ಐಟಿ ರಿಟರ್ನ್ಸ್ ಗೆ ಇಂದೇ ಕಡೇ ದಿನ: ಗಡುವು ವಿಸ್ತರಣೆ ಇಲ್ಲ

ಬೆಂಗಳೂರು, ಸೋಮವಾರ, 31 ಜುಲೈ 2017 (07:10 IST)

2016-17ನೇ ಸಾಲಿನ ಆದಾಯ ತೆರಿಗೆ ರಿಟರ್ನ್ಸ್‌(ಐಟಿಆರ್‌) ಸಲ್ಲಿಸಲು ಇಂದೇ ಕಡೆಯ ದಿನವಾಗಿದ್ದು, ಈ ಗಡುವನ್ನು ವಿಸ್ತರಿಸುವ ಯಾವುದೇ ಯೋಚನೆ ನಮ್ಮ ಮುಂದೆ ಇಲ್ಲ ಎಂದು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. 
 
ರಿಟರ್ನ್ಸ್‌ ಫೈಲ್ ಮಾಡಲು ಜುಲೈ 31 ಅಂದರೆ ಇಂದೇ ಕೊನೆಯ ದಿನವಾಗಿದ್ದು, ಇದನ್ನು ವಿಸ್ತರಿಸುವ ಯೋಚನೆ ಇಲ್ಲ. ಇಲಾಖೆಗೆ ಈಗಾಗಲೇ 2 ಕೋಟಿ ಐಟಿ ರಿಟರ್ನ್ಸ್ ಫೈಲ್ ಮಾಡಲಾಗಿದೆ. ಉಳಿದವರು ನಿಗದಿತ ಅವಧಿಯಲ್ಲೇ ಫೈಲ್ ಮಾಡಬೇಕು ಎಂದು ಮನವಿ ಮಾಡುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
 
ಇನ್ನು ಹೆಚ್ಚಿನ ಸಂಖ್ಯೆಯಲ್ಲಿ ವೇತನದಾರರು ಮತ್ತು ಪಿಂಚಣಿದಾರರಿಗೆ ರಿರ್ಟನ್ಸ್‌ ಸಲ್ಲಿಕೆಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ಆದಾಯ ತೆರಿಗೆ ಇಲಾಖೆ ಬೆಂಗಳೂರಿನ ಅರಮನೆ ಮೈದಾನದ ಗಾಯಿತ್ರಿ ವಿಹಾರದಲ್ಲಿ ಜು.29ರಿಂದ 31ರವರೆಗೆ ಮೂರು ದಿನಗಳ ವಿಶೇಷ ಮೇಳ ಆಯೋಜಿಸಿದೆ. ರಿಟರ್ನ್ಸ್ ಸಲ್ಲಿಕೆಗಾಗಿ ಇಲ್ಲಿ 54 ವಿಶೇಷ ಕೌಂಟರ್‌ಗಳನ್ನು ತೆರೆಯಲಾಗಿದೆ. 
 ಇದರಲ್ಲಿ ಇನ್ನಷ್ಟು ಓದಿ :  
ಆದಾಯ ತೆರಿಗೆ ರಿಟರ್ನ್ಸ್ Deadline It Department Income Tax Returns

ಸುದ್ದಿಗಳು

news

ಶತೃಗಳನ್ನು ಮಣಿಸುವ ಸಾಮರ್ಥ್ಯ ನಮ್ಮ ಸೇನೆಗಿದೆ: ಕ್ಸಿ ಜಿನ್ ಪಿಂಗ್

ಶತೃ ರಾಷ್ಟ್ರಗಳ ಎದುರು ಬಲಿಷ್ಠ ಮಿಲಿಟರಿ ಶಕ್ತಿಯನ್ನು ಪ್ರದರ್ಶಿಸಿ ಹೊಸ ಅಧ್ಯಾಯ ಸೃಷ್ಟಿಸುವ ಸಾಮರ್ಥ್ಯ ...

news

ರಾಜ್ಯಕ್ಕೆ ಪ್ರತ್ಯೇಕ ನಾಡಧ್ವಜ ಬೇಕು: ಕವಿ ಸಿದ್ದಲಿಂಗಯ್ಯ

ಬೆಂಗಳೂರು: ರಾಜ್ಯದಲ್ಲಿ ನಾಡಗೀತೆಯಿರುವಾಗ ನಾಡಧ್ವಜ ಯಾಕಿರಬಾರದು ಎಂದು ಕವಿ ಸಿದ್ದಲಿಂಗಯ್ಯ ...

news

ಸಿಎಂ ಸಿದ್ದರಾಮಯ್ಯ ಬ್ರಿಟೀಷರಿಗಿಂತ ಕಡಿಮೆಯಿಲ್ಲ: ಸದಾನಂದಗೌಡ

ಬೆಂಗಳೂರು: ಸಿಎಂ ಸಿದ್ದರಾಮಯ್ಯ ಧರ್ಮವನ್ನು ಒಡೆದು ಆಳುತ್ತಿದ್ದು ಅವರು ಬ್ರಿಟೀಷರಿಗಿಂತ ಕಡಿಮೆಯಿಲ್ಲ ಎಂದು ...

news

ಸೋನಿಯಾ ಕಾರ್ಯದರ್ಶಿ ಅಹ್ಮದ್ ಪಟೇಲ್ ಗೆಲುವು ಖಚಿತ: ಗೋಯಲ್

ಬೆಂಗಳೂರು: ರಾಜ್ಯಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಗೆಲ್ಲುವುದು ಖಚಿತ. ಪ್ರಜಾಪ್ರಭುತ್ವವನ್ನು ಉಳಿಸಲು ...

Widgets Magazine