ದಾವೂದ್ ಇಬ್ರಾಹಿಂ ಜತೆ ಬಿಜೆಪಿ ಮಾಜಿ ಸಚಿವನ ಲಿಂಕ್

ಮುಂಬೈ, ಶನಿವಾರ, 23 ಸೆಪ್ಟಂಬರ್ 2017 (15:08 IST)

ದಾವೂದ್ ಇಬ್ರಾಹಿಂ ಜತೆ ಬಿಜೆಪಿ ಮಾಜಿ ಸಚಿವ ಏಕನಾಥ್ ಖಾಡ್ಸೆ ಲಿಂಕ್ ಹೊಂದಿರುವುದು ಇದೀಗ ಸಾಬೀತಾಗಿದೆ ಎಂದು ಆಮ್ ಆದ್ಮಿ ಪಕ್ಷದ ನಾಯಕಿ ಅಂಜಲಿ ದಮಾನಿಯಾ ಹೇಳಿದ್ದಾರೆ.
ಏಕನಾಥ್ ಖಾಡ್ಸೆ ವಿರುದ್ಧ ಭ್ರಷ್ಟಾಚಾರ ನಿಗ್ರಹ ದಳಕ್ಕೆ ದೂರು ನೀಡಿದ್ದಲ್ಲದೇ ದಾವುದ್ ಜೊತೆ ಸಂಬಂಧ ಹೊಂದಿದ್ದಾರೆ ಎಂದು ಅಂಜಲಿ ದಮಾನಿಯಾ ಆರೋಪಿಸಿದ್ದರು. ಇದರಿಂದಾಗಿ ಖಾಡ್ಸೆ ತಮ್ಮ ಸಚಿವ ಸ್ಥಾನವನ್ನು ಕಳೆದುಕೊಂಡಿದ್ದರು.
 
ನಿನ್ನೆ ರಾತ್ರಿ ದಾವೂದ್ ಇಬ್ರಾಹಿಂ ಹೆಸರಿನಲ್ಲಿ ಪಾಕಿಸ್ತಾನದಿಂದ ಕರೆ ಮಾಡಿದ ವ್ಯಕ್ತಿಯೊಬ್ಬ ಖಾಡ್ಸೆ ವಿರುದ್ಧದ ಪ್ರಕರಣಗಳನ್ನು ಹಿಂಪಡೆಯುವಂತೆ ಒತ್ತಡ ಹೇರಿರುವುದು ಬಹಿರಂಗವಾಗಿದೆ. ಇದರಿಂದ ಮಾಜಿ ಸಚಿವ ಖಾಡ್ಸೆ, ಭೂಗತ ಪಾತಕಿ ದಾವೂದ್‌ನೊಂದಿಗೆ ಸಂಬಂಧ ಹೊಂದಿರುವುದು ಬಹಿರಂಗವಾಗಿದೆ ಎಂದು ಮೂಲಗಳು ತಿಳಿಸಿವೆ.
 
ಆಪ್ ನಾಯಕಿ ಅಂಜಲಿ ದಮಾನಿಯಾ ಘಟನೆಯ ಬಗ್ಗೆ ಪೊಲೀಸ್ ಠಾಣೆಗೆ ದೂರು ಸಲ್ಲಿಸಿ ದೂರವಾಣಿ ಕರೆಯ ದಾಖಲೆಗಳನ್ನು ನೀಡಿದ್ದಾರೆ ಎಂದು ಪಕ್ಷದ ಮುಖಂಡರು ತಿಳಿಸಿದ್ದಾರೆ.  
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಚಲಿಸುತ್ತಿರುವ ಕಾರಿನಲ್ಲಿಯೇ ಬಾಲಕಿ ಮೇಲೆ ಗ್ಯಾಂಗ್‌ರೇಪ್

ನೋಯ್ಡಾ: ಬಾಲಕಿಯನ್ನು ಕಾರಿನಲ್ಲಿ ಅಪಹರಿಸಿ ಗ್ಯಾಂಗ್‌ರೇಪ್ ಎಸಗಿದ ಘಟನೆ ಉ್ತರಪ್ರದೇಶದ ನೋಯ್ಡಾದ ಸೆಕ್ಟರ್ ...

news

ಯಡಿಯೂರಪ್ಪಗೆ ಮೀಟರ್ ಇಲ್ಲ, ಉತ್ತರನ ಪೌರುಷ ಇಲ್ಲಿ ಮಾತ್ರ: ಸಿಎಂ ಕಿಡಿ

ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪಗೆ ಮೀಟರ್ ಇಲ್ಲ. ಉತ್ತರನ ಪೌರುಷ ಇಲ್ಲಿ ಮಾತ್ರ ...

news

ಪ್ರಧಾನಿ ಮೋದಿಯ ಮತ್ತೊಂದು ಭರವಸೆ: ಎಲ್ರಿಗೂ ಮನೆ ಕೊಡ್ತಾರಂತೆ

ವಾರಣಾಸಿ: ಮುಂಬರುವ 2022ರ ವೇಳೆಗೆ ದೇಶದ ಪ್ರತಿಯೊಬ್ಬರಿಗೆ ಕೇಂದ್ರ ಸರಕಾರದಿಂದ ಮನೆ ಕೊಡುಗೆ ದೊರೆಯಲಿದೆ ...

news

ಮೋದಿದು ಮನ್ ಕೀ ಬಾತ್, ನಮ್ದು ಕಾಮ್ ಕೀ ಬಾತ್: ಸಿಎಂ ವಾಗ್ದಾಳಿ

ಬೆಂಗಳೂರು: ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಮನ್ ಕೀ ಬಾತ್ ನಮ್ಮದು ಕಾಮ್ ಕೀ ಬಾತ್ ಎಂದು ಸಿಎಂ ...

Widgets Magazine