ಫೇಸ್ ಬುಕ್ ಗೆ ಆಧಾರ್ ಕಡ್ಡಾಯ ನಿಜವೇ? ಫೇಸ್ ಬುಕ್ ಕೊಟ್ಟಿದೆ ಸ್ಪಷ್ಟನೆ

ನವದೆಹಲಿ, ಗುರುವಾರ, 28 ಡಿಸೆಂಬರ್ 2017 (10:14 IST)

ನವದೆಹಲಿ: ಮುಂದಿನ ದಿನಗಳಲ್ಲಿ ಫೇಸ್ ಬುಕ್ ಖಾತೆಗೂ ಆಧಾರ್ ಲಿಂಕ್ ಮಾಡುವುದು ಕಡ್ಡಾಯ ಎಂಬ ಸುದ್ದಿಗಳ ಬೆನ್ನಲ್ಲೇ ಫೇಸ್ ಬುಕ್ ಸಂಸ್ಥೆ ಸ್ಪಷ್ಟನೆ ನೀಡಿದೆ.
 

ಹೊಸದಾಗಿ ಫೇಸ್ ಬುಕ್ ಖಾತೆ ತೆರೆಯುವವರಿಗೆ ಆಧಾರ್ ಖಾತೆ ವಿವರಣೆ ಕೇಳುತ್ತಿರುವುದು ಕಡ್ಡಾಯವಲ್ಲ ಎಂದು ಫೇಸ್ ಬುಕ್ ಹೇಳಿದೆ. ಹಾಗಿದ್ದರೂ ಅಕ್ರಮ ತಡೆಯುವ ನಿಟ್ಟಿನಲ್ಲಿ ಇಂತಹದ್ದೊಂದು ನಿಯಮ ತರಲಾಗಿದೆ ಎಂದಿದೆ.
 
ಫೇಸ್ ಬುಕ್ ಗೆ ಆಧಾರ್ ಲಿಂಕ್ ಕೇಳುವ ಮೂಲಕ ಖಾತೆದಾರರು ಅವರ ಮೂಲ ಹೆಸರನ್ನೇ ಬಳಸಲಿ ಮತ್ತು ನಕಲಿ ಹೆಸರಿನಲ್ಲಿ ಖಾತೆ ತೆರೆಯುವದನ್ನು ತಪ್ಪಿಸಲು ಇಂತಹದ್ದೊಂದು ಆಯ್ಕೆ ಕೇಳಲಾಗುತ್ತಿದೆ ಎಂದು ಫೇಸ್ ಬುಕ್ ಸ್ಪಷ್ಟನೆ ನೀಡಿದೆ. ಅಮೆರಿಕಾ ಮೂಲದ ಫೇಸ್ ಬುಕ್ ಸಂಸ್ಥೆಯ ಈ ನಿಯಮ ಭಾರೀ ಚರ್ಚೆಗೆ ಕಾರಣವಾಗಿತ್ತು. ಈ ಹಿನ್ನಲೆಯಲ್ಲಿ ಸಂಸ್ಥೆಯೇ ಸ್ಪಷ್ಟನೆ ನೀಡಿದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಗೋವಾದಲ್ಲಿ ಸೋನಿಯಾ ಗಾಂಧಿ ಜಾಲಿ ರೈಡ್!

ಪಣಜಿ: ಪುತ್ರ ರಾಹುಲ್ ಗಾಂಧಿಗೆ ಕಾಂಗ್ರೆಸ್ ಪಕ್ಷದ ಹೊಣೆ ವಹಿಸಿದ ಮೇಲೆ ಸೋನಿಯಾ ಗಾಂಧಿ ಏನು ಮಾಡಬೇಕೋ ...

news

‘ಕರ್ನಾಟಕಕ್ಕೆ ಮಹದಾಯಿಯ ಹನಿ ನೀರೂ ಕೊಡಲ್ಲ’

ಪಣಜಿ: ಮಹದಾಯಿ ನದಿ ನೀರಿಗಾಗಿ ಕರ್ನಾಟಕದಲ್ಲಿ ರೈತರು ಹೋರಾಟ ಮಾಡುತ್ತಿದ್ದರೆ, ಅತ್ತ ಗೋವಾ ಸಚಿವರೊಬ್ಬರು ...

news

ಕನ್ನಡ ಪರ ಸಂಘಟನೆಗಳ ಒಕ್ಕೂಟದಿಂದ ಕರಾಳ ದಿನಾಚರಣೆಗೆ ಕರೆ

ಬೆಂಗಳೂರು: ಮಹದಾಯಿ ಯೋಜನೆಗೆ ಆಗ್ರಹಿಸಿ ಇಂದು ಕರಾಳ ದಿನಾಚರಣೆ ನಡೆಸುವುದಾಗಿ ಕನ್ನಡ ಪರ ಸಂಘಟನೆಗಳ ...

news

ಡೈರೆಕ್ಟರ್ ಭೇಟಿ ಮಾಡಿಸುವುದಾಗಿ ಹೇಳಿ ರೂಪದರ್ಶಿಯನ್ನು ಫ್ಲಾಟಗೆ ಕರೆದೊಯ್ದರು

ಡೈರೆಕ್ಟರನ್ನು ಭೇಟಿ ಮಾಡಿಸುವುದಾಗಿ ಬಿಹಾರ ಮೂಲದ ರೂಪದರ್ಶಿಯ ಮೇಲೆ ಗ್ಯಾಂಗ್ ರೇಪ್ ಮಾಡಿರುವ ಘಟನೆ ...

Widgets Magazine