ಚಲಿಸುತ್ತಿದ್ದ ಕಾರಿನಲ್ಲಿಯೇ 20 ವರ್ಷದ ಯುವತಿಯ ಮೇಲೆ ಗ್ಯಾಂಗ್ ರೇಪ್

ಲಕ್ನೋ, ಶುಕ್ರವಾರ, 28 ಸೆಪ್ಟಂಬರ್ 2018 (08:29 IST)

ಲಕ್ನೋ : ಚಲಿಸುತ್ತಿದ್ದ ಕಾರಿನಲ್ಲಿಯೇ 20 ವರ್ಷದ ಯುವತಿಯೊಬ್ಬಳ ಮೇಲೆ ನಾಲ್ವರು ಸಾಮೂಹಿಕವಾಗಿ ಎಸಗಿರುವ ಘಟನೆ ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆದಿದೆ.


ಸಂತ್ರಸ್ತೆ ಹಬ್ಬ ಮುಗಿಸಿಕೊಂಡು ಊರಿಗೆ ಹಿಂದಿರುಗಲು  ಕಾರಿಗಾಗಿ ಕಾಯುತ್ತಿದ್ದ ವೇಳೆ ನಾಲ್ವರು ಮಂದಿ ಬಂದು ಆಕೆಯನ್ನು ಕಾರಿನಲ್ಲಿ ಕೂರಿಸಿಕೊಂಡು ಹೋಗಿದ್ದಾರೆ. ಬಳಿಕ ಬಲವಂತವಾಗಿ ಮತ್ತು ಬರುವ ಔಷಧಿಯನ್ನು ಕುಡಿಸಿ ಸಾಮೂಹಿಕವಾಗಿ ಅತ್ಯಾಚಾರ ಎಸಗಿದ್ದಾರೆ. ಅತ್ಯಾಚಾರದ ಬಳಿಕ ಸಂತ್ರಸ್ತೆಯನ್ನು ಆಕೆಯ ಮನೆಯ ಹಿಂಭಾಗದಲ್ಲಿಯೇ ಎಸೆದು ಹೋಗಿದ್ದಾರೆ. ಕೂಡಲೇ ಸಂತ್ರಸ್ತೆಯ ಪೋಷಕರು ಆಕೆಯನ್ನು ಲಾಲ ಲಜಪತ್ ರಾಯ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಪ್ರಜ್ಞೆ ಬಂದ ಬಳಿಕ ಸಂತ್ರಸ್ತೆ ನಡೆದ ಘಟನೆಯ ಬಗ್ಗೆ ತಿಳಿಸಿದ್ದಾಳೆ.


ಈ ಬಗ್ಗೆ ಸಂತ್ರಸ್ತೆಯ ಪೋಷಕರು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಸಂತ್ರಸ್ತೆಯ ಹೇಳಿಕೆಯನ್ನು ರೆಕಾರ್ಡ್ ಮಾಡಿಕೊಂಡ ಪೊಲೀಸರು , ಆರೋಪಿಗಳ ವಿರುದ್ಧ ಎಫ್‍ಐಆರ್ ದಾಖಲಿಸಿಕೊಂಡಿದ್ದಾರೆ. ಹಾಗೇ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ವಶಕ್ಕೆ ಪಡೆದು ವಿಚಾರಣೆ ಕೂಡ  ಮಾಡುತ್ತಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ರೌಡಿಗಳ ಮೇಲೆ ಸಿಸಿಬಿ ದಾಳಿ

ರಾಜಧಾನಿಯಲ್ಲಿ ಅಕ್ರಮ ಹಾಗೂ ಅಪರಾಧ ಪ್ರಕರಣಗಳನ್ನು ಮಟ್ಟ ಹಾಕುವ ನಿಟ್ಟಿನಲ್ಲಿ ಸಿಸಿಬಿ ಪೊಲೀಸರು ರೌಡಿಗಳ ...

news

ಅಯೋಧ್ಯೆ ವಿವಾದ: ಹೊರಬಿತ್ತು ಸುಪ್ರೀಂ ಕೋರ್ಟನ ಮಹತ್ವದ ತೀರ್ಪು

ಸುಪ್ರೀಂ ಕೋರ್ಟ ನ ಮತ್ತೊಂದು ಮಹತ್ವದ ತೀರ್ಪು ಹೊರಬಿದ್ದಿದೆ. ಇಸ್ಲಾಂನಲ್ಲಿ ಮಸೀದಿಗೆ ಧಾರ್ಮಿಕ ಪಾವಿತ್ರತೆ ...

news

ಯಮುನಾ ನದಿ ಭರ್ತಿ: ಎದುರಾಗಿದೆ ಅಪಾಯದ ಭೀತಿ

ಯಮುನಾ ನದಿ ತುಂಬಿ ಹರಿಯುತ್ತಿದ್ದು, ಅಪಾಯದ ಭೀತಿ ಎದುರಾಗಿದೆ.

news

ದೇವರ ದರ್ಶನ ಮುಂದುವರಿಸಿದ ಸಿಎಂ

ಕಲಬುರಗಿ, ಶೃಂಗೇರಿ ಬಳಿಕ ಇದೀಗ ಸಿಎಂ ಹೆಚ್.ಡಿ.ಕುಮಾರಸ್ವಾಮಿ ದೇಗುಲ ಯಾತ್ರೆಯನ್ನು ಮುಂದುವರಿಸಿದ್ದಾರೆ.

Widgets Magazine