ತಾಯಿ, ಸಹೋದರನ ಎದುರೇ 11ರ ಬಾಲೆಯ ಮೇಲೆ ಗ್ಯಾಂಗ್‌ರೇಪ್

ಗ್ವಾಲಿಯರ್, ಸೋಮವಾರ, 4 ಸೆಪ್ಟಂಬರ್ 2017 (13:17 IST)

ತಾಯಿ ಮತ್ತು ಹದಿಹರೆಯದ ಸಹೋದರನನ್ನು ರಿವಾಲ್ವರ್‌ನಿಂದ ಬೆದರಿಸಿ ಒತ್ತೆಯಾಳಾಗಿರಿಸಿಕೊಂಡು ಅವರ ಮುಂದೆ 11 ವರ್ಷದ ಬಾಲಕಿಯ ಮೇಲೆ ಅತ್ಯಾಚಾರವೆಸಗಿದ ಹೇಯ ಘಟನೆ ವರದಿಯಾಗಿದೆ.
ಬುಧವಾರ ಬೆಳಿಗ್ಗೆ ನಡೆದ ಘಟನೆಗೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಬಂಧಿಸಿಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
 
ತಾಯಿ ಮತ್ತು ಹದಿಹರೆಯದ ಸಹೋದರನೊಂದಿಗೆ ಬಾಲಕಿ ಮನೆಯಲ್ಲಿದ್ದಾಗ ರಾತ್ರಿ 1 ಗಂಟೆ ಸುಮಾರಿಗೆ ಮನೆಗೆ ನುಗ್ಗಿದ ಮೂವರು ದುಷ್ಕರ್ಮಿಗಳು, ತಾಯಿ ಮತ್ತು ಸಹೋದರನ ಮೇಲೆ ಗುಂಡು ಹಾರಿಸುವುದಾಗಿ ಬೆದರಿಸಿ 11 ವರ್ಷದ ಬಾಲಕಿಯ ಮೇಲೆ ಅತ್ಯಾಚಾರವೆಸಗಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ರಘುವೀರ್ ಮೀನಾ ತಿಳಿಸಿದ್ದಾರೆ.
 
ಬಾಲಕಿಯ ಮೇಲೆ ಅತ್ಯಾಚಾರವೆಸಗಿದ ಆರೋಪಿ ಝಾನ್ವರ್ ಸಿಂಗ್ ಖಶ್ವಾ ಎಂದು ಗುರುತಿಸಲಾಗಿದ್ದು, ಆತನಿಗೆ ಸಹಕರಿಸಿದ ಇಬ್ಬರು ಆರೋಪಿಗಳು ರಾಜು ಖುಶ್ವಾ ಮತ್ತು ರಮ್ನಿವಾಸ್ ಖುಶ್ವಾ ಎಂದು ಗುರುತಿಸಲಾಗಿದೆ. 
 
ಮೂವರು ಆರೋಪಿಗಳನ್ನು ನಿನ್ನೆ ರಾತ್ರಿ ಬಂಧಿಸಲಾಗಿದ್ದು ವಿಚಾರಣೆ ಮುಂದುವರಿದಿದೆ. ಆರೋಪಿಗಳ ವಿರುದ್ಧ ಪೋಸ್ಕೋ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸ್ ಅಧಿಕಾರಿ ರಘುವೀರ್ ಮೀನಾ ತಿಳಿಸಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. ಇದರಲ್ಲಿ ಇನ್ನಷ್ಟು ಓದಿ :  
ಬಾಲಕಿ ಗ್ಯಾಂಗ್‌ರೇಪ್ ತಾಯಿ ಸಹೋದರ Girl Brother Gangrape Gunpoint Mother

ಸುದ್ದಿಗಳು

news

ಬಳ್ಳಾರಿಗೆ ತೆರಳಲು ಜನಾರ್ದನ ರೆಡ್ಡಿ ಅನುಮತಿ ನೀಡಲು ಸುಪ್ರೀಂ ನಕಾರ

ಮಾಜಿ ಸಚಿವ ಜನಾರ್ದನ ರೆಡ್ಡಿ ಬಳ್ಳಾರಿ ಪ್ರವೇಶಕ್ಕೆ ಅನುಮತಿ ನೀಡಲು ಸುಪ್ರೀಂಕೋರ್ಟ್ ನಿರಾಕರಿಸಿದೆ. ಸಿಬಿಐ ...

news

ಅಯ್ಯೋ… ಸುಳ್ಳು ದೂರಿಗೆಲ್ಲಾ ಹೆದರಕ್ಕಾಗುತ್ತಾ?: ಸಿಎಂ ಸಿದ್ದರಾಮಯ್ಯ

ಬೆಂಗಳೂರು: ನೂರಾರು ಕೋಟಿ ರೂ. ಬೇನಾಮಿ ಆಸ್ತಿ ಹೊಂದಿದ್ದಾರೆಂದು ತಮ್ಮ ವಿರುದ್ಧ ಆರ್ ಟಿ ಐ ಕಾರ್ಯಕರ್ತ ...

news

ಮಂಗಳೂರಿನಲ್ಲಿ ಮತ್ತಷ್ಟು ಯುವಕರ ಪ್ರಾಣ ತೆಗೆಯಲು ಬಿಜೆಪಿ ಸಂಚು: ಯುಟಿ ಖಾದರ್

ಬೆಂಗಳೂರು: ಸಂಘ ಪರಿವಾರ ಮತ್ತು ಬಿಜೆಪಿ ಕಾರ್ಯಕರ್ತರ ಹತ್ಯೆ ಪ್ರಕರಣಗಳಲ್ಲಿ ಭಾಗಿಯಾಗಿರುವ ಪಿಎಫ್ ಐ ಮತ್ತು ...

news

ಬ್ರಿಕ್ಸ್ ಸಮ್ಮೇಳನದಲ್ಲಿ ಪ್ರಧಾನಿ ಮೋದಿ ಶಾತಿ ಮಂತ್ರ

ನವದೆಹಲಿ: ಚೀನಾದ ಕ್ಸಿಯಾಮೆನ್ ನಲ್ಲಿ ನಡೆಯುತ್ತಿರುವ 9 ನೇ ಬ್ರಿಕ್ಸ್ ಸಮ್ಮೇಳನದಲ್ಲಿ ಭಾರತದ ಪ್ರಧಾನಿ ...

Widgets Magazine