ಎಐಸಿಸಿ ಕಚೇರಿಯಲ್ಲಿ ಸೋನಿಯಾ ನೇತೃತ್ವದಲ್ಲಿ ತುರ್ತುಸಭೆ

ನವದೆಹಲಿ, ಮಂಗಳವಾರ, 8 ಆಗಸ್ಟ್ 2017 (18:50 IST)

ಎಐಸಿಸಿ ಕಚೇರಿಯಲ್ಲಿ ಕಾಂಗ್ರೆಸ್ ಪಕ್ಷದ ಅಧಿನಾಯಕಿ ಸೋನಿಯಾ ಗಾಂಧಿ ನೇತೃತ್ವದಲ್ಲಿ ತುರ್ತುಸಭೆ ಕರೆಯಲಾಗಿದೆ ಎಂದು ಮೂಲಗಳು ತಿಳಿಸಿವೆ.
ಸಭೆಯಲ್ಲಿ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರು ಭಾಗಿಯಾಗಿದ್ದಾರೆ. ಅನಾರೋಗ್ಯದಿಂದಾಗಿ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಸಭೆಗೆ ಗೈರುಹಾಜರಾಗಿದ್ದಾರೆ.
 
ಗುಜರಾತ್ ರಾಜ್ಯಸಭೆ ಚುನಾವಣೆ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಕ್ಕೆ ಪ್ರತಿಷ್ಠೆಯ ಕಣವಾಗಿ ಪರಿಣಮಿಸಿದೆ. ಗುಜರಾತ್ ರಾಜ್ಯಸಭೆ ಚುನಾವಣೆಯಲ್ಲಿ ಇಬ್ಬರು ಶಾಸಕರು ಬಿಜೆಪಿ ಏಜೆಂಟ್‌ರಿಗೆ ತೋರಿಸಿ ಮತದಾನ ಮಾಡಿದ್ದರಿಂದ ಅವರ ಮತಗಳನ್ನು ರದ್ದುಗೊಳಿಸುವಂತೆ ಕಾಂಗ್ರೆಸ್ ಚುನಾವಣೆ ಆಯೋಗದ ಮೆಟ್ಟಿಲೇರಿದೆ.
 
ಮತದಾನದ ವಿಡಿಯೋವನ್ನು ಗುಜರಾತ್ ಚುನಾವಣೆ ಆಯೋಗದ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದು, ಕೇಂದ್ರ ಚುನಾವಣೆ ಆಯೋಗಕ್ಕೆ ವರದಿ ನೀಡಲಿದ್ದಾರೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ. 
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. ಇದರಲ್ಲಿ ಇನ್ನಷ್ಟು ಓದಿ :  
ಎಐಸಿಸಿ ಸೋನಿಯಾ ಗಾಂಧಿ ಕಾಂಗ್ರೆಸ್ ಸಭೆ ರಾಹುಲ್ ಗಾಂಧಿ Aicc Sonia Gandhi Rahul Gandhi Congress Working Comitee Meet

ಸುದ್ದಿಗಳು

news

ಕಂತೆ ಕಂತೆ ನೋಟುಗಳ ಮೇಲೆ ವರ ಮಹಾಲಕ್ಷ್ಮೀ ಪೂಜೆ

ವರ ಮಹಾಲಕ್ಷ್ಮೀ ಹಬ್ಬದಲ್ಲಿ ಪ್ರತಿಯೊಬ್ಬರೂ ತಮ್ಮ ಕೈಲಾದಷ್ಟು ಹಣವನ್ನ ದೇವರ ಮುಂದೆ ಇಟ್ಟು ಪೂಜೆ ಮಾಡುವುದು ...

news

ಉಪಮಾ ಬಾಕ್ಸ್‌ನಲ್ಲಿ ದುಬೈಗೆ 1.3 ಕೋಟಿ ವಿದೇಶಿ ಕರೆನ್ಸಿ ಸಾಗಾಣೆ: ಇಬ್ಬರು ಅರೆಸ್ಟ್

ನವದೆಹಲಿ: ಬಿಸಿಯಾಗಿಡುವ ಬಾಕ್ಸ್‌ನಲ್ಲಿ ಉಪ್ಪಿಟ್ಟು ತಿಂಡಿಯನ್ನು ಸಾಗಿಸುತ್ತಿರುವಾಗ ಕಸ್ಟಮ್ಸ್ ...

news

ಶಾಲೆಗಳಲ್ಲಿ ಯೋಗ ಕಡ್ಡಾಯ: ಬಿಜೆಪಿ ನಾಯಕರ ಅರ್ಜಿ ತಿರಸ್ಕರಿಸಿದ ಸುಪ್ರೀಂಕೋರ್ಟ್

ನವದೆಹಲಿ: ದೇಶಾದ್ಯಂತ 1-8 ತರಗತಿಗಳ ವಿದ್ಯಾರ್ಥಿಗಳಿಗೆ ಯೋಗ ಶಿಕ್ಷಣ ಕಡ್ಡಾಯ ಮಾಡುವಂತೆ ಸಲ್ಲಿಸಿದ ...

news

ನಾನು ಬಾಯ್ಬಿಟ್ಟರೆ ಎಲ್ಲೆಲ್ಲಿ, ಏನೇನೋ ಆಗಿಬಿಡುತ್ತದೆ: ಡಿ.ಕೆ.ಶಿವಕುಮಾರ್

ಬೆಂಗಳೂರು: ಬಿಜೆಪಿಗೆ ಆಹ್ವಾನ ನೀಡಿರುವ ವಿಚಾರ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಇಂಧನ ಖಾತೆ ಸಚಿವ ...

Widgets Magazine