16 ನೇ ಲೋಕಸಭೆಯ ಮೂರನೇ ಒಂದರಷ್ಟು ಸಂಸದರ ಮೇಲಿದೆ ಕ್ರಿಮಿನಲ್ ಕೇಸ್

ನವದೆಹಲಿ, ಸೋಮವಾರ, 19 ಮೇ 2014 (16:37 IST)

Widgets Magazine

2014ರ ಲೋಕಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿರುವ 543 ಸಂಸದರಲ್ಲಿ 541 ಮಂದಿ  ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ಸ್ವಯಂ ಅಪಿಡವಿಟ್‌ನ್ನು ವಿಶ್ಲೇಷಿಸಿರುವ ಸಿವಿಲ್ ಸೊಸೈಟಿ ಗ್ರುಪ್ ಎಡಿಆರ್, ವಿಜಯಿ ಅಭ್ಯರ್ಥಿಗಳಲ್ಲಿ ಪ್ರತಿಶತ 34 ರಷ್ಟು ಜನ  ಕ್ರಿಮಿನಲ್ ಕೇಸ್‌ಗಳನ್ನು ಎದುರಿಸುತ್ತಿದ್ದಾರೆ ಎಂದು ಹೇಳಿದೆ. 2009ರಲ್ಲಿ ಈ ಸಂಖ್ಯೆ 30 ಪ್ರತಿಶತವಿದ್ದರೆ, 2004ರಲ್ಲಿ 24% ರಷ್ಟಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. 
 
ಗೆದ್ದ 541 ಅಭ್ಯರ್ಥಿಗಳಲ್ಲಿ, 186 (34%) ಜನ ಕ್ರಿಮಿನಲ್ ಅಪರಾಧದ ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ ಎಂದು ತಿಳಿದು ಬಂತು ಎಂದು ಎಡಿಆರ್ ತನ್ನ ವಿವರಣಾತ್ಮಕ ವಿಶ್ಲೇಷಣೆಯಲ್ಲಿ ಹೇಳಿದೆ. 
 
ಅದರಲ್ಲಿ ಬಿಜೆಪಿಯ ಮೊದಲ ಸ್ಥಾನದಲ್ಲಿದ್ದು, ಪಕ್ಷದ 282 ವಿಜೇತ ಉಮೇದುವಾರರಲ್ಲಿ 98 ಜನ ಕ್ರಿಮಿನಲ್ ಮೊಕದ್ದಮೆಯನ್ನು ಎದುರಿಸುತ್ತಿದ್ದಾರೆ. 
 
ಕಾಂಗ್ರೆಸ್ಸಿನ 44 ಸಂಸದರಲ್ಲಿ 8 ಜನ  ಎಐಡಿಎಂಕೆಯ 37 ಸಂಸದರಲ್ಲಿ 6 ಜನ ಕ್ರಿಮಿನಲ್ ಕೇಸ್‌ ದಾಖಲಿಸಲ್ಪಟ್ಟವರ ಸಾಲಲ್ಲಿ ಸೇರಿದ್ದಾರೆ.  
 
ಶೇಕಡಾವಾರು ಪರಿಗಣಿಸಿದರೆ ಶಿವಸೇನೆ ಎಲ್ಲರಿಗಿಂತ ಮುಂದಿದ್ದು ಗೆದ್ದಿರುವ 18 ಉಮೇದುವಾರರಲ್ಲಿ 15 ಜನ ಅಪರಾಧಿ ಪ್ರಕರಣದ ಅಡಿಯಲ್ಲಿದ್ದಾರೆ.



Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ರಾಹುಲ್ ಬದಲಿಗೆ ಪ್ರಿಯಾಂಕಳಿಗೆ ನಾಯಕತ್ವ ನೀಡಿ

ಕಾಂಗ್ರೆಸ್ಸಿನ ಎರಡನೇ ನಾಯಕ ರಾಹುಲ್ ಗಾಂಧಿಯನ್ನು ಗುರಿಯಾಗಿರಿಸಿಕೊಂಡಿರುವ ಒಂದು ಸಣ್ಣ ಪೋಸ್ಟರ್ ಒಂದು ...

news

ಕನಸಿನಿಂದ ತಿಳಿಯಿರಿ ನಿಮ್ಮ ಮದುವೆ ಯಾವಾಗ ಎಂದು

1. ಕನಸಿನಲ್ಲಿ ಕಸೂತಿ ಬಟ್ಟೆಗಳು ಕಂಡರೆ, ನಿಮಗೆ ಸುಂದರವಾದ ಮತ್ತು ಪವಿತ್ರ ಹುಡುಗಿ/ಹುಡುಗನ ಜೊತೆಗೆ ...

news

ವರದಿಗಾರ್ತಿ ಮೇಲೆ ದೌರ್ಜನ್ಯ: ಡಿಕೆಶಿ ವಿರುದ್ಧ ತನಿಖೆಗೆ ಕೋರ್ಟ್ ಆದೇಶ

ಟಿವಿ 9 ವರದಿಗಾರ್ತಿ ಮೇಲೆ ದೌರ್ಜನ್ಯಕ್ಕೆ ಸಂಬಂಧಿಸಿದಂತೆ ಸಚಿವ ಡಿಕೆ ಶಿವಕುಮಾರ್ ವಿರುದ್ಧ ತನಿಖೆಗೆ ...

news

ಮೋದಿ ಸಂಪುಟದಲ್ಲಿ ಯಡಿಯೂರಪ್ಪಗೆ ಕೃಷಿ ಸಚಿವ ಸ್ಥಾನ

ಬೆಂಗಳೂರು: ಶಿವಮೊಗ್ಗ ಸಂಸದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಭಾವಿ ಪ್ರದಾನಿ ನರೇಂದ್ರ ಮೋದಿ ...

Widgets Magazine