ಇದರಲ್ಲಿ ಇನ್ನಷ್ಟು ಓದಿ :
ಚುನಾವಣೆಯಲ್ಲಿ ತನ್ನ ಪತ್ನಿಗೆ ಮತ ಹಾಕದೇ ಇದ್ದ ಕುಟುಂಬದ ಮೇಲೆ ದ್ವೇಷ; ಕುಟುಂಬದ ಬಾಲಕಿಯನ್ನು ಹುರಿದು ಮುಕ್ಕಿದ ಕಾಮುಕರು!

ಸ್ಥಳೀಯ ಚುನಾವಣೆಯಲ್ಲಿ ಸ್ಪರ್ಧಿಸಿದ ಮಹಿಳೆಯೊಬ್ಬಳಿಗೆ ಕುಟುಂಬವೊಂದರ ಸದಸ್ಯರು ಮತ ಹಾಕಲಿಲ್ಲ ಎಂಬ ಕಾರಣಕ್ಕೆ ಆ ಕುಟುಂಬದ 13ವರ್ಷದ ಬಾಲಕಿಯ ಮೇಲೆ ಮಹಿಳೆಯ ಪತಿ ಸೇರಿದಂತೆ ನಾಲ್ಕು ಮಂದಿ ಅತ್ಯಾಚಾರವೆಸಗಿ ಕೊಲೆಮಾಡಿದ್ದಾರೆ. ಬಾಲಕಿ ಬರ್ಹಿದೆಸೆಗೆಂದು ಹೋದವಳು ಹಿಂತಿರುಗಿ ಬಾರದೆ ಇದ್ದಾಗ ಆಕೆಯ ತಂದೆ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಕೇಸು ದಾಖಲಿಸಿದ್ದರು, ಮರುದಿನ ಬೆಳಿಗ್ಗೆ ಬಾಲಕಿಯ ಶವ ಹತ್ತಿರದ ಕಾಡಲ್ಲಿ ಪತ್ತೆಯಾಗಿತ್ತು.
ಘಟನೆಗೆ ಸಂಬಂಧಿಸಿದ ನಾಲ್ಕು ಮಂದಿಯನ್ನು ಪೊಲೀಸರು ಬಂಧಿಸಿದ್ದು, ಬಾಲಕಿಯ ಕುಟುಂಬದ ಸದಸ್ಯರು ತನ್ನ ಪತ್ನಿಗೆ ಮತ ಹಾಕದೆ ಆಕೆ ಸೋತು ಹೋದ ಕಾರಣ ಸಿಟ್ಟಿನಿಂದ ಈ ಕೃತ್ಯ ಎಸಗಿರುವುದಾಗಿ ಆರೋಪಿ ಹಾಗು ಆತನ ಸಂಗಡಿಗರು ಒಪ್ಪಿಕೊಂಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ
|
|