ಅತ್ಯಾಚಾರ ಎಸಗಿ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದ

ಬಾಗಲಕೋಟೆ, ಗುರುವಾರ, 12 ಜನವರಿ 2017 (10:14 IST)

Widgets Magazine

ಕೀಚಕ ಮನಸ್ಸಿನ ವ್ಯಕ್ತಿಯೊಬ್ಬ 16 ವರ್ಷದ ಅಪ್ರಾಪ್ತೆಯ ಮೇಲೆ ಅತ್ಯಾಚಾರವೆಸಗಿ ಬೆಂಕಿ ಹಚ್ಚಿ ಕೊಂದ ಅಮಾನುಷ ಘಟನೆ ಬಾಗಲಕೋಟೆಯಲ್ಲಿ ನಡೆದಿದೆ.

ಮುಧೋಳ ತಾಲ್ಲೂಕಿನ ಲೋಕಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಸದ್ಯ ಆರೋಪಿಯನ್ನು ವಶಕ್ಕೆ ಪಡೆದಿರುವ ಪೊಲೀಸರು ವಿಚಾರಣೆಯನ್ನು ಕೈಗೊಂಡಿದ್ದಾರೆ. 
 
ಆರೋಪಿಯನ್ನು ಲೋಕೇಶ್ ಲಮಾಣಿ ಎಂದು ಗುರುತಿಸಲಾಗಿದ್ದು ಬುಧವಾರ-ಗುರುವಾರದ ನಡುವಿನ ರಾತ್ರಿ ಸುಮಾರಿಗೆ ಈ ಘಟನೆ ನಡೆದಿದೆ. ಮೃತ ಬಾಲಕಿ ಸಹೋದರಿಯ ಜತೆ ವಾಸಿಸುತ್ತಿದ್ದು ಪೋಷಕರು ಅಲೆಮಾರಿ ಕೂಲಿ ಕಾರ್ಮಿಕರಾಗಿದ್ದು ತಾಯಿ ಗೋವಾದಲ್ಲಿ ಕೂಲಿ ಕೆಲಸವನ್ನು ಹುಡುಕಿಕೊಂಡು ಹೋಗಿದ್ದಾಳೆ. ನಿನ್ನೆ ಆಕೆ ಸಹೋದರಿಯ ಜತೆ ಮಲಗಿದ್ದಳು.ರಾತ್ರಿ 1 ಗಂಟೆ ಸುಮಾರಿಗೆ ಅವರ ಮನೆಗೆ ನುಗ್ಗಿದ 22 ವರ್ಷದ ಲೋಕೇಶ್ ಆಕೆಯ ಮೇಲೆ ಅತ್ಯಾಚಾರವೆಸಗಿದ್ದಾನೆ.
 
ಆತನ ರಾಕ್ಷಸೀತನ ಅಲ್ಲಿಗೆ ಕೊನೆಗೊಂಡಿಲ್ಲ. ಆಕೆಗೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿ ಕೊಂದಿದ್ದಾನೆ. 
 
ಪ್ರಕರಣವನ್ನು ದಾಖಲಿಸಿಕೊಂಡಿರುವ ಪೊಲೀಸರು ತನಿಖೆಯನ್ನು ಮುಂದುವರೆಸಿದ್ದಾರೆ. 
 Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  
ಅತ್ಯಾಚಾರ ಸೀಮೆಎಣ್ಣೆ ಬೆಂಕಿ Girl Rape Kill Bagalkote

Widgets Magazine

ಸುದ್ದಿಗಳು

news

ಹುಡುಗಾಟಕ್ಕೆ ನೇಣಿನ ನಾಟಕವಾಡಿ ಸತ್ತೇ ಹೋದಳು

ಅಪ್ಪ ಅಮ್ಮನನ್ನು ಬೆದರಿಸಲು ನೇಣು ಹಾಕಿಕೊಂಡ ನಾಟಕವಾಡಲು ಪ್ರಯತ್ನಿಸಿದ ಯುವತಿ ನಿಜವಾಗಿಯೂ ಪ್ರಾಣ ...

news

10 ವರ್ಷದ ಮೊಮ್ಮಗನನ್ನು ಅಟ್ಟಾಡಿಸಿ ಮಚ್ಚಿನಿಂದ ಕೊಚ್ಚಿದ ಅಜ್ಜ

ತಾತನೋರ್ವ ತನ್ನ 10 ವರ್ಷದ ಮೊಮ್ಮಗನ ಮೇಲೆ ಮಚ್ಚಿನಿಂದ ಮಾರಣಾಂತಿಕವಾಗಿ ಹಲ್ಲೆ ನಡೆಸಿದ ಪೈಶಾಚಿಕ ಕೃತ್ಯ ...

news

ಚಿಟ್ಟೆ ಕೊಂದಿದ್ದಕ್ಕೆ ಪ್ರಕರಣ ದಾಖಲು

ಅಳಿವಿನಂಚಿನಲ್ಲಿರುವ 'ಲಾರ್ಜ್ ಬ್ಲೂ' ತಳಿಯ ಚಿಟ್ಟೆಗಳನ್ನು ಕೊಂದಿದ್ದಕ್ಕೆ ಬ್ರಿಟನ್‌ನಲ್ಲಿ ಫಿಲಿಪ್ ...

news

ನಾನು ಸಿಎಂ ಅಭ್ಯರ್ಥಿ ಅಲ್ಲ: ಕೇಜ್ರಿವಾಲ್

ಪಂಜಾಬ್ ಮುಖ್ಯಮಂತ್ರಿ ಸ್ಥಾನಕ್ಕೆ ತಮ್ಮ ಪಕ್ಷದ ಅಭ್ಯರ್ಥಿ ಪಂಜಾಬ್‌ನವರೇ ಆಗಿರುತ್ತಾರೆ ಎಂದು ನವದೆಹಲಿ ...

Widgets Magazine