ಬಡವನೆಂದು ಪರಿಗಣಿಸಿ ಕೇಜ್ರಿ ಪರ ಉಚಿತವಾಗಿ ವಾದಿಸುತ್ತೇನೆಂದ ಜೇಠ್ಮಲಾನಿ

ನವದೆಹಲಿ, ಮಂಗಳವಾರ, 4 ಏಪ್ರಿಲ್ 2017 (17:29 IST)

Widgets Magazine

ಮಾನನಷ್ಟ ಮೊಕದ್ದಮೆಯ ವಕಾಲತ್ತಿಗಾಗಿ ರಾಮ್ ಜೇಠ್ಮಲಾನಿ ನೀಡಿರುವ 3.8 ಕೋಟಿ ರೂ. ಬಿಲ್ ಪೇಮೆಂಟ್`ಗಾಗಿ ಕೇಜ್ರಿವಾಲ್, ಲೆಫ್ಟಿನೆಂಟ್ ಗವರ್ನರ್`ಗೆ ಕಳುಹಿಸಿದ್ದ ವಿಷಯ ಭಾರೀ ಸುದ್ದಿಯಾಗಿತ್ತು. ಜನರ ತೆರಿಗೆ ಹಣವನ್ನ ವೈಯಕ್ತಿಕ ಮಾನನಷ್ಟ ಮೊಕದ್ದಮೆಯ ವಕಾಲತ್ತು ವಹಿಸಿರುವ ವಕೀಲರಿಗೆ ನೀಡುವ ಬಗ್ಗೆ ಆಕ್ಷೇಪ ವ್ಯಕ್ತವಾಗಿತ್ತು.


ಈ ಕುರಿತು ಪ್ರತಿಕ್ರಿಯಿಸಿರುವ ಹಿರಿಯ ವಕೀಲ ರಾಮ್ ಜೇಠ್ಮಲಾನಿ, ನಾನು ಶ್ರೀಮಂತರಿಂದ ಹೆಚ್ಚು ಫೀ ಪಡೆಯುವ ವಿಚಾರ ಎಲ್ಲರಿಗೂ ಗೊತ್ತಿದೆ. ಒಂದೊಮ್ಮೆ ಸರ್ಕಾರ ನನ್ನ ಬಿಲ್ ಪಾವತಿಸದಿದ್ದರೆ ಕೇಜ್ರಿವಾಲ್`ಗೆ ಉಚಿತ ಸರ್ವಿಸ್ ನೀಡುವುದಾಗಿ ಹೇಳಿದ್ದಾರೆ. ಬಡ ಕಕ್ಷೀದಾರನೆಂದು ಪರಿಗಣಿಸಿ ಲೀಗಲ್ ಸರ್ವಿಸ್ ಒದಗಿಸುವುದಾಗಿ ಜೇಠ್ಮಲಾನಿ ಹೇಳಿದ್ದಾರೆ. ಅರುಣ್ ಜೇಟ್ಲಿ ಈ ವಿಷಯವನ್ನ ಪ್ರೇರೇಪಿಸಿದ್ದಾರೆ ಎಂದು ಜೇಠ್ಮಲಾನಿ ಆರೋಪಿಸಿದ್ದಾರೆ.

ದೆಹಲಿ ಕ್ರಿಕೆಟ್ ಸಂಸ್ಥೆಯಲ್ಲಿ ಅರುಣ್ ಜೇಟ್ಲಿ ಮತ್ತವರ ಕುಟುಂಬ ಅಕ್ರಮ ಎಸಗಿದೆ ಎಂದು ಆರೋಪಿಸಿದ್ದ ಅರವಿಂದ್ ಕೇಜ್ರಿವಾಲ್, ರಾಘವ್ ಚಡ್ಡಾ, ಕುಮಾರ್ ವಿಶ್ವಾಸ್, ಅಶುತೊಷ್, ಸಂಜಯ್ ಸಿಂಗ್, ದೀಪಕ್ ಬಜಪಾಯ್ ವಿರುದ್ಧ ಅರುಣ್ ಜೇಟ್ಲಿ ಮಾನನಷ್ಟ ಮೊಕದ್ದಮೆ ದಾಖಲಿಸಿ, 10 ಕೋಟಿ ಪರಿಹಾರದ ಬೇಡಿಕೆ ಇಟ್ಟಿದ್ದಾರೆ.
 Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ಕಾಂಗ್ರೆಸ್ ಟೀಕಿಸಿದ ಎಸ್.ಎಂ. ಕೃಷ್ಣಗೆ ಟಾಂಗ್ ನೀಡಿದ ಇಬ್ರಾಹಿಂ, ಕಾಗೋಡು ತಿಮ್ಮಪ್ಪ

ಬಿಜೆಪಿ ಸೇರ್ಪಡೆಗೊಂಡ ಬಳಿಕ ಚುನಾವಣಾ ಪ್ರಚಾರದಲ್ಲಿ ತೊಡಗಿಕೊಂಡಿರುವ ಮಾಜಿ ಸಿಎಂ ಯಡಿಯೂರಪ್ಪ ...

news

ನಾಳೆಯಿಂದ ಪೆಟ್ರೋಲ್, ಡೀಸೆಲ್ ಸರಬರಾಜು ವಾಹನಗಳು ಸ್ಥಗಿತ

ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ನಡೆಸುತ್ತಿರುವ ಅನಿರ್ದಿಷ್ಟಾವಧಿ ಮುಷ್ಕರವನ್ನ ಮತ್ತಷ್ಟು ...

news

ಹುಡುಗಿ ಮೇಲೆ ಹಣ ಚೆಲ್ಲಿ ಕುಣಿದು ಕುಪ್ಪಳಿಸಿದ ಸ್ಟೇಶನ್ ಮಾಸ್ಟರ್

ಕುಡಿದ ಮತ್ತಿನಲ್ಲಿ ಸ್ಟೇಜ್ ಹತ್ತಿದ ಸ್ಟೇಶನ್ ಮಾಸ್ಟರ್ ಹುಡುಗಿಯರ ಜೊತೆ ಕುಣಿದು ಕೈಯಲ್ಲಿದ್ದ ಹಣ ಚೆಲ್ಲಿದ ...

news

ಪ್ರಚಾರ ಮುಗಿಸಿ ಬಂದು ದನದ ಕೊಟ್ಟಿಗೆಯಲ್ಲೇ ಮಲಗುವ ಸುರೇಶ್ ಕುಮಾರ್

ಸರಳ, ಸಜ್ಜನಿಕೆಗೆ ಹೆಸರಾದ ಬಿಜೆಪಿ ಮುಖಂಡ ಸುರೇಶ್ ಕುಮಾರ್ ಉಪಚುನಾವಣಾ ಪ್ರಚಾರ ಕಣದಲ್ಲೂ ತಮ್ಮ ಸರಳ ಜೀವನ ...

Widgets Magazine