ಪ್ರಧಾನಿ ಮೋದಿ ಮತ್ತೊಬ್ಬ ಗಾಂಧೀಜಿಯಂತೆ: ಸಚಿವ ಮಹೇಶ್ ಶರ್ಮಾ

ನವದೆಹಲಿ, ಶುಕ್ರವಾರ, 14 ಜುಲೈ 2017 (15:50 IST)

ಪ್ರಧಾನಮಂತ್ರಿ ನರೇಂದ್ರ ಮೋದಿ ಅನೇಕ ತಲೆಮಾರುಗಳಿಗೆ ಸ್ಫೂರ್ತಿ ನೀಡಿದ ರಾಷ್ಟ್ರಪಿತ ಮಹಾತ್ಮಾ ಗಾಂಧಿಯವರಂತೆ ಎಂದು ಮಹೇಶ್ ಶರ್ಮಾ ಹೊಗಳಿಕೆಯ ಸುರಿಮಳೆಗೈದಿದ್ದಾರೆ.
 
ಗಾಂಧಿಯವರ ಉಪ್ಪಿನ ಸತ್ಯಾಗ್ರಹ ಕುರಿತ ಪುಸ್ತಕವೊಂದರ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಸಂಸ್ಕೃತಿ ಖಾತೆ ಸಚಿವ ಶರ್ಮಾ, ಸ್ಪೂರ್ತಿಯಾಗಿರುವ ಪ್ರಧಾನಿ ಮೋದಿ ನಮಗೆ ಮತ್ತೊಬ್ಬ ಗಾಂಧೀಜಿಯ ರೂಪದಲ್ಲಿ ಬಂದಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು.
 
ಸ್ವಾತಂತ್ರ್ಯ ಹೋರಾಟಕ್ಕೆ ಗಾಂಧಿಯವರ ಕೊಡುಗೆ ಬಗ್ಗೆ ಸಚಿವರು ಮಾತನಾಡುತ್ತಾ, ಉಪ್ಪಿನ ಸತ್ಯಾಗ್ರಹವು ಕೇವಲ ಚಿಟಿಕೆ ಉಪ್ಪಿನ ವಿಷಯ ಮಾತ್ರವಲ್ಲ, ಅನೇಕ ತಲೆಮಾರುಗಳಿಗೆ ಸ್ಪೂರ್ತಿದಾಯಕ ಹೋರಾಟವಾಗಿದೆ. ಅದರಂತೆ ಪ್ರಧಾನಿ ಮೋದಿ ಕಾರ್ಯವೈಖರಿ ಕೂಡಾ ಹಲವಾರು ತಲೆಮಾರುಗಳಿಗೆ ಸ್ಪೂರ್ತಿದಾಯಕವಾಗಿರುತ್ತದೆ ಎಂದಿದ್ದಾರೆ.
 
ಪ್ರಧಾನಮಂತ್ರಿ ಮೋದಿ ದೇಶದ ಪ್ರತಿಯೊಬ್ಬ ಪ್ರಜೆಗೆ ಸ್ವಾತಂತ್ರ್ಯದ ಸವಿ ತಲುಪಬೇಕು ಎನ್ನುವುದೇ ಅವರ ಅಭಿಪ್ರಾಯವಾಗಿದೆ. ಗಾಂಧೀಜಿಯವರ ಕನಸುಗಳನ್ನು ನನಸಾಗಿಸುವುದೇ ಅವರ ಗುರಿಯಾಗಿದೆ. ಮಾನವೀಯತೆಯಿಂದ ಅವರ ಕನಸುಗಳನ್ನು ವಿಶ್ವದಾದ್ಯಂತ ಹರಡಿಸುವುದೇ ಸಂಸ್ಕ್ರತಿ ಸಚಿವಾಲಯದ ಕರ್ತವ್ಯವಾಗಿದೆ ಎಂದು ಕೇಂದ್ರ ಸಚಿವ ಮಹೇಶ್ ಶರ್ಮಾ ತಿಳಿಸಿದ್ದಾರೆ 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. ಇದರಲ್ಲಿ ಇನ್ನಷ್ಟು ಓದಿ :  
ಕೇಂದ್ರ ಸಚಿವ ಮಹೇಶ್ ಶರ್ಮಾ ಗಾಂಧೀಜಿ ಪ್ರಧಾನಿ ಮೋದಿ Gandhiji Mahesh Sharma Union Minister Prime Minister Narendra Modi

ಸುದ್ದಿಗಳು

news

ಸಿಎಂ ಸಿದ್ದರಾಮಯ್ಯರಿಂದ ಕೇಂದ್ರ ಯೋಜನೆಗಳು ಹೈಜಾಕ್: ಪ್ರತಾಪ್ ಸಿಂಹ

ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಕೇಂದ್ರ ಸರಕಾರದ ಯೋಜನೆಗಳನ್ನು ಹೈಜಾಕ್ ಮಾಡಿದ್ದಾರೆ ಎಂದು ಬಿಜೆಪಿ ...

news

ಪರಪ್ಪನ ಅಗ್ರಹಾರ ರಹಸ್ಯ ಭೇದಿಸಲು ಸಿಎಂ ಆದೇಶ

ಬೆಂಗಳೂರು: ಪರಪ್ಪನ ಅಗ್ರಹಾರ ಜೈಲಿನಲ್ಲಿ ತಮಿಳುನಾಡಿನ ಎಐಎಡಿಎಂಕೆ ನಾಯಕಿ ವಿ.ಕೆ. ಶಶಿಕಲಾಗೆ ವಿಐಪಿ ...

news

ಮಣಿಪುರದಲ್ಲಿ ಸಶಸ್ತ್ರಪಡೆಗಳಿಂದ ನಕಲಿ ಎನ್ ಕೌಂಟರ್: ಸಿಬಿಐ ತನಿಖೆಗೆ ಸುಪ್ರೀಂ ಆದೇಶ

ಮಣಿಪುರದಲ್ಲಿ ಸೇನೆ, ಅಸ್ಸಾಂ ರೈಫಲ್ಸ್ ಮತ್ತು ಪೊಲೀಸರಿಂದ ನಡೆದಿದೆ ಎನ್ನಲಾದ ನಕಲಿ ಎನ್ ಕೌಂಟರ್ ಗೆ ...

news

ಸಿಎಂ ಪಂಥಹ್ವಾನ ನೀಡಿರುವುದು ಮುರ್ಖತನ: ಯಡಿಯೂರಪ್ಪ

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಸಾಧನೆ ಮತ್ತು ತಮ್ಮ ಸಾಧನೆಯ ಬಗ್ಗೆ ಚರ್ಚಿಸಲು ಸಿಎಂ ಸಿದ್ದರಾಮಯ್ಯ ...

Widgets Magazine