Widgets Magazine
Widgets Magazine

ಸ್ವಚ್ಚ ಭಾರತ: ಸಾರ್ವಜನಿಕ ಸ್ಥಳದಲ್ಲಿ ಮೂತ್ರ ವಿಸರ್ಜಿಸಿದ ಕೇಂದ್ರ ಮಂತ್ರಿ

ರಾಮಕೃಷ್ಣ ಪುರಾಣಿಕ 

ಬೆಂಗಳೂರು, ಗುರುವಾರ, 15 ಫೆಬ್ರವರಿ 2018 (19:14 IST)

Widgets Magazine

ಜೈಪುರ: ಪಿಂಕ್ ಸಿಟಿಯ ಗೋಡೆಯೊಂದರ ಮೇಲೆ ರಾಜಸ್ಥಾನದ ಆರೋಗ್ಯ ಸಚಿವ ಕಾಲಿಚರಣ್ ಸರಾಫ್ ಅವರು ಮೂತ್ರ ವಿಸರ್ಜನೆ ಮಾಡುತ್ತಿರುವ ಫೋಟೋ ವೈರಲ್ ಆಗುತ್ತಿದ್ದಂತೆಯೇ ರಾಜಸ್ಥಾನದಲ್ಲಿರುವ ಭಾರತೀಯ ಜನತಾ ಪಾರ್ಟಿ (ಬಿಜೆಪಿ) ಸರ್ಕಾರವನ್ನು ಕಾಂಗ್ರೆಸ್ ಅಪಹಾಸ್ಯ ಮಾಡಿದೆ.
"ಸ್ವಚ್ ಭಾರತ್ ಮಿಷನ್ ಕುರಿತು ಸರಕಾರ ಚಿಂತನೆ ನಡೆಸುತ್ತಿದ್ದರೆ, ರಾಜಸ್ಥಾನದ ಆರೋಗ್ಯ ಸಚಿವರು ಸಾರ್ವಜನಿಕವಾಗಿ ಮೂತ್ರ ವಿಸರ್ಜನೆ ಮಾಡುತ್ತಿರುವಾಗ ಸಿಕ್ಕಿಹಾಕಿಕೊಂಡಿದ್ದಾರೆ. ಸರ್ಕಾರಕ್ಕೆ ನಾಚಿಕೆಯಾಗಬೇಕು ಮತ್ತು ಸಾರ್ವಜನಿಕವಾಗಿ ಕ್ಷಮೆಯಾಚಿಸಬೇಕು" ಎಂದು ಶರ್ಮಾ ಹೇಳಿದರು.
 
ಕಾಂಗ್ರೆಸ್‌ನ ರಾಜಸ್ಥಾನ್ ಘಟಕದ ಉಪಾಧ್ಯಕ್ಷರಾದ ಅರ್ಚನಾ ಶರ್ಮಾ ಅವರು ಈ ರೀತಿಯಾಗಿ ಹೇಳಿದರು, ಇಂತಹ ನಾಯಕರು "ಅವಮಾನಕರ" ಕಾರ್ಯಗಳನ್ನು ಮಾಡುವ ಮೂಲಕ ಜನರಿಗೆ ತಪ್ಪು ಸಂದೇಶವನ್ನು ನೀಡುತ್ತಿದ್ದಾರೆ, ತನ್ನದೇ ಕ್ಷೇತ್ರದಲ್ಲಿ ಇಂತಹ ಘಟನೆ ಸಚಿವರಿಂದ ಸಂಭವಿಸಬಾರದಿತ್ತು. ಸರಾಫ್ ಅವರು ಈ ರೀತಿ ಮಾಡಿದ್ದು ಇದು ಮೊದಲ ಬಾರಿಗೆ ಅಲ್ಲ ಎಂದು ಅವರು ವಾದಿಸಿದರು. ಧೋಲ್‌ಪುರ್ ಉಪ ಚುನಾವಣೆಯ ಸಮಯದಲ್ಲಿ ಅವರು ಒಟ್ಟಿಗೆ ಹೋಗುತ್ತಿದ್ದಾಗ, ಸರಾಫ್ ಅವರು ದಾರಿಯಲ್ಲಿ ಸಾರ್ವಜನಿಕವಾಗಿ ಮೂತ್ರ ವಿಸರ್ಜನೆ ಮಾಡುತ್ತಿದ್ದರು ಎಂದು ಅವರು ಹೇಳಿದರು.
 
ಆದಾಗ್ಯೂ, ಈ ಘಟನೆ "ದೊಡ್ಡ ಸಮಸ್ಯೆಯಲ್ಲ" ಎಂದು ತಿರಸ್ಕರಿಸಿದ ಸರಾಫ್, ಘಟನೆಯ ಕುರಿತು ಮಾತನಾಡಲು ನಿರಾಕರಿಸಿದ್ದಾರೆ.
 
ಸ್ವಚ್ ಭಾರತ್ ಅಭಿಯಾನದಲ್ಲಿ ನಗರವನ್ನು ಪಟ್ಟಿಯಲ್ಲಿ ಮೇಲಿನ ಸ್ಥಾನಕ್ಕೆ ತರಲು ಜೈಪುರ ಪುರಸಭೆಯು ಕಠಿಣ ಪರಿಶ್ರಮವನ್ನು ಪಡುತ್ತಿದೆ, ಇಂತಹ ಸಮಯದಲ್ಲಿ ಈ ಫೋಟೋ ಭಾರಿ ಅಪಹಾಸ್ಯಕ್ಕೆ ಎಡೆಮಾಡಿಕೊಟ್ಟಿದೆ. ಈ ನಗರದ ರಸ್ತೆಗಳಲ್ಲಿ ಮೂತ್ರ ವಿಸರ್ಜನೆ ಮಾಡುವವರಿಗೆ ರೂ. 200 ದಂಡವನ್ನು ವಿಧಿಸಲಾಗುತ್ತದೆ.Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ಗಂಡಿನ ವೇಷ ಹಾಕಿ ಎರಡು ಮದುವೆ ಆದಳು..

ಮಹಿಳೆಯೊಬ್ಬಳು ಪುರುಷನ ವೇಷ ಧರಿಸಿ ವರದಕ್ಷಿಣೆಗಾಗಿ ಎರಡೆರಡು ಮದುವೆಯಾದ ಘಟನೆ ನೈನಿತಾಲ್ ಜಿಲ್ಲೆಯಲ್ಲಿ ...

news

ನಾಳೆ ಕಾವೇರಿ ನೀರಿನ ತೀರ್ಪು, ಸುಪ್ರೀಂನತ್ತ ಎಲ್ಲರ ಚಿತ್ತ: ಜನಜೀವನ ಅಸ್ತವ್ಯಸ್ಥ ಸಾಧ್ಯತೆ

ನವದೆಹಲಿ : ಕಾವೇರಿ ನದಿ ನೀರು ಹಂಚಿಕೆ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ನಾಳೆ ತೀರ್ಪು ನೀಡಲಿದ್ದು, ...

news

ಕಾವೇರಿ ತೀರ್ಪಿನಲ್ಲಿ ರಾಜ್ಯ ನ್ಯಾಯ ಸಿಗುವ ವಿಶ್ವಾಸ– ಜಯಚಂದ್ರ

ಕಾವೇರಿ ನದಿ ನೀರು ಹಂಚಿಕೆ ಪ್ರಕರಣದ ಸುಪ್ರೀಂಕೋರ್ಟ್ ತೀರ್ಪಿನಲ್ಲಿ ರಾಜ್ಯಕ್ಕೆ ನ್ಯಾಯ ದೊರೆಯುವ ...

news

ಕಾವೇರಿ ತೀರ್ಪು ನಾಳೆ ಪ್ರಕಟವಾಗಲ್ಲ– ಸಿದ್ದರಾಮಯ್ಯ

ಕಾವೇರಿ ನದಿ ನೀರು ಹಂಚಿಕೆ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ತೀರ್ಪು ನಾಳೆ ಪ್ರಕಟವಾಗುವುದಿಲ್ಲ ಎಂದು ...

Widgets Magazine Widgets Magazine Widgets Magazine