ಶಾಲಾ ಮಕ್ಕಳ ಮೇಲೆ ಫೈರಿಂಗ್: ಪಾಕಿಸ್ತಾನಕ್ಕೆ ಭಾರತ ಖಡಕ್ ಎಚ್ಚರಿಕೆ

ಶ್ರೀನಗರ, ಶುಕ್ರವಾರ, 21 ಜುಲೈ 2017 (11:37 IST)

ಶ್ರೀನಗರ:ಜಮ್ಮು-ಕಾಶ್ಮೀರದ ರಜೌರಿ ಜಿಲ್ಲೆಯಲ್ಲಿರುವ ನೌಶೆರಾ ಸೆಕ್ಟರ್ ಬಳಿಯ ಗಡಿ ನಿಯಂತ್ರಣ ರೇಖೆ ಬಳಿ ಸೇನೆ ನಾಗರಿಕರು ಹಾಗೂ ಶಾಲಾ ಮಕ್ಕಳನ್ನು ಗುರಿಯಾಗಿರಿಸಿಕೊಂಡು ಗುಂಡಿನ ದಾಳಿ ನಡೆಸುತ್ತಿದ್ದು, ಇದನ್ನು ತೀವ್ರವಾಗಿ ಖಂಡಿಸಿರುವ ಭಾರತ, ಯಾವುದೇ ಸೇನೆ ಶಾಲಾ ಮಕ್ಕಳ ಮೇಲೆ ಗುಂಡಿನ ದಾಳಿ ನಡೆಸುವುದಿಲ್ಲ ಇಂತಹ ಕೆಟ್ಟ ವರ್ತನೆಯನ್ನು ನಿಲ್ಲಿಸುವಂತೆ ಪಾಕಿಸ್ತಾನಕ್ಕೆ ಖಡಕ್ ಎಚ್ಚರಿಕೆ ನೀಡಿದೆ.
 
ಪಾಕ್ ಅಪ್ರಚೋದಿತ ಗುಂಡಿನ ದಾಳಿ ಹಿನ್ನಲೆಯಲ್ಲಿ ಭಾರತೀಯ ಸೇನೆಯ ಡಿಜಿಎಂ ಎ.ಕೆ. ಭಟ್ ಅವರು, ಪಾಕಿಸ್ತಾನದ ಡಿಜಿಎಂಒ ಮೇಜರ್ ಜನರಲ್ ಸಾಹಿರ್ ಷಂಶದ್ ಮಿರ್ಜಾ ಅವರೊಂದಿಗೆ ಮಾತುಕತೆ ನಡೆಸಿದ್ದು, ಪಾಕಿಸ್ತಾನಕ್ಕೆ ಖಡಕ್ ಎಚ್ಚರಿಕೆ ನೀಡಿದ್ದಾರೆ. ನಿಮ್ಮ ಸೇನೆಯನ್ನು ನಿಯಂತ್ರಣದಲ್ಲಿಟ್ಟುಕೊಳ್ಳಿ ಹಾಗೂ ಪಾತಕ ಚಟುವಟಿಕೆಗಳಿಂದ ದೂರವಿರುವಂತೆ ಎಚ್ಚರಿಸಿದ್ದಾರೆ.
 
ಶಾಲಾ ಮಕ್ಕಳ ಮೇಲೆ ಗುಂಡು ಹಾರಿಸುವ ಕೆಟ್ಟ ವರ್ತನೆಯನ್ನು ಯಾವುದೇ ಸೇನೆ ಮಾಡುವುದಿಲ್ಲ. ಭಾರತೀಯ ಸೇನೆ ವೃತ್ತಿಪರ ಸೇನೆಯಾಗಿದ್ದು, ನಾಗರಿಕರನ್ನು ಗುರಿಯಾಗಿಸಿಕೊಂಡು ನಡೆಸಲಾಗುವು ದಾಳಿಗಳನ್ನು ತಪ್ಪಿಸಲು ಎಲ್ಲಾ ರೀತಿ ಎಚ್ಚರ ವಹಿಸುತ್ತದೆ ಎಂದು ಹೇಳಿದ್ದಾರೆ.
 ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಭಾರತ-ಚೀನಾ ವಿವಾದಕ್ಕೆ ತುಪ್ಪ ಸುರಿಯಲು ಯತ್ನಿಸುತ್ತಿರುವ ಪಾಕ್

ನವದೆಹಲಿ: ಸಿಕ್ಕಿಂ ಗಡಿಯಲ್ಲಿ ಭಾರತ ಮತ್ತು ಚೀನಾ ನಡುವೆ ಸಂಘರ್ಷ ನಡೆಯುತ್ತಿದ್ದರ, ಇತ್ತ ಭಾರತದ ಶತ್ರು ...

news

ಆಪ್ ಮೂಲಕವೇ ಬಂಜೆತನಕ್ಕೆ ಚಿಕಿತ್ಸೆ ಪಡೆದವಳು ಇದೀಗ ಗರ್ಭಿಣಿ!

ನವದೆಹಲಿ: ತಾಂತ್ರಿಕವಾಗಿ ನಾವು ಇಂದು ಎಷ್ಟು ಮುಂದುವರಿದಿದ್ದೇವೆ ಎಂಬುದಕ್ಕೆ ಈ ಘಟನೆ ಮತ್ತೊಂದು ಸಾಕ್ಷಿ. ...

news

ಕುಣಿಕೆಯೊಳಗೆ ಬಾಲ್ ಹಾಕಲಾಗದೇ ಒದ್ದಾಡಿದ ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಸಿಎಂ ಸಿದ್ದರಾಮಯ್ಯ ನಿನ್ನೆ ಕಂಠೀರವ ಸ್ಟೇಡಿಯಂನಲ್ಲಿ ಮೇಲ್ದರ್ಜೆಗೇರಿಸಿದ್ದ ಒಳಾಂಗಣ ...

news

ಮತ್ತೊಂದು ನೋಟ್ ಬ್ಯಾನ್ ಮಾಡ್ತಾರಾ ಮೋದಿ..? 2000 ರೂ. ನೋಟು ತೆರೆಮರೆಗೆ ಸರಿಯುತ್ತಾ..?

ನೋಟ್ ಬ್ಯಾನ್ ಬಳಿಕ ಹಣ ಬದಲಾವಣೆಗೆ ಪರದಾಡಿದ್ದನ್ನ ದೇಶದ ಜನ ಇನ್ನೂ ಮರೆತಿಲ್ಲ. ಅದಾಗಲೇ ಮತ್ತೊಂದು ನೋಟ್ ...

Widgets Magazine