ಅಣ್ಣಾಡಿಎಂಕೆ ಚಿಹ್ನೆಗಾಗಿ ಲಂಚದ ಆರೋಪ: ಟಿಟಿವಿ ದಿನಕರನ್ ವಿರುದ್ಧ ಎಫ್ಐಆರ್

ನವದೆಹಲಿ, ಸೋಮವಾರ, 17 ಏಪ್ರಿಲ್ 2017 (10:58 IST)

Widgets Magazine

ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಜೈಲು ಸೇರಿರುವ ಶಶಿಕಲಾ ಬಣಕ್ಕೆ ಮತ್ತಷ್ಟು ಸಂಕಷ್ಟ ಎದುರಾಗಿದೆ  ಚುನಾವಣಾ ಆಯೋಗ ಸ್ಥಗಿತಗೊಳಿಸಿರುವ ಅಣ್ಣಾಡಿಎಂಕೆಯ ಎರಡು ಎಲೆ ಚಿಹ್ನೆಗಾಗಿ ಮಧ್ಯವರ್ತಿ ಮೂಲಕ ಚುನಾವಣಾ ಆಯೋಗಕ್ಕೆ ಲಂಚ ನೀಡಿಕೆ ಆರೋಪದಡಿ ಅಣ್ಣಾಡಿಎಂಕೆ ಮುಖಂಡ ಟಿಟಿವಿ ದಿನಕರನ್ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ.
 


1.5 ಕೋಟಿ ರೂ. ಹಣದೊಂದಿಗೆ ಮಧ್ಯವರ್ತಿ ಚಂದ್ರಶೇಖರ್ ಎಂಬುವವನನ್ನ ಬಂಧಿಸಿರುವ ಸಿಸಿಬಿ ಪೊಲೀಸರು ವಿಚಾರಣೆಗೆ ಹಾಜರಾಗುವಂತೆ ದಿನಕರನ್`ಗೆ ಸಮನ್ಸ್ ಜಾರಿ ಮಾಡಿದ್ದಾರೆ. ಬಂಧಿತನಿಂದ ಬಿಎಂಡಬ್ಲ್ಯೂ  ಮತ್ತು ಮರ್ಸಿಡಿಸ್ ಕಾರನ್ನೂ ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಟಿಟಿವಿ ದಿನಕರನ್ ಶಶಿಕಲಾ ಸೋದರಳಿಯನಾಗಿದ್ದು, ಚುನಾವಣಾ ಆಯೋಗ ಸ್ಥಗಿತಗೊಳಿಸಿರುವ ಎರಡು ಎಲೆ  ಚಿಹ್ನೆಯನ್ನ ಪಡೆಯಲು ಮಧ್ಯವರ್ತಿ ಮೂಲಕ ಲಂಚದ ಆಮಿಷವೊಡ್ಡಿದ್ದ. ಒಂದೊಮ್ಮೆ ಶಶಿಕಲಾ ಬಣಕ್ಕೆ ಚಿಹ್ನೆ ದೊರೆತರೆ 60 ಕೋಟಿ ರೂ. ನೀಡುವುದಾಗಿ ದಿನಕರನ್, ಮಧ್ವರ್ತಿ ಮೂಲಕ ಲಂಚದ ಆಫರ್ ಕೊಟ್ಟಿದ್ದ ಎಂಬ ಆರೋಪ ಕೇಳಿಬಂದಿದೆ.
 
ಜಯಲಲಿತಾ ನಿಧನದ ಬಳಿಕ ತೆರವಾಗಿದ್ದ ಆರ್.ಕೆ. ನಗರ ಉಪಚುನಾವಣೆಯಲ್ಲಿ ಪನ್ನೀರ್ ಸೆಲ್ವಂ ಬಣ ಮತ್ತು ಶಶಿಕಲಾ ಬಣದ ನಡುವೆ ಎರಡು ಚಿಹ್ನೆಗಾಗಿ ಪೈಪೋಟಿ ಏರ್ಪಟ್ಟ ಹಿನ್ನೆಲೆಯಲ್ಲಿ ಚುನಾವಣಾ ಆಯೋಗ ಈ ಚಿಹ್ನೆಯನ್ನ ಸ್ಥಗಿತಗೊಳಿಸಿ ಇಬ್ಬರಿಗೂ ಬೇರೆ ಬೇರೆ ಚಿಹ್ನೆ ನೀಡಿತ್ತು. ಬಳಿಕ 89 ಕೋಟಿ ರೂ. ಹಣ ಈ ಕ್ಷೇತ್ರದಲ್ಲಿ ಹಂಚಿಕೆಯಾಗಿದೆ ಎಂಬ ಾರೋಪದ ಬಳಿಕ ಚುನಾವಣೆಯನ್ನೇ ರದ್ದು ಮಾಡಲಾಯ್ತು.Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಮೈಸೂರಿನ ಬಳಿ ಕೊತ ಕೊತ ಕುದಿಯುತ್ತಿರುವ ಭೂಮಿ: ಬಾಲಕ ಬಲಿ

ಮೈಸೂರು ಬಳಿಯ ಗ್ರಾಮವೊಂದರ ಭೂಮಿಯಲ್ಲಿ ಕೊತ ಕೊತ ಕುದಿಯುವ ಬೆಂಕಿ ಕಾಣಿಸಿಕೊಂಡು ಬಹಿರ್ದೆಸೆಗೆ ತೆರಳಿದ್ದ ...

news

ಸ್ನ್ಯಾಪ್ ಚ್ಯಾಟ್ ಬದಲು ಸ್ನಾಪ್ ಡೀಲ್ ಗೆ ಬಹಿಷ್ಕಾರ ಹಾಕುತ್ತಿರುವ ಜನತೆ!

ನವದೆಹಲಿ: ಭಾರತವನ್ನು ಬಡ ದೇಶ, ಅಲ್ಲಿ ಸಾಮ್ರಾಜ್ಯ ವಿಸ್ತರಿಸಲು ನನಗೆ ಇಷ್ಟವಿಲ್ಲ ಎಂದು ಸ್ನ್ಯಾಪ್ ಚ್ಯಾಟ್ ...

news

ವಾಚಾಳಿ ಬಿಜೆಪಿ ನಾಯಕರಿಗೆ ಪ್ರಧಾನಿ ಮೋದಿ ಸ್ಟ್ರಾಂಗ್ ಮೆಸೇಜ್!

ನವದೆಹಲಿ: ಬಿಜೆಪಿ ನಾಯಕರು ಆಗಾಗ ಎಗ್ಗಿಲ್ಲದೆ ನಾಲಿಗೆ ಹರಿಯಬಿಟ್ಟು ಕಟು ಟೀಕೆಗೆ ಒಳಗಾಗುವುದಲ್ಲದೆ ...

news

ಪ್ರಧಾನಿ ಮೋದಿ ಮಧ್ಯಸ್ಥಿಕೆ ವಹಿಸಲಿ: ಸಿಎಂ ಸಿದ್ದರಾಮಯ್ಯ

ಬೆಂಗಳೂರು: ರಾಜ್ಯಗಳ ನಡುವೆ ಎದುರಾಗಿರುವ ಜಲ ವಿವಾದಗಳನ್ನು ಬಗೆಹರಿಸಲು ಪ್ರಧಾನಿ ಮೋದಿ ಮಧ್ಯಸ್ಥಿಕೆ ...