ಲಾಲು ಯಾದವ್‌ಗೆ ಮೂರುವರೆ ವರ್ಷ ಜೈಲು ಶಿಕ್ಷೆ, 5 ಲಕ್ಷ ದಂಡ

ರಾಂಚಿ, ಶನಿವಾರ, 6 ಜನವರಿ 2018 (18:32 IST)

ಬಹುಕೋಟಿ ಮೇವು ಹಗರಣದಲ್ಲಿ ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ್ ಯಾದವ್‌ಗೆ, ಸಿಬಿಐ ನಿಶೇಷ ಕೋರ್ಟ್ ಮೂರುವರೆ ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸಿದ್ದಲ್ಲದೇ 5 ಲಕ್ಷ ರೂ.ದಂಡ ವಿಧಿಸಿದೆ.
ಹಗರಣದಲ್ಲಿ ಭಾಗಿಯಾಗಿದ್ದ ಏಳು ಆರೋಪಿಗಳಿಗೆ ಕೂಡಾ ಮೂರವರೆ ವರ್ಷ ಜೈಲು ಶಿಕ್ಷೆ ಮತ್ತು 5 ಲಕ್ಷ ರೂಪಾಯಿ ದಂಡ ವಿಧಿಸಿ ಕೋರ್ಟ್ ತೀರ್ಪು ನೀಡಿದೆ.
 
ಕಳೆದ ಡಿಸೆಂಬರ್ ತಿಂಗಳಿನಲ್ಲಿ ವಿಚಾರಣೆ ನಡೆಸಿದ ಸಿಬಿಐ ವಿಶೇಷ ನ್ಯಾಯಾಲಯ, ಲಾಲು ಸೇರಿದಂತೆ ಎಂಟು ಆರೋಪಿಗಳನ್ನು ದೋಷಿಗಳೆಂದು ತೀರ್ಪು ನೀಡಿತ್ತು. ಮಾಜಿ ಸಿಎಂ ಜಗನ್ನಾಥ್ ಮಿಶ್ರಾ ಅವರನ್ನು ಖುಲಾಸೆಗೊಳಿಸಿತ್ತು. 
 
1990-96ರ ಅವಧಿಯಲ್ಲಿ ಮೇವು ಖರೀದಿಯಲ್ಲಿ ಅಂದಾಜು 900 ಕೋಟಿ ರೂಪಾಯಿಗಳ ಹಗರಣ ನಡೆದಿದೆ ಎಂದು ಆರೋಪಿಸಿ ಆರೋಪಿಗಳ ವಿರುದ್ಧ 6 ಪ್ರಕರಣಗಳನ್ನು ದಾಖಲಿಸಲಾಗಿತ್ತು. ಇದೀಗ ನೀಡಿದ ತೀರ್ಪು ಎರಡನೇ ಪ್ರಕರಣವಾಗಿದೆ.
 
ಪಶುಗಳಿಗೆ ಮೇವು ಮತ್ತು ಔಷಧಿ ಪೂರೈಸುವುದಾಗಿ ಆರೋಪಿಗಳು ಸರಕಾರಿ ಖಜಾನೆಯಿಂದ  ಬಹುಕೋಟಿ ರೂಪಾಯಿಗಳನ್ನು ಕಾನೂನುಬಾಹಿರವಾಗಿ ತಿಂದು ತೇಗಿದ್ದರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಪತ್ನಿ ಪಕ್ಕದಲ್ಲಿದ್ರೂ ಮತ್ತೊಬ್ಬ ಮಹಿಳೆಯ ಗುಪ್ತಾಂಗಕ್ಕೆ ಬೆರಳು ತೂರಿಸಿದ ಭೂಪ

ಡೆಟ್ರಾಯಿಟ್: ಪತ್ನಿ ಪಕ್ಕದಲ್ಲಿದ್ರೂ ಮತ್ತೊಬ್ಬ ಮಹಿಳೆಯ ಪ್ಯಾಂಟ್‌ನೊಳಗೆ ಕೈ ತೂರಿಸಿದ ಭೂಪ ಇದೀಗ ಪೊಲೀಸರ ...

news

ನನ್ನೊಂದಿಗೆ ಮಲಗದಿದ್ರೆ ಕೆಲಸದಿಂದ ವಜಾ: ಮಹಿಳಾ ಉದ್ಯೋಗಿಗೆ ಬೆದರಿಕೆ.

ಬೆಂಗಳೂರು: ನನ್ನೊಂದಿಗೆ ಮಲಗದಿದ್ರೆ ಕೆಲಸದಿಂದ ವಜಾಗೊಳಿಸುವುದಾಗಿ ಕಾಮುಕ ಅಧಿಕಾರಿಯೊಬ್ಬ ಮಹಿಳಾ ...

news

ನಿನ್ನದು ಹಿಂದು ಜಾತಿಯಲ್ಲ, ಹಂದಿ ಜಾತಿ: ಸಚಿವ ಹೆಗಡೆಗೆ ತಿರುಗೇಟು

ಬಾಗಲಕೋಟೆ: ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ ವಿರುದ್ಧ ರಾಜ್ಯದಾದ್ಯಂತ ಆಕ್ರೋಶ ವ್ಯಕ್ತವಾಗುತ್ತಿದೆ. ...

news

ಮಹಾದಾಯಿ ಸಮಸ್ಯೆ ಇತ‌್ಯರ್ಥವಾದರೆ ಸಾಕು– ಎಂ.ಬಿ.ಪಾಟೀಲ

ಪ್ರಧಾನ ಮಂತ್ರಿ ನರೇಂದ್ರ ಮೋದಿ ಗೋವಾ ಮುಖ್ಯಮಂತ್ರಿ ಹಾಗೂ ಯಡಿಯೂರಪ್ಪ ಸೇರಿದಂತೆ ಯಾರೊಂದಿಗಾದರೂ ಸಭೆ ...

Widgets Magazine
Widgets Magazine