ಸಿನೆಮಾ ಟಾಕೀಜ್‌ನಲ್ಲಿ ಬಾಲಕಿಯ ಮೇಲೆ ಗ್ಯಾಂಗ್‌ರೇಪ್: ಇಬ್ಬರ ಬಂಧನ

ಮೀರತ್(ಉತ್ತರಪ್ರದೇಶ), ಬುಧವಾರ, 6 ಡಿಸೆಂಬರ್ 2017 (19:39 IST)

ಆಘಾತಕಾರಿ ಘಟನೆಯೊಂದರಲ್ಲಿ 16 ವರ್ಷದ ಬಾಲಕಿಯ ಮೇಲೆ ಸಿನೆಮಾ ಟಾಕೀಜ್‌ನಲ್ಲಿಯೇ ಗ್ಯಾಂಗ್‌ರೇಪ್ ಎಸಗಿದ ಹೀನಾಯ ಘಟನೆ ವರದಿಯಾಗಿದೆ.
ಒಂದು ತಿಂಗಳ ಹಿಂದೆ ಬಾಲಕಿಗೆ ಪರಿಚಯವಾಗಿದ್ದ ಯುವಕ, ಆಕೆಗೆ ಮೊಬೈಲ್ ಕರೆ ಮಾಡಿ ಶಾಪಿಂಗ್ ಮಾಲ್‌ಗೆ ಬರುವಂತೆ ತಿಳಿಸಿದ್ದಾನೆ. ಶಾಪಿಂಗ್ ಮಾಡಿದ ನಂತರ ಸಿನೆಮಾ ನೋಡಲು ಥಿಯೇಟರ್‌ಗೆ ತೆರಳಿದ್ದಾರೆ. ಅಲ್ಲಿ ಯುವಕನ ಗೆಳೆಯ ಉಪಸ್ಥಿತನಿದ್ದ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
 
ಸಿನೆಮಾ ಆರಂಭವಾಗುತ್ತಿದ್ದಂತೆ ಇಬ್ಬರು ಯುವಕರು ಬಾಲಕಿಯನ್ನು ಬಾಲ್ಕೋನಿಗೆ ಕರೆದುಕೊಂಡು ಹೋಗಿ ಗ್ಯಾಂಗ್‌ರೇಪ್ ಎಸಗಿದ್ದಾರೆ. ಗ್ಯಾಂಗ್‌ರೇಪ್ ಎಸಗಿದ ನಂತರ ಆಕೆಯನ್ನು ಬೈಕ್‌ನಲ್ಲಿ ಕೂರಿಸಿಕೊಂಡು ಮುಜಾಫರ್‌ನಗರಕ್ಕೆ ತೆರಳಿದ್ದರು.
 
ಬಾಲಕಿಯ ಪೋಷಕರು ಆರೋಪಿಗಳ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರಿಂದ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

23 ವರ್ಷದ ಯುವತಿಗೆ ಲೈಂಗಿಕ ಕಿರುಕುಳ ನೀಡಿದ ಓಲಾ ಚಾಲಕ

ಬೆಂಗಳೂರು: ಓಲಾ ಕ್ಯಾಬ್‌ನಲ್ಲಿ ಪ್ರಯಾಣಿಸುತ್ತಿದ್ದ 23 ವರ್ಷದ ಯುವತಿ ಫ್ಯಾಷನ್ ಡಿಸೈನರ್‌ಗೆ ಕಾರು ಚಾಲಕ ...

news

ಎರಡು ನೂರು ರೂಪಾಯಿಗೆ ಹೆಣ್ಣುಮಗು ಮಾರಾಟ!

ಕುಟುಂಬದ ಹಸಿವು ನೀಗಿಸಿಕೊಳ್ಳಲು ಎಂಟು ತಿಂಗಳಿನ ಹೆಣ್ಣು ಮಗುವೊಂದನ್ನು ಕೇವಲ ಎರಡು ನೂರು ರೂಪಾಯಿಗಳಿಗೆ ...

news

ಅನ್ಯಜಾತಿ ಬಾಲಕಿಯನ್ನು ಪ್ರೀತಿಸಿದ ಪ್ರಿಯಕರನ ಕೊಲೆ

ಅನ್ಯ ಜಾತಿಯ ಬಾಲಕಿಯನ್ನು ಪ್ರೀತಿಸಿದ ಯುವಕನ್ನು ದಾರುಣವಾಗಿ ಕೊಲೆ ಮಾಡಿರುವ ಪ್ರಕರಣ ತಡವಾಗಿ ಬೆಳಕಿಗೆ ...

news

ಬಿಜೆಪಿಯದ್ದು ಐಸಿಸ್ ವರ್ತನೆ- ರಾಮಲಿಂಗಾರೆಡ್ಡಿ

ಐಸಿಸ್ ಸಂಘಟನೆಯಂತೆ ರಾಜ್ಯದಲ್ಲಿ ಬಿಜೆಪಿಯವರು ವರ್ತಿಸುವ ಮೂಲಕ ರಾಜ್ಯದಲ್ಲಿ ಶಾಂತಿ ಕದಡುತ್ತಿದ್ದಾರೆ ಎಂದು ...

Widgets Magazine