ಗಂಡಂದಿರಿಗೆ ಹೊಡೆಯಲು ನವ ವಧುವಿಗೆ ಮರದ ಬ್ಯಾಟ್ ಉಡುಗೊರೆ ಕೊಟ್ಟ ಸಚಿವ!

NewDelhi, ಸೋಮವಾರ, 1 ಮೇ 2017 (08:36 IST)

Widgets Magazine

ನವದೆಹಲಿ: ನಮ್ಮ ದೇಶದ ರಾಜಕಾರಣಿಗಳು ಎಗ್ಗಿಲ್ಲದೆ ಏನೇನೋ ಮಾತನಾಡಿ, ನಗೆಪಾಟಲಿಗೀಡಾಗುತ್ತಾರೆ. ಇನ್ನು ಕೆಲವೊಮ್ಮೆ ವೃಥಾ ವಿವಾದ ಸೃಷ್ಟಿಸುತ್ತಾರೆ. ಅಂತಹ ಕೆಲಸವನ್ನು ಮಧ್ಯಪ್ರದೇಶದ ಸಚಿವರೊಬ್ಬರು ಮಾಡಿದ್ದಾರೆ.


 
ಮಧ್ಯಪ್ರದೇಶದ ಪಂಚಾಯತ್ ರಾಜ್ ಸಚಿವ ಸಾಮೂಹಿಕ ವಿವಾಹ ಕಾರ್ಯಕ್ರಮವೊಂದರಲ್ಲಿ ನೀಡಿದ ಹೇಳಿಕೆ ವಿವಾದಕ್ಕೆ ಕಾರಣವಾಗಿದೆ. ಹೊಸದಾಗಿ ವಿವಾಹ ಜೀವನಕ್ಕೆ ಕಾಲಿಟ್ಟ ವಧುವಿಗೆ ಅವರು ಖತರ್ನಾಕ್ ಐಡಿಯಾ ಕೊಟ್ಟಿದ್ದಾರೆ.
 
ಒಂದು ವೇಳೆ ನಿಮ್ಮ ಪತಿ ಕಿರುಕುಳ ನೀಡಿದರೆ, ಕುಡಿದು ಬಂದರೆ ಮರದ ಕೋಲು ತೆಗೆದು ಚೆನ್ನಾಗಿ ಏಟು ಕೊಡಿ ಎಂದು ಸಚಿವರು ಸಲಹೆ ಕೊಟ್ಟಿದ್ದಾರೆ.  ಅಲ್ಲದೆ ನೂತನ ವಧುವಿಗೆ ಮರದ ಬ್ಯಾಟ್ ಉಡುಗೊರೆ ನೀಡಿದ್ದಾರೆ. ಆ ಮೂಲಕ ಕುಡುಕ ಗಂಡಂದಿರಿಗೆ ಹೊಡೆಯಲು ಆಯುಧವನ್ನೂ ಅವರೇ ಗಿಫ್ಟ್ ಮಾಡಿದ್ದಾರೆ. ಇಂತಹದ್ದೊಂದು ಐಡಿಯಾ ಕೊಡುವುದಕ್ಕೆ ಕಾರಣ ಅವರ ಕ್ಷೇತ್ರದ ಮಹಿಳೆಯರು ಅವರಿಗೆ ಕೊಡುತ್ತಿದ್ದ ದೂರಂತೆ.
 
ಸದಾ ಮಹಿಳೆಯರು ತಮ್ಮ ಗಂಡ ಕುಡಿದು ಬಂದು ತಾನು ದುಡಿದ ಹಣವನ್ನೆಲ್ಲಾ ಕಿತ್ತುಕೊಳ್ಳುತ್ತಾನೆ ಎಂದು ದೂರು ಕೇಳಿ ಕೇಳಿ ಸಾಕಾಯಿತು. ಹೀಗಾಗಿ ಗಂಡ ಕಿರುಕುಳ ನೀಡಿದರೆ ನೀವೂ ಒಂದೆರಡು ಏಟು ಕೊಡಿ. ಪೊಲೀಸರೂ ನಿಮ್ಮನ್ನು ತಡೆಯಲ್ಲ ಎಂದು ಅಮೂಲ್ಯ ಸಲಹೆ ನೀಡಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  
ಮಧ್ಯಪ್ರದೇಶ ಸಚಿವ ಗೋಪಾಲ್ ಭಾರ್ಗವ ಮದ್ಯಪಾನ ರಾಷ್ಟ್ರೀಯ ಸುದ್ದಿಗಳು ಪತಿ-ಪತ್ನಿ Husband-wife Alchohol Mp Minister Gopal Bhargav National News

Widgets Magazine

ಸುದ್ದಿಗಳು

news

ಅತ್ಯಾಚಾರ ಮಾಡಿ ಹನಿಟ್ರ್ಯಾಪ್ ನಾಟಕವಾಡಿದನಾ ಬಿಜೆಪಿ ಸಂಸದ..?

ಕೂಲ್ ಡ್ರಿಂಕ್ಸ್`ನಲ್ಲಿ ಮತ್ತು ಬರುವ ಔಷಧ ಬೆರೆಸಿ ನನ್ನ ಅಶ್ಲೀಲ ಭಂಗಿಗಳ ಪೋಟೋ, ವಿಡಿಯೋ ತೆಗೆದು ಬ್ಲಾಕ್ ...

news

ಭಾರತದ ಯೋಧರ ಶಿರಚ್ಛೇದನಾ ಮಾಡಿದ ಪಾಕಿಸ್ತಾನ ಸೇನೆ

ನೆರೆಯ ಪಾಕಿಸ್ತಾನ ಮತ್ತೆ ತನ್ನ ಕ್ರೂರ ರೂಪವನ್ನ ಪ್ರದರ್ಶಿಸಿದೆ. ಜಮ್ಮು ಮತ್ತು ಕಾಶ್ಮೀರದ ಪೂಂಚ್`ನಲ್ಲಿ ...

news

ಬಲವಂತವಾಗಿ ನನ್ನ ಕಥಾಧರಿತ ಚಿತ್ರ ಮಾಡಲು ಒಪ್ಪಿಕೊಂಡೆ: ಕುಮಾರಸ್ವಾಮಿ

ಎಸ್. ನಾರಾಯಣ್ ತುಂಬಾ ಬಲವಂತ ಮಾಡಿದರು. ಅದಕ್ಕಾಗಿ ನನ್ನ ಕಥಾಧರಿತ ಚಿತ್ರ ಮಾಡಲು ಒಪ್ಪಿಕೊಂಡೆ ಎಂದು ಮಾಜಿ ...

news

ದೆಹಲಿ ಬಿಜೆಪಿ ಅಧ್ಯಕ್ಷ ಮನೋಜ್ ತಿವಾರಿ ಮನೆ ಮೇಲೆ ದುಷ್ಕರ್ಮಿಗಳಿಂದ ದಾಳಿ: ನಾಲ್ವರ ಬಂಧನ

ನವದೆಹಲಿ: ದೆಹಲಿ ಬಿಜೆಪಿ ಅಧ್ಯಕ್ಷ ಮನೋಜ್ ತಿವಾರಿ ಮನೆ ಮೇಲೆ ದುಷ್ಕರ್ಮಿಗಳು ಗುಂಪೊಂದು ದಾಳಿ ಮಾಡಿದ್ದು, ...

Widgets Magazine