1952 ರ ನಂತರ ಅತಿ ಕಡಿಮೆ ಸಂಖ್ಯೆಯ ಮುಸ್ಲಿಂ ಸಂಸದರ ಆಯ್ಕೆ

ನವದೆಹಲಿ, ಶನಿವಾರ, 17 ಮೇ 2014 (16:15 IST)

Widgets Magazine

ಭಾರತದ ಲೋಕಸಭಾ ಚುನಾವಣಾ ಇತಿಹಾಸದ ಪ್ರಥಮ ಚುನಾವಣೆ 1952ರ ಬಳಿಕ ಪ್ರಥಮ ಬಾರಿಗೆ ಅತಿ ಕಡಿಮೆ ಸಂಖ್ಯೆಯ ಮುಸ್ಲಿಂ ಮತದಾರರು ಆಯ್ಕೆಯಾಗಿದ್ದಾರೆ.  
 
ಮೊದಲ ಚುನಾವಣೆಯ ನಂತರ ಇಲ್ಲಿಯವರೆಗಿನ ದಾಖಲೆಯಲ್ಲಿ  ಅತಿ ಕಡಿಮೆ ಎಂದರೆ 30 ಮುಸ್ಲಿಂ ಪ್ರತಿನಿಧಿಗಳು ಕಳೆದ ಬಾರಿ ನಡೆದ 15ನೇ ಲೋಕಸಭಾ ಚುನಾವಣೆಯಲ್ಲಿ ಗೆದ್ದು ಬಂದಿದ್ದರು. ಆದರೆ ಈ ಬಾರಿ ಈ ಸಂಖ್ಯೆಯಲ್ಲಿ ಮತ್ತೂ ಇಳಿಕೆ ಕಂಡುಬಂದಿದ್ದು, ಜಯಗಳಿಸಿದ ಅಭ್ಯರ್ಥಿಗಳ ಸಂಖ್ಯೆ ಕೇವಲ 24. ಅಂದರೆ ಕೆಳಮನೆಯ ಬಲದಲ್ಲಿ ಅವರ ಪಾತ್ರ ಕೇವಲ 4.4%.  
 
1952ರಲ್ಲಿ ನಡೆದ ಪ್ರಥಮ ಲೋಕಸಭಾ ಚುನಾವಣೆಯಲ್ಲಿ ಕೇವಲ 4.3% ಮುಸ್ಲಿಮ‌ರು ಮಾತ್ರ ಲೋಕಸಭೆಯನ್ನು ಪ್ರವೇಶಿಸಿದ್ದರು. ನಂತರದ ದಶಕಗಳಲ್ಲಿ ಈ ಸಂಖ್ಯೆಯಲ್ಲಿ ಏರಿಕೆ ಕಂಡುಬಂದಿದ್ದು, 1980ರಲ್ಲಿ ಈ ಸಂಖ್ಯೆ 49 ಅಂದರೆ 9.3% ಕಂಡು ಬಂದಿತ್ತು. 
 
ಪ್ರಥಮ ಬಾರಿ ಉತ್ತರಪ್ರದೇಶದಿಂದ ಓರ್ವ ಅಭ್ಯರ್ಥಿಯೂ ಆಯ್ಕೆಯಾಗಿಲ್ಲ. ಗಣನೀಯ ಪ್ರಮಾಣದ ಮುಸ್ಲಿಂ ಜನಸಂಖ್ಯೆಯನ್ನು ಹೊಂದಿರುವ ಮಹಾರಾಷ್ಟ್ರದಲ್ಲೂ ಇದೇ ಸ್ಥಿತಿ ವ್ಯಕ್ತವಾಗಿದೆ. ಈ ಸಮುದಾಯದಿಂದ ಪ್ರತಿನಿಧಿಗಳು ಆಯ್ಕೆಯಾದ ರಾಜ್ಯಗಳೆಂದರೆ  ಪಶ್ಚಿಮ ಬಂಗಾಳ (ಎಂಟು), ಜಮ್ಮು ಕಾಶ್ಮೀರ (ನಾಲ್ಕು), ಬಿಹಾರ (ನಾಲ್ಕು), ಕೇರಳ (ಮೂರು), ಅಸ್ಸಾಂ (ಎರಡು) ಮತ್ತು ಆಂಧ್ರಪ್ರದೇಶ, ತಮಿಳುನಾಡು ಮತ್ತು ಲಕ್ಷದ್ವೀಪ (ಒಂದು). ಇವುಗಳಲ್ಲಿ, ಸಹಜವಾಗಿ ಜೆ & ಕೆ ಹಾಗೆಯೇ ಲಕ್ಷದ್ವೀಪ ಮುಸ್ಲಿಂ ಸಮುದಾಯ ಹೆಚ್ಚಳವಾಗಿರುವ ಪ್ರದೇಶಗಳಾಗಿವೆ. 
 
ಮ್ಯಾಜಿಕ್ ಸಂಖ್ಯೆಯನ್ನು ದಾಟಿ ಗೆಲುವು ಸಾಧಿಸಿರುವ ಬಿಜೆಪಿಯಲ್ಲಿ ಮುಸ್ಲಿಂ ಅಭ್ಯರ್ಥಿಗಳು ಇರಲಿಲ್ಲವಾದ್ದರಿಂದ ಕೆಳಮನೆಯಲ್ಲಿ ಅಲ್ಪಸಂಖ್ಯಾತರ ಸಂಖ್ಯೆ ಕಡಿಮೆ ಇರುವುದು ಆಶ್ಚರ್ಯ ಎನಿಸುತ್ತಿಲ್ಲ. Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ಇದು ಅಪ್ಪಟ ಬಿಜೆಪಿಯ ಜಯ, ಮೋದಿಯ ಜಯವಲ್ಲ: ಸುಷ್ಮಾ ಸ್ವರಾಜ್

ಬಿಜೆಪಿ ಪಕ್ಷ ನಿಚ್ಚಳ ಬಹುಮತ ಸಾಧಿಸಿ ಗೆದ್ದಿರುವುದಕ್ಕೆ ಸಂತೋಷ ವ್ಯಕ್ತಪಡಿಸುತ್ತ ಇದು ಅಪ್ಪಟ ಬಿಜೆಪಿಯ ಜಯ ...

news

ಕರ್ತವ್ಯದಲ್ಲಿ ಶ್ರದ್ಧೆ ಮತ್ತು ಪರಿಶ್ರಮವಿರಲಿ: ಮೋದಿಗೆ ಅಮ್ಮನ ಸಲಹೆ

ಪರಿಶ್ರಮದಿಂದ ಮತ್ತು ಶ್ರದ್ಧೆಯಿಂದ ಕರ್ತವ್ಯ ನಿರ್ವಹಿಸು ಎಂದು ನಿಯೋಜಿತ ಪ್ರಧಾನಿ ನರೇಂದ್ರ ಮೋದಿಗೆ ಅವರ ...

news

ಮೋದಿ ಕ್ಯಾಬಿನೆಟ್‌ನಲ್ಲಿ ರಾಜ್ಯದ ಯಾರಿಗೆ ಸಚಿವ ಪಟ್ಟ ಸಿಗುತ್ತೆ?

ಬೆಂಗಳೂರು: ಕೇಂದ್ರದಲ್ಲಿ ರಾಜ್ಯದಿಂದ ಸಂಸದರಾಗಿ ಆಯ್ಕೆಯಾದವರಲ್ಲಿ ಯಾರಿಗೆ ಸಚಿವ ಪಟ್ಟ ಒಲಿಯಬಹುದು ಎಂಬ ...

news

ಮೋದಿ ಯಶಸ್ಸಿನ ಹಿಂದಿರುವ ಮೌನ ದೇವತೆ

ತಮ್ಮ ಯಶಸ್ಸಿನ ಹಿಂದೆ ಇಬ್ಬರು ಮಹಿಳೆಯರು ಇದ್ದಾರೆ ಎಂದು ಭಾವಿ ಪ್ರಧಾನಿ ಮೋದಿ ಸದಾ ಹೇಳುತ್ತಿರುತ್ತಾರೆ. ...

Widgets Magazine