ಪೋಷಕರು ಹಾಗೂ ಒಡಹುಟ್ಟಿದವರನ್ನು ಕಡೆಗಾಣಿಸಿದರೆ ಸರ್ಕಾರಿ ನೌಕರರ ಸಂಬಳ ಕಟ್

ಅಸ್ಸಾಂ, ಶನಿವಾರ, 28 ಜುಲೈ 2018 (14:37 IST)

ಅಸ್ಸಾಂ : ಪೋಷಕರನ್ನು ನೋಡಿಕೊಳ್ಳದಿದ್ದರೆ ಮಗನಿಗೆ ನೀಡಿದ ಆಸ್ತಿಯನ್ನು ತಂದೆ ವಾಪಾಸು ಪಡೆಯಬುಹುದು ಎಂದು ಇತ್ತೀಚೆಗಷ್ಟೇ ಬಾಂಬೆ ಹೈಕೋರ್ಟ್ ತೀರ್ಪನ್ನು ನೀಡಿತ್ತು. ಅದೇರೀತಿ ಇದೀಗ ಪೋಷಕರು ಹಾಗೂ ಒಡಹುಟ್ಟಿದವರನ್ನು ಕಡೆಗಣಿಸಿದರೆ ಅಂತಹವರ ಸರ್ಕಾರಿ ಸಂಬಳವನ್ನು ಕಟ್ ಮಾಡುವುದಾಗಿ ಅಸ್ಸಾಂ ಸರ್ಕಾರ ಹೊಸ ಕಾನೂನನ್ನು ಜಾರಿಗೆ ತಂದಿದೆ.


ಈ ಕಾನೂನು ಅಕ್ಟೋಬರ್ 2 ರಿಂದ ಅಸ್ಸಾಂನಲ್ಲಿ ಜಾರಿಗೆ ಬರಲಿದ್ದು, ಅದರ ಪ್ರಕಾರ ಯಾವುದೇ ಆದಾಯವಿರದ ಪೋಷಕರು ಹಾಗೂ ದಿವ್ಯಾಂಗ ಸಹೋದರ ಹಾಗೂ ಸಹೋದರಿಯರನ್ನು ನೌಕರರು ಸರಿಯಾಗಿ ನೋಡಿಕೊಳ್ಳ ಬೇಕು. ಒಂದು ವೇಳೆ ನೋಡಿಕೊಳ್ಳದೆ ಹೋದರೇ ಸರಕಾರಿ ನೌಕರರ ಒಂದು ತಿಂಗಳ ಒಟ್ಟು ವೇತನದಲ್ಲಿ ಶೇ. 10 - 15 ರಷ್ಟು ಕಡಿತಗೊಳ್ಳಲಿದೆ ಎನ್ನಲಾಗಿದೆ.


ಕೊನೆಗಾಲದಲ್ಲಿ ಪೋಷಕರು ವೃದ್ದಶ್ರಮಗಳಲ್ಲಿ ಕಾಲಕಳೆಯುವುದನ್ನು ತಪ್ಪಿಸುವ  ಅಸ್ಸಾಂ ಸರ್ಕಾರದ ಈ ಕಾನೂನು ದೇಶವ್ಯಾಪ್ತಿ ವಿಸ್ತರಣೆ ಮಾಡುವಂತೆ ಜನತೆ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ ಎಂದು ತಿಳಿದುಬಂದಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಮಂತ್ರಾಲಯ ರಾಯರ ದರ್ಶನವಿಲ್ಲ; ಭಕ್ತರಿಗೆ ನಿರಾಸೆ

ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿಯ ದರ್ಶನವನ್ನ ಬೆಳಗ್ಗೆಯಿಂದ ತಾತ್ಕಲಿಕವಾಗಿ ನಿಲ್ಲಿಸಲಾಗಿದೆ.

news

ಗಂಡಸರೇ ಎಚ್ಚರ ! ಇನ್ಮುಂದೆ ಹೆಂಡತಿಗೆ ಮೋಸ ಮಾಡುವ ಹಾಗೇ ಇಲ್ಲ!

ನವದೆಹಲಿ : ಮಹಿಳೆಯರಿಗೆ ಮೋಸ ಮಾಡುವ ಹಾಗೂ ಕಿರುಕುಳ ನೀಡುವ ಘಟನೆಗಳು ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ...

news

ಕತ್ತೆಗಳಿಗೆ ಕಪ್ಪುಬಣ್ಣ ಬಳಿದು ಝೀಬ್ರಾದಂತೆ ಪ್ರದರ್ಶಿಸಿದ ಆ ಮೃಗಾಲಯ ಎಲ್ಲಿದೆ ಗೊತ್ತಾ?

ಕೈರೋ : ಈಜಿಪ್ಟ್ ರಾಜಧಾನಿ ಕೈರೋದ ಮೃಗಾಲಯವೊಂದು ಕತ್ತೆಗಳನ್ನು ಝೀಬ್ರಾದಂತೆ ಪ್ರದರ್ಶಿಸಿ ...

news

ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಕೂಗಿಗೆ ನಮ್ಮ ಬೆಂಬಲವಿಲ್ಲ ಎಂದ ಹೈ-ಕ. ಹೋರಾಟಗಾರರು

ಬೆಂಗಳೂರು: ಉತ್ತರ ಕರ್ನಾಟಕ ನಿರ್ಲಕ್ಷ್ಯಗೊಳಗಾಗಿದೆ ಎಂದು ಆಪಾದಿಸಿ ಪ್ರತ್ಯೇಕ ರಾಜ್ಯಕ್ಕಾಗಿ ಎದ್ದಿರುವ ...

Widgets Magazine