ಕೊನೆಗೂ ಸಿಕ್ತು 'ಪದ್ಮಾವತ್' ಗೆ ಬಿಡುಗಡೆ ಭಾಗ್ಯ; ರಾಜಸ್ತಾನ, ಮಧ್ಯಪ್ರದೇಶ ಸರ್ಕಾರ ಹಾಗೂ ಕರಣಿ ಸೇನೆಗೆ ಮುಖಭಂಗ

ನವದೆಹಲಿ, ಮಂಗಳವಾರ, 23 ಜನವರಿ 2018 (11:45 IST)

ನವದೆಹಲಿ: ಭಾರೀ ಚರ್ಚೆಗೆ ಗ್ರಾಸವಾಗಿದ್ದ ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ 'ಪದ್ಮಾವತ್' ಚಿತ್ರದ ಪ್ರದರ್ಶನಕ್ಕೆ ಈಗ ಒಪ್ಪಿಗೆಯ ಮುದ್ರೆ ಸಿಕ್ಕಿದೆ. ದೇಶಾದ್ಯಂತ ಜನವರಿ 25ರಂದು  'ಪದ್ಮಾವತ್' ಚಿತ್ರ ಪ್ರದರ್ಶನಗೊಳ್ಳಲಿದೆ. ‘ಪದ್ಮಾವತ್‌’ ಚಿತ್ರ ಬಿಡುಗಡೆಗೆ ನೀಡಿದ್ದ ವಾಪಸ್‌ ಪಡೆಯುವಂತೆ ಕೋರಿ ರಾಜಸ್ಥಾನ ಮತ್ತು ಮಧ್ಯಪ್ರದೇಶ ಸರ್ಕಾರಗಳು ಸುಪ್ರೀಂ ಕೋರ್ಟ್‌ಗೆ ಮಧ್ಯಂತರ ಅರ್ಜಿ ಸಲ್ಲಿಸಿದ್ದರು. ಈ ಹಿನ್ನೆಲೆ ಇಂದು ಸುಪ್ರೀಂಕೋರ್ಟ್ ನಲ್ಲಿ ಈ ಅರ್ಜಿಯ ವಿಚಾರಣೆ ನಡೆದಿತ್ತು. 


ಮಧ್ಯಪ್ರದೇಶ, ರಾಜಸ್ಥಾನ ಸರ್ಕಾರಗಳ ಪುನರ್ ಪರಿಶೀಲನಾ ಅರ್ಜಿಯನ್ನು ಸುಪ್ರೀಂಕೋರ್ಟ್ ನಿರಾಕರಿಸಿದೆ. ಜನವರಿ 25 ರಂದೇ ಪದ್ಮಾವತ್ ಚಿತ್ರ ಬಿಡುಗಡೆಗೊಳ್ಳಲಿದೆ. ಹಿಂಸೆ ಹಿನ್ನೆಲೆಯಲ್ಲಿ ಚಿತ್ರ ನಿಷೇಧ ಮಾಡಲು ಸಾಧ್ಯವಿಲ್ಲ. ಅರಾಜಕತೆ ಸೃಷ್ಟಿಸುವ ಶಕ್ತಿಗಳನ್ನು ಉತ್ತೇಜಿಸಲು ಆಗಲ್ಲ. ಕಾನೂನು-ಸುವ್ಯವಸ್ಥೆ ಕಾಪಾಡುವುದು ಆಯಾ ರಾಜ್ಯ ಸರ್ಕಾರಗಳ ಕೆಲಸ ಎಂದು ಸುಪ್ರೀಂಕೋರ್ಟ್ ಹೇಳಿದೆ. ಅದು ಅಲ್ಲದೇ, ಆದೇಶ ಪಾಲಿಸುವಂತೆ ಸರ್ಕಾರಗಳಿಗೆ ಕೋರ್ಟ್ ಸೂಚನೆ ನೀಡಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಪೊಲೀಸ್ ಅಧಿಕಾರಿಗೆ ಬೆದರಿಕೆ ಹಾಕಿದ ಬಿಜೆಪಿ ಸಂಸದ ರಾಮ್ ಶಂಕರ್ ಕಟೆರಿಯಾ; ವೈರಲ್ ಆಯ್ತು ಬೆದರಿಕೆ ಆಡಿಯೋ

ಲಕ್ನೋ: ರಾಷ್ಟ್ರೀಯ ಪರಿಶಿಷ್ಟ ಜಾತಿ ಆಯೋಗದ ಅಧ್ಯಕ್ಷ, ಆಗ್ರಾದ ಬಿಜೆಪಿ ಸಂಸದ ರಾಮ್ ಶಂಕರ್ ಕಟೆರಿಯಾ ಅವರು ...

news

ಸಚಿವ ರಮೇಶ್ ಕುಮಾರ್ ಸಂಸದ ಪ್ರತಾಪ್ ಸಿಂಹ ವಿರುದ್ಧ ಕಿಡಿಕಾರಿದ್ದು ಯಾಕೆ…?

ಗದಗ : ಆರೋಗ್ಯ ಸಚಿವ ರಮೇಶ್ ಕುಮಾರ್ ಅವರು ಸಂಸದ ಪ್ರತಾಪ್ ಸಿಂಹ ಅವರು ವಿರುದ್ದ ತೀವ್ರ ಆಕ್ರೋಶ ...

news

ಯಡಿಯೂರಪ್ಪನವರಿಗೆ ಕೈ ಕೊಟ್ಟ ಬಲಗೈ ಬಂಟ

ಬೆಂಗಳೂರು: ಚುನಾವಣೆಗೆ ಮೊದಲೇ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪಗೆ ಆಪ್ತ ಬಂಟನಿಂದಲೇ ಶಾಕ್ ...

news

ಬಂಟ್ವಾಳದಲ್ಲಿ ಚುನಾವಣೆಯ ವಿಷಯ ಅಲ್ಲಾ, ರಾಮ ಎಂದ ಬಿಜೆಪಿ ಶಾಸಕ

ಮುಂಬರುವ ವಿಧಾನಸಭೆ ಚುನಾವಣೆ ವಿಷಯ ಬಂ‌ಟ್ಟಾಳದಲ್ಲಿ ಅಲ್ಲ ಮತ್ತು ರಾಮ ಎಂದು ಬಿಜೆಪಿ ಶಾಸಕ ಸುನೀಲ್ ಕುಮಾರ್ ...

Widgets Magazine