ಬಿಜೆಪಿ ಎಂಪಿ ರೂಪಾ ಗಂಗೂಲಿ ವಿರುದ್ಧ ಎಫ್ ಐಆರ್ ದಾಖಲು

ನವದೆಹಲಿ, ಭಾನುವಾರ, 16 ಜುಲೈ 2017 (11:03 IST)

ನವದೆಹಲಿ:ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್‌ ಆಡಳಿತ ಟೀಕಿಸುವ ಭರದಲ್ಲಿ  ವಿವಾದಾತ್ಮಕ ಹೇಳಿಕೆ ನೀಡಿದ್ದ ಬಿಜೆಪಿ ರಾಜ್ಯಸಭಾ ಸದಸ್ಯೆ ರೂಪಾ ಗಂಗೂಲಿ ವಿರುದ್ಧ  ಎಫ್‌ಐಆರ್‌ ದಾಖಲಾಗಿದೆ. ಅಲ್ಲದೇ ಪಶ್ಚಿಮ ಬಂಗಾಳ ರಾಜ್ಯ ಬಿಜೆಪಿ ಅಧ್ಯಕ್ಷ ದಿಲಿಪ್‌ ಘೋಷ್‌ ವಿರುದ್ಧ ತನಿಖೆ ಕೈಗೊಳ್ಳಲಾಗಿದೆ. 
 
ರಾಜ್ಯದಲ್ಲಿ ಪ್ರತಿ ನಿತ್ಯ ಎಂಬಂತೆ ನಡೆಯುತ್ತಿರುವ ಅತ್ಯಾಚಾರ ಪ್ರಕರಣವನ್ನು ಪ್ರಸ್ತಾಪಿಸುತ್ತಾ ಬಂಗಾಳದಲ್ಲಿ  ತೃಣಮೂಲ ನಾಯಕರಿಂದ ತಮ್ಮಪತ್ನಿಯರು ಹಾಗೂ ಪುತ್ರಿಯರು, ಸೊಸೆಯಂದಿರನ್ನು ರಕ್ಷಿಸಿಕೊಳ್ಳುವುದೇ ಜನರಿಗೆ ದೊಡ್ಡ ಸವಾಲು. ನಾಯಕರ ಸಂಪರ್ಕಕ್ಕೆ ಬಂದ ಯಾವುದೇ ಮಹಿಳೆ ಅತ್ಯಾಚಾರಕ್ಕೊಳಗಾಗದೇ 15 ದಿನವೂ ಬದುಕಲು ಸಾಧ್ಯವಿಲ್ಲ ಎಂದು ಹೇಳಿಕೆ ನೀಡಿದ್ದರು. ಈ ಹೇಳಿಕೆಯಿಂದ ನನ್ನ ಘನತೆಗೆ ಧಕ್ಕೆಯಾಗಿದೆ ಹಾಗೂ ನನಗೆ ಬೆದರಿಕೆಯುಂಟಾಗಿದೆ ಎಂದು ಮಹಿಳೆಯೊಬ್ಬರು ದೂರು ನೀಡಿದ್ದರು. 
 
ಈ ಹಿನ್ನಲೆಯಲ್ಲಿ ರೂಪಾ ಗಂಗೂಲಿ ವಿರುದ್ಧ ಸಾರ್ವಜನಿಕ ಅವಮಾನಕಾರಿ ಹೇಳಿಕೆ ಹಾಗೂ ಅಪರಾಧಕ್ಕೆ ಪ್ರೇರಣೆ ನೀಡುವಂತಹ ಹೇಳಿಕೆ ನೀಡಿದ ಆರೋಪದಲ್ಲಿ ಎಫ್ ಐ ಆರ್ ದಾಖಲಿಸಲಾಗಿದೆ. 
 ಇದರಲ್ಲಿ ಇನ್ನಷ್ಟು ಓದಿ :  
ಬಿಜೆಪಿ ಎಂ ಪಿ ರೂಪಾ ಗಂಗೂಲಿ ಎಫ್ ಐ ಆರ್ Police Inquiry Against Dilip Ghosh Fir Against Roopa Ganguly

ಸುದ್ದಿಗಳು

news

ಕಪಟಿ ಚೀನಾಗೆ ಭಾರತದ ಖಡಕ್ ಉತ್ತರ

ನವದೆಹಲಿ: ಒಂದು ಕಡೆ ಸಿಕ್ಕಿಂ ಗಡಿಯಲ್ಲಿ ಗಡಿ ತಗಾದೆ ತೆಗೆಯುತ್ತಿರುವ ಚೀನಾ ಮತ್ತೊಂದೆಡೆ ಪಾಕ್ –ಭಾರತ ...

news

ಆಕೆ ತೀರಿಕೊಂಡು ಐದು ವರ್ಷ ಕಳೆದರೂ ಹೋಟೆಲ್ ಕೊಠಡಿಗೆ ಇನ್ನೂ ಬೀಗ!

ನವದೆಹಲಿ: ಕಾಂಗ್ರೆಸ್ ನಾಯುಕ ಶಶಿ ತರೂರ್ ಪತ್ನಿ ಸುನಂದಾ ಪುಷ್ಕರ್ ದೆಹಲಿಯ ಲೀಲಾ ಪ್ಯಾಲೇಸ್ ಹೋಟೆಲ್ ...

news

ಡಿಐಜಿ ರೂಪಾ, ಜೈಲು ಅಧೀಕ್ಷಕ ಕೃಷ್ಣಕುಮಾರ್ ಮಧ್ಯೆ ವಾಗ್ವಾದ

ಬೆಂಗಳೂರು: ಪರಪ್ಪನ ಅಗ್ರಹಾರ ಜೈಲಿಗೆ ಭೇಟಿ ನೀಡಿದ ಡಿಐಜಿ ರೂಪಾ ಮೌಡ್ಗಿಲ್, ಜೈಲು ಅಧೀಕ್ಷಕ ಕೃಷ್ಣಕುಮಾರ್ ...

news

ಕಾಂಗ್ರೆಸ್ ಕಾರ್ಯಕರ್ತರಿಗೆ ಸಿಗುವಷ್ಟು ಮತಗಳು ಬಿಜೆಪಿ ಮುಖಂಡರಿಗೆ ಸಿಗೋಲ್ಲ: ಖಾದರ್

ಮಂಗಳೂರು: ಕಾಂಗ್ರೆಸ್ ಕಾರ್ಯಕರ್ತರಿಗೆ ಸಿಗುವಷ್ಟು ಮತಗಳು ಬಿಜೆಪಿ ಮುಖಂಡರಿಗೆ ಸಿಗೋಲ್ಲ ಎಂದು ಸಚಿವ ...

Widgets Magazine