Widgets Magazine
Widgets Magazine

ಪಂಚರಾಜ್ಯಗಳ ಮತದಾನ ಸಂಪೂರ್ಣ

ಲಖನೌ, ಗುರುವಾರ, 9 ಮಾರ್ಚ್ 2017 (07:37 IST)

Widgets Magazine

ಐದು ರಾಜ್ಯಗಳ ವಿಧಾನಸಭೆಗಳಿಗೆ ನಡೆದ ಬಹುಹಂತದ ಬುಧವಾರ ಕೊನೆಗೊಂಡಿದೆ. ಮಾರ್ಚ್ 11 ಶನಿವಾರ ಫಲಿತಾಂಶ ಹೊರಬೀಳಲಿದೆ.
ಬುಧವಾರ ಉತ್ತರಪ್ರದೇಶದಲ್ಲಿ ಏಳನೇ ಹಂತದ ಮತ್ತು ಮಣಿಪುರದಲ್ಲಿ ಎರಡನೆ ಹಂತದ ಮತದಾನ ನಡೆಯಿತು.  ರಾಷ್ಟ್ರದ ದೊಡ್ಡ ರಾಜ್ಯವೆನಿಸಿಕೊಂಡಿರುವ ಉತ್ತರ ಪ್ರದೇಶದಲ್ಲಿ ನಿನ್ನೆ 60% ಮತದಾನವಾಗಿದ್ದರೆ,ಮಣಿಪುರದಲ್ಲಿ 86% ರಷ್ಟು ಜನ ತಮ್ಮ ಹಕ್ಕನ್ನು ಚಲಾಯಿಸಿದ್ದಾರೆ.
 
ಗೋವಾ ರಾಜ್ಯದಲ್ಲಿ ಫೆಬ್ರುವರಿ 4 ರಂದು ಒಂದೇ ಹಂತದಲ್ಲಿ ಒಟ್ಟು 40 ವಿಧಾನಸಭಾ ಕ್ಷೇತ್ರಗಳಿಗೆ, 117 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ ಪಂಜಾಬ್‌ ರಾಜ್ಯದಲ್ಲಿ ಫೆಬ್ರುವರಿ 4 ರಂದು, 71 ವಿಧಾನಸಭಾ ಸ್ಥಾನಗಳನ್ನು ಹೊಂದಿರುವ ಉತ್ತರಾಖಂಡ ರಾಜ್ಯದಲ್ಲಿ ಫೆಬ್ರುವರಿ 15 ರಂದು ಒಂದೇ ಹಂತದಲ್ಲಿ ಚುನಾವಣೆ ನಡೆದಿತ್ತು.
 
ಈಶಾನ್ಯ ಭಾರತದ ಮಣಿಪುರ ರಾಜ್ಯದಲ್ಲಿ ಎರಡು ಹಂತಗಳಲ್ಲಿ ಚುನಾವಣೆ ನಡೆದಿತ್ತು. ಮಣಿಪುರದ ಒಟ್ಟು 60 ವಿಧಾನಸಭಾ ಕ್ಷೇತ್ರಗಳಿಗೆ ಮಾರ್ಚ್ 4 ಹಾಗೂ ಮಾರ್ಚ್ 8ರಂದು  ಮತದಾನ ನಡೆದಿತ್ತು.
 
ದೇಶದ ದೊಡ್ಡ ರಾಜ್ಯ ಉತ್ತರಪ್ರದೇಶದಲ್ಲಿ ಏಳು ಹಂತಗಳಲ್ಲಿ ಮತದಾನ ನಡೆದಿತ್ತು. ಫೆಬ್ರುವರಿ 11ರಿಂದ ಮಾರ್ಚ್‌ 8ರ ವರೆಗೆ 403 ಸ್ಥಾನಗಳಿಗೆ ಚುನಾವಣೆ ನಡೆದಿದೆ.
 Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ಬಿಡಿಎ ಆಯುಕ್ತ ರಾಜಕುಮಾರ್ ಖತ್ರಿ ಎತ್ತಂಗಡಿ

ಬೆಂಗಳೂರು: ಬಿಡಿಎ ಆಯುಕ್ತರಾಗಿದ್ದ ರಾಜಕುಮಾರ್ ಖತ್ರಿಯವರನ್ನು ಎತ್ತಂಗಡಿ ಮಾಡಿ ಕ್ರೀಡಾ ಮತ್ತು ಯುವಜನ ...

news

ಉತ್ತರಪ್ರದೇಶದಲ್ಲಿ ಅಖಿಲೇಶ್, ಮಾಯಾವತಿ ಸರಕಾರ?

ನವದೆಹಲಿ: ಪಂಚರಾಜ್ಯಗಳ ಚುನಾವಣೋತ್ತರ ಸಮೀಕ್ಷೆ ಹೊರಬಿದ್ದಿದ್ದು, ಉತ್ತರಪ್ರದೇಶದಲ್ಲಿ ಸಮಾಜವಾದಿ ಪಕ್ಷದ ...

news

ರಾಜನಾಥ್ ಮೆಚ್ಚುಗೆಗೆ ಉಗ್ರನ ತಂದೆಯ ಧನ್ಯವಾದ

ತನ್ನ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿರುವ ಕೇಂದ್ರ ಗೃಹ ಸಚಿವರಿಗೆ ಉಗ್ರ ಸೈಫುಲ್ಲಾ ತಂದೆ ಸರ್ತಾಜ್ ...

news

ಚುನಾವಣೋತ್ತರ ಸಮೀಕ್ಷೆ: ಯಾವ ರಾಜ್ಯದಲ್ಲಿ ಯಾವ ಪಕ್ಷ ಸರಕಾರ ರಚಿಸುತ್ತೆ ಗೊತ್ತಾ?

ನವದೆಹಲಿ: ಪಂಚರಾಜ್ಯಗಳ ಚುನಾವಣೆಯ ಫಲಿತಾಂಶಕ್ಕಾಗಿ ದೇಶದ ಜನತೆ ನಿರೀಕ್ಷಿಸುತ್ತಿದ್ದಾರೆ. ಸಮೀಕ್ಷೆಯ ...

Widgets Magazine Widgets Magazine Widgets Magazine