ಅಶ್ಲೀಲ ಸಿನೆಮಾ ನೋಡುವಾಗ ರೆಡ್ ಹ್ಯಾಂಡ್‌ ಸಿಕ್ಕು ಬಿದ್ದಿದ್ದೆ: ಸಿಎಂ ಮನೋಹರ್ ಪರಿಕ್ಕರ್

ಗೋವಾ:, ಬುಧವಾರ, 15 ನವೆಂಬರ್ 2017 (17:07 IST)

ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಅಶ್ಲೀಲ ಸಿನೆಮಾ ನೋಡುತ್ತಿದ್ದಾಗಿ ಒಂದು ಬಾರಿ ಸಿಕ್ಕುಬಿದ್ದಿದ್ದರಂತೆ. ಅವರು ಹೇಳಿದ್ದಿಷ್ಟು. 
 
ಪಣಜಿಯಲ್ಲಿ ಮಕ್ಕಳ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಗೋವಾ ಸಿಎಂ ಮನೋಹರ್ ಪರಿಕ್ಕರ್, ನಾನು ಯುವಕನಾಗಿದ್ದಾಗ ಅಶ್ಲೀಲ ಚಿತ್ರ ನೋಡುವಾಗ ಸಿಕ್ಕು ಬಿದ್ದಿರುವ ಘಟನೆಯ ಬಗ್ಗೆ ಹೇಳಲು ಇದು ಸುಸಂದರ್ಭ ಎಂದು ಭಾವಿಸಿದ್ದೇನೆ ಎಂದರು.
 
ನೀವು ವಿದ್ಯಾರ್ಥಿಯಾಗಿದ್ದಾಗ ಎಂತಹ ಸಿನೆಮಾಗಳನ್ನು ನೋಡಲು ಬಯಸುತ್ತಿದ್ದೀರಿ ಎನ್ನುವ ಮಕ್ಕಳ ಪ್ರಶ್ನೆಗೆ, ಸಿಎಂ ಪರಿಕ್ಕರ್ ಬಾಂಬ್ ಹಾಕಿದರು.
 
ನಾನು ವಿದ್ಯಾರ್ಥಿಯಾಗಿದ್ದಾಗ ಕೇವಲ ಸಿನೆಮಾಗಳನ್ನು ನೋಡುತ್ತಿರಲಿಲ್ಲ. ಅಶ್ಲೀಲ ಸಿನೆಮಾಗಳನ್ನು ನೋಡುತ್ತಿದ್ದೆ. ನೀವು ಇದೀಗ ಟಿವಿಯಲ್ಲಿ ಹಲವು ಕಾರ್ಯಕ್ರಮಗಳನ್ನು ನೋಡುತ್ತೀರಿ. ಆವಾಗ ಟಿವಿ ಇರಲಿಲ್ಲ. ನಾನು ಅಶ್ಲೀಲ ಸಿನೆಮಾಗಳನ್ನು ನೋಡುತ್ತಿದ್ದೆ ಎಂದು ತಿಳಿಸಿದ್ದಾರೆ.
 
ನಾನು ಯುವಕನಾಗಿದ್ದಾಗ ಅದೊಂದು ಜನಪ್ರಿಯ ಅಶ್ಲೀಲ ಚಿತ್ರ ಬಿಡುಗಡೆಯಾಗಿತ್ತು. ನಾನು ಮತ್ತು ನನ್ನ ಸಹೋದರ ಚಿತ್ರ ವೀಕ್ಷಣೆಗಾಗಿ ತೆರಳಿದ್ದೇವು. ಇಂಟರ್‌ವೆಲ್ ಸಂದರ್ಭದಲ್ಲಿ ಥಿಯೇಟರ್‌ನಲ್ಲಿ ಲೈಟ್ ಆನ್ ಆದಾಗ ನನ್ನ ಪಕ್ಕದಲ್ಲಿಯೇ ನೆರೆಮನೆಯಾತ ಕುಳಿತಿರುವುದು ಕಂಡು ಬಂತು. ನೆರೆಮನೆಯಾತ ದಿನಾ ಸಂಜೆ ನಮ್ಮ ತಾಯಿಯೊಂದಿಗೆ ಹರಟೆ ಹೊಡೆಯುತ್ತಿದ್ದನು. ನಾವು ಸತ್ತೇವು ಎಂದು ಭಾವಿಸಿದೆ. 
 
ಇತರ ವಿದ್ಯಾರ್ಥಿಗಳಂತೆ ನಾನು ಮತ್ತು ನನ್ನ ಸಹೋದರ ಅವಧೂತ, ನೆರೆಮನೆಯಾತನ ಕಣ್ಣುತಪ್ಪಿಸಿ ಟಾಕೀಜ್‌ನಿಂದ ಜೀವ ಉಳಿಸಿಕೊಳ್ಳಲು ಹೊರಗೆ ಓಡಿ ಬಂದಾಯಿತು.
 
ನಾವು ಮನೆಗೆ ತಲುಪಿದಾಗ ನೆರೆಮನೆಯಾತ ಹೇಳುವ ಮೊದಲೇ ನಾನೇ ತಾಯಿಗೆ ಮಾಹಿತಿ ನೀಡಿದೆ. ನಾನು ಸಿನೆಮಾ ನೋಡಲು ಹೋಗಿದ್ದೆ. ಆದೊಂದು ಕೆಟ್ಟ ಸಿನೆಮಾ ಇದ್ದರಿಂದ ಮಧ್ಯದಲ್ಲಿಯೇ ಸಿನೆಮಾ ನೋಡುವುದು ಬಿಟ್ಟು ವಾಪಸ್ ಮನೆಗೆ ಬಂದಿದ್ದೇವೆ. ನಮ್ಮ ನೆರೆಮನೆಯಾತ ಕೂಡಾ ಟಾಕೀಜ್‌ನಲ್ಲಿದ್ದ ಎಂದು ಹೇಳಿದ್ದೆ. ತಾಯಿ ಮೌನವಹಿಸಿದ್ದರು ಎಂದು ಸಿಎಂ ಮನೋಹರ್ ಪರಿಕ್ಕರ್ ತಮ್ಮ ವಿದ್ಯಾರ್ಥಿ ಜೀವನವನ್ನು ಬಿಚ್ಚಿಟ್ಟಿದ್ದಾರೆ.   

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಮಾಜಿ ಸಚಿವ ಅಂಬರೀಶ್ ವರ್ತನೆಗೆ ಕಾಂಗ್ರೆಸ್ ನಾಯಕರ ಆಕ್ರೋಶ

ಬೆಂಗಳೂರು: ವಿಧಾನಮಂಡಲದ ಅಧಿವೇಶನಕ್ಕೆ ಗೈರುಹಾಜರಾಗಿ ನಟಿಯೊಬ್ಬಳೊಂದಿಗೆ ಡಾನ್ಸ್ ಮಾಡುತ್ತಿರುವ ಶಾಸಕ ...

news

ಏನಾಗಿದೆ ನಿಮಗೆ ಕಲಾಪಕ್ಕೆ ಯಾಕೆ ಗೈರು: ಶಾಸಕ, ಸಚಿವರಿಗೆ ಸಿಎಂ ಕ್ಲಾಸ್

ಬೆಂಗಳೂರು: ಬೆಳಗಾವಿಯಲ್ಲಿ ನಡೆಯುತ್ತಿರುವ ಅಧಿವೇಶನ ನಮ್ಮ ಸರಕಾರದ ಕೊನೆಯ ಅಧಿವೇಶನವಾಗಿದೆ. ಆದಾಗ್ಯೂ ಸಚಿವ ...

news

ಸಿಎಂ ಸಿದ್ದರಾಮಯ್ಯ- ಜಗದೀಶ್ ಶೆಟ್ಟರ್ ನಡುವೆ ಟಾಕ್ ಫೈಟ್

ಬೆಂಗಳೂರು: ಮಹದಾಯಿ ಸಮಸ್ಯೆ ಇತ್ಯರ್ಥಿ ಕುರಿತಂತೆ ಸಿಎಂ ಸಿದ್ದರಾಮಯ್ಯ ವಿಪಕ್ಷ ನಾಯಕ ಜಗದೀಶ್ ...

news

ಮಹದಾಯಿ ಸಮಸ್ಯೆ ಎತ್ತಲು ಬಿಜೆಪಿ ಶಾಸಕರ ಹಿಂದೇಟು

ಬೆಂಗಳೂರು: ಮಹತ್ವಕಾಂಕ್ಷೆಯ ನೀರಾವರಿ ಯೋಜನೆಯಾದ ಮಹದಾಯಿ ಬಗ್ಗೆ ಅಧಿವೇಶನದಲ್ಲಿ ಪ್ರಸ್ತಾಪಿಸಲು ವಿಪಕ್ಷವಾದ ...

Widgets Magazine
Widgets Magazine