ಗೌರಿ ಲಂಕೇಶ್ ಹತ್ಯೆ ಹಿನ್ನೆಲೆ: ಅ.5ರಂದು ನವದೆಹಲಿಯಲ್ಲಿ ಪ್ರತಿಭಟನೆ

ನವದೆಹಲಿ, ಮಂಗಳವಾರ, 26 ಸೆಪ್ಟಂಬರ್ 2017 (00:13 IST)

ನವದೆಹಲಿ: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯಾಗಿ ಅಕ್ಟೋಬರ್ 5ಕ್ಕೆ ಒಂದು ತಿಂಗಲೂ ಪೂರ್ಣವಾಗಲಿದೆ. ಈ ಹಿನ್ನೆಲೆಯಲ್ಲಿ ಬೃಹತ್ ಪ್ರತಿಭಟನಾ ರ್ಯಾಲಿ ನಡೆಸುವುದಾಗಿ ಸಾಮಾಜಿಕ ಹೋರಾಟಗಾರ ಜಿಗ್ನೇಶ್ ಮೇವಾನಿ ತಿಳಿಸಿದ್ದಾರೆ.


ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಅ.5ಕ್ಕೆ ಗೌರಿ ಹತ್ಯೆಯಾಗಿ ಒಂದು ತಿಂಗಳು ಪೂರ್ಣವಾಗಲಿದೆ. ಆದರೆ ಘಟನೆ ನಡೆದು ತಿಂಗಳಾದರೂ ಸಹ ಆರೋಪಿಗಳ ಬಂಧನವಾಗಿಲ್ಲ. ಪನ್ಸಾರೆ, ಕಲ್ಬುರ್ಗಿ ಕೊಂದ ಹಂತಕರನ್ನು ಬಂಧಿಸುವಲ್ಲಿ ಸರ್ಕಾರಗಳು ವಿಫಲವಾಗಿವೆ. ಈ ನಿಟ್ಟಿನಲ್ಲಿ ಸಾಮಾಜಿಕ ಹೋರಾಟಗಾರರು ಮತ್ತು ಪ್ರಗತಿಪರರು ದೆಹಲಿಯ ಮಂಡಿಹೌಸ್ ನಿಂದ ಜಂತರ್ ಮಂತರ್ ವರೆಗೂ ಪ್ರತಿಭಟನಾ ರ್ಯಾಲಿ ನಡೆಸುವುದಾಗಿ ತಿಳಿಸಿದ್ದಾರೆ.

ಹತ್ಯೆಯನ್ನು ಸಂಭ್ರಮಿಸುವರನ್ನ ಪ್ರಧಾನಿ ನರೇಂದ್ರ ಮೋದಿ ಫಾಲೋ ಮಾಡುತ್ತಿದ್ದಾರೆ. ಗೌರಿ ಹತ್ಯೆಯ ಬಗ್ಗೆ ಪ್ರಧಾನಿ ಒಂದು ಪದವನ್ನೂ ಮಾತನಾಡಿಲ್ಲ. ಈ ಮೌನ ಹತ್ಯೆಯನ್ನು ಸಮರ್ಥಿಸುವಂತಿದೆ ಎಂದು ಪ್ರಧಾನಿ ವಿರುದ್ಧ ಸಾಮಾಜಿಕ ಹೋರಾಟಗಾರ ಜಿಗ್ನೇಶ್ ಮೇವಾನಿ ವಾಗ್ದಾಳಿ ನಡೆಸಿದರು.

ಇದೇ ಸಂದರ್ಭದಲ್ಲಿ ಸಾಮಾಜಿಕ ಹೋರಾಟಗಾರರಾದ ಯೋಗೇಂದ್ರ ಯಾದವ್, ಡಾ.ವಾಸು ಉಪಸ್ಥಿತರಿದ್ದರು.ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

PRESS=ಒತ್ತಿ…? ಸರ್ಕಾರದ ಕಾರ್ಯಕ್ರಮದಲ್ಲೇ ತಪ್ಪು ಪದ ಬಳಕೆ

ಬೆಂಗಳೂರು: ಸರ್ಕಾರಿ ಅಥವಾ ಖಾಸಗಿ ಯಾವುದೇ ಕಾರ್ಯಕ್ರಮ ಆಗಿರಲಿ. ಅಲ್ಲಿ ಮಾಧ್ಯಮದವರಿಗೆ ಪ್ರತ್ಯೇಕ ...

news

ಬಾಲಕಿಗೆ ಮದ್ಯ ಕುಡಿಸಿ 2 ವರ್ಷ ಅತ್ಯಾಚಾರಗೈದ ಐವರು ಕಾಮುಕರು

ಚೆರ್ತಾಲಾ(ಕೇರಳ): ಅಪ್ರಾಪ್ತ ಬಾಲಕಿಯೊಬ್ಬಳಿಗೆ ಮದ್ಯ ಕುಡಿಸಿ ಅತ್ಯಾಚಾರವೆಸಗಿದ ಆರೋಪದ ಮೇಲೆ ಇಬ್ಬರು ...

news

ವಿಶ್ವದ ಧಡೂತಿ ಮಹಿಳೆ ಎಮಾನ್ ಅಹಮದ್ ಇನ್ನಿಲ್ಲ

ಅಬುಧಾಬಿ: ವಿಶ್ವದ ಅತಿ ಹೆಚ್ಚು ತೂಕದ ಮಹಿಳೆ ಈಜಿಪ್ಟ್ ನ ಎಮಾನ್ ಅಹಮದ್(37) ಅಬುಧಾಬಿಯ ಬುರ್ಜಿಲ್ ...

news

ಕಮಲದ ಜತೆ ರೂಪದರ್ಶಿ ಫೋಟೊ ತೆಗೆಸಿದ್ದಕ್ಕೆ ಭಾರೀ ದಂಡ.. ಯಾಕೆ ಗೊತ್ತಾ…?

ರಷ್ಯಾ: ಕಮಲದ ಹೂವಿನೊಂದಿಗೆ ಫೋಟೊಗೆ ಪೋಸ್ ಕೊಟ್ಟಿದ್ದ ಮಾಡೆಲ್ ಗೆ ಈಗ ರಷ್ಯಾ ಸರ್ಕಾರ ಭಾರೀ ದಂಡ

Widgets Magazine
Widgets Magazine