ಆ ಶ್ರೀರಾಮಚಂದ್ರನೇ ಬಂದರೂ ಮಹಿಳೆಯರ ಮೇಲೆ ಅತ್ಯಾಚಾರ ತಡೆಯಲಾಗದಂತೆ!

ನವದೆಹಲಿ, ಸೋಮವಾರ, 9 ಜುಲೈ 2018 (09:08 IST)

ನವದೆಹಲಿ: ಆ ಶ್ರೀರಾಮಚಂದ್ರನೇ ಬಂದರೂ ಮಹಿಳೆಯರ ಮೇಲಿನ ಅತ್ಯಾಚಾರ ತಡೆಯಲು ಸಾಧ್ಯವಾಗದು ಎಂದು ಬಿಜೆಪಿ ಸಂಸದ ಸುರೇಂದ್ರ ನಾರಾಯಣ್ ಸಿಂಗ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
 
‘ಇದನ್ನು ನಾನು ಧೈರ್ಯವಾಗಿ ಹೇಳಬಲ್ಲೆ. ಮಹಿಳೆಯರ ಮೇಲಿನ ಅತ್ಯಾಚಾರ ತಡೆಯಲು ಆ ಭಗವಂತ ಶ್ರೀರಾಮನಿಗೂ ಸಾಧ್ಯವಿಲ್ಲ. ಇದು ಪ್ರಾಕೃತಿಕ ಅಂಟು ಖಾಯಿಲೆಯಂತಾಗಿದೆ’ ಎಂದು ಸಂಸದ ಸುರೇಂದ್ರ ಹೇಳಿದ್ದಾರೆ.
 
ಇಂತಹ ಪ್ರಕರಣವನ್ನು ತಡೆಯಬೇಕಾದರೆ ಇನ್ನೊಬ್ಬರ ಕುಟುಂಬವನ್ನೂ ನಮ್ಮ ಕುಟುಂಬದಂತೆ ಗೌರವಿಸಲು ಜನರು ಕಲಿಯಬೇಕು. ಹಾಗಿದ್ದರೆ ಮಾತ್ರ ಅತ್ಯಾಚಾರ ಪ್ರಕರಣಗಳು ಕಡಿಮೆಯಾಗಬಹುದು ಎಂದು ಅವರು ಸಲಹೆಯನ್ನೂ ನೀಡಿದ್ದಾರೆ. ಹಿಂದೆಯೂ ಒಮ್ಮೆ ಇದೇ ಸಂಸದ ಸುರೇಂದ್ರ ಸಿಂಗ್ ಸರ್ಕಾರಿ ನೌಕರರು ವೇಶ್ಯೆಯರು ಎಂದು ವಿವಾದವೆಬ್ಬಿಸಿದ್ದರು.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.             ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಸಿದ್ದರಾಮಯ್ಯ ನೀಡಿದ ಕಷಾಯ- ಹೆಚ್‍ಡಿಕೆಗೆ ಜೀರ್ಣವಾಗ್ತಿಲ್ಲ ಎಂದವರಾರು?

ಒಂದು ವರ್ಷ ಸರಕಾರವಿರುತ್ತದೆಂದು ಕುಮಾರಸ್ವಾಮಿ ಹೇಳಿದರೆ 6 ತಿಂಗಳು ಇರುತ್ತದೆಂದು ಸಿದ್ದರಾಮಯ್ಯ ...

news

ಅನ್ನಭಾಗ್ಯ ಕಡಿತ: ಶಾಸಕರನ್ನು ತರಾಟೆಗೆ ತೆಗೆದುಕೊಂಡ ಮಹಿಳೆ

ರೈತರ ಸಾಲಮನ್ನಾಕ್ಕೆ‌ ಪಡಿತರ‌ ಕಡಿತಗೊಳಿಸಿದ್ದಕ್ಕೆ ಸಾರ್ವಜನಿಕ ಸ್ಥಳದಲ್ಲಿ ಮಹಿಳೆಯೊಬ್ಬರು ಶಾಸಕರ ಮೇಲೆ ...

news

ಸಮ್ಮಿಶ್ರ ಸರಕಾರದಲ್ಲಿ ನೆಲಬಾಂಬ್ ಗಳಿವೆ ಎಂದ ಬಿಜೆಪಿ ಶಾಸಕ!

ಸಮ್ಮಿಶ್ರ ಸರ್ಕಾರದಲ್ಲಿ ನೆಲಬಾಂಬ್ ಗಳಿವೆ. ಲೋಕ ಚುನಾವಣೆಗೂ ಮುನ್ನವೇ ಈ ನೆಲ ಬಾಂಬ್ ಗಳು ಸ್ಪೋಟಗೊಳ್ಳಲಿವೆ ...

news

ದೇವಸ್ಥಾನ ಉದ್ಘಾಟನೆ ವಿಚಾರ: ಹಾಲಿ- ಮಾಜಿ ಶಾಸಕ ಕಿತ್ತಾಟ

ಹಠಕ್ಕೆ ಬಿದ್ದ ರಾಜಕಾರಣಿಗಳಿಂದ ಉದ್ಘಾಟನೆಯಾದ ದೇವಸ್ಥಾನಕ್ಕೆ ಮತ್ತೊಮ್ಮೆ ಉದ್ಘಾಟನೆ ಭಾಗ್ಯ ಸಿಕ್ಕಿದೆ. ...

Widgets Magazine