ ಮಾಡುತ್ತಿರುವ ಶಾಸಕ ...

news

ಏನಾಗಿದೆ ನಿಮಗೆ ಕಲಾಪಕ್ಕೆ ಯಾಕೆ ಗೈರು: ಶಾಸಕ, ಸಚಿವರಿಗೆ ಸಿಎಂ ಕ್ಲಾಸ್

ಬೆಂಗಳೂರು: ಬೆಳಗಾವಿಯಲ್ಲಿ ನಡೆಯುತ್ತಿರುವ ಅಧಿವೇಶನ ನಮ್ಮ ಸರಕಾರದ ಕೊನೆಯ ಅಧಿವೇಶನವಾಗಿದೆ. ಆದಾಗ್ಯೂ ಸಚಿವ ...

Widgets Magazine