ಪ್ರತಿಯೊಬ್ಬರಿಗೂ ಗೋಮಾಂಸ ತಿನ್ನುವ ಹಕ್ಕಿದೆ: ಮೋದಿ ಸಂಪುಟದ ಸಚಿವ

ಮುಂಬೈ, ಶನಿವಾರ, 15 ಜುಲೈ 2017 (15:19 IST)

ramdas

ಗೋಮಾಂಸ ಮತ್ತು ಗೋ-ರಕ್ಷಕರ ಕುರಿತಾದ ವಿವಾದಗಳ ಮಧ್ಯೆ, ಕೇಂದ್ರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ರಾಮದಾಸ್ ಅಠಾವಾಲೆ ರಾಜ್ಯ ಸಚಿವ, ಪ್ರತಿಯೊಬ್ಬರಿಗೂ ಗೋಮಾಂಸ ತಿನ್ನಲು ಹಕ್ಕಿದೆ. ಯಾರೂ ತಮ್ಮ ಕೈಯಲ್ಲಿ ಕಾನೂನನ್ನು ತೆಗೆದುಕೊಳ್ಳಬಾರದು ಎಂದು ಹೇಳಿ ಮತ್ತೊಂದು ವಿವಾದಕ್ಕೆ ಕಾರಣವಾಗಿದ್ದಾರೆ.
 
ಗೋ-ರಕ್ಷಕರಿಂದ ಉಂಟಾದ ಹಿಂಸಾಚಾರದ ಘಟನೆಗಳ ಬಗ್ಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಕೂಡ ಕಳವಳವನ್ನು ವ್ಯಕ್ತಪಡಿಸಿದ್ದಾರೆ ಎಂದು ತಿಳಿಸಿದ್ದಾರೆ.
 
ದೇಶದ ಕಾನೂನನ್ನು ಗೌರವಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ಅದನ್ನು ಯಾರೂ ಕೈಗೆತ್ತಿಕೊಳ್ಳಬಾರದು ಎಂದು ಮನವಿ ಮಾಡಿದ್ದಾರೆ.
 
ದೇಶದಲ್ಲಿರುವ ಪ್ರತಿಯೊಬ್ಬರಿಗೂ ಗೋಮಾಂಸ ತಿನ್ನಲು ಹಕ್ಕಿದೆ. ಗೋ-ರಕ್ಷಕರಿಗೆ ಪೋಲೀಸ್ ದೂರನ್ನು ದಾಖಲಿಸುವ ಹಕ್ಕಿದೆ ಆದಾಗ್ಯೂ, ಕಾನೂನನ್ನು ತಮ್ಮ ಕೈಗೆ ತೆಗೆದುಕೊಂಡು ಹಲ್ಲೆ, ಹತ್ಯೆ ಮಾಡುವ ಯಾವುದೇ ಅಧಿಕಾರವಿಲ್ಲ. ಇವರು ಕಾನೂನಿಗಿಂತ ಮೇಲಲ್ಲ ಎಂದು ಕೇಂದ್ರದ ರಾಜ್ಯ ಸಚಿವ ರಾಮದಾಸ್ ಅಠವಾಲೆ ತಿಳಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. ಇದರಲ್ಲಿ ಇನ್ನಷ್ಟು ಓದಿ :  
ರಾಮದಾಸ್ ಅಠವಾಲೆ ಗೋಮಾಂಸ ನರೇಂದ್ರ ಮೋದಿ ಆರ್‌ಪಿಐ Ramdas Athawale Eat Beef Narendra Modi Rpi President

ಸುದ್ದಿಗಳು

news

ಪ್ರೀತಿಸಲು ನಿರಾಕರಿಸಿದ ಯುವತಿಯ ಫೋಟೋ ಅಶ್ಲೀಲ ವೆಬ್‌ಸೈಟ್‌ಗೆ ಹಾಕಿದ ಭೂಪ

ಅಹ್ಮದಾಬಾದ್: ಕಳೆದ ನಾಲ್ಕು ತಿಂಗಳುಗಳಿಂದ ಹಿಂಬಾಲಿಸಿ 22 ವರ್ಷದ ಯುವತಿಯನ್ನು ಪ್ರೀತಿಸಲು ಹೋಗಿ ಮುಖಭಂಗ ...

news

ದೇವೇಗೌಡರಿಗೆ ಪ್ರಧಾನಿ ನರೇಂದ್ರ ಮೋದಿಯಿಂದ ಬುಲಾವ್

ಬೆಂಗಳೂರು: ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರಿಗೆ ನವದೆಹಲಿಗೆ ಬರುವಂತೆ ಪ್ರಧಾನಿ ಮೋದಿ ಆಹ್ವಾನ ...

news

ಹೆಣ್ಣು ಹೆತ್ತದ್ದಕ್ಕಾಗಿ ವರದಕ್ಷಿಣೆ ನೆಪವೊಡ್ಡಿ ಬಾಣಂತಿಗೆ ಥಳಿತ

ಹೆಣ್ಣು ಮಗುವಿಗೆ ಜನ್ಮ ನೀಡಿದಳು ಎಂಬ ಕಾರಣಕ್ಕೆ ಹಸಿ ಬಾಣಂತಿಯೊಬ್ಬಳ ಮೇಲೆ ಆಕೆಯ ಮೈದುನ ಮತ್ತು ಸ್ನೇಹಿತ ...

news

ಪರಪ್ಪನ ಅಗ್ರಹಾರ ಜೈಲಾಗಿ ಉಳಿದಿಲ್ಲ, ಅದೊಂದು ಬಾರ್: ಆರ್.ಅಶೋಕ್

ಬೆಂಗಳೂರು: ಪರಪ್ಪನ ಅಗ್ರಹಾರ ಜೈಲು ಜೈಲಾಗಿ ಉಳಿದಿಲ್ಲ ಅದೊಂದು ಬಾರ್ ಎನ್ನುವಂತಾಗಿದೆ ಎಂದು ಬಿಜೆಪಿ ಮುಖಂಡ ...

Widgets Magazine