ಕಂಠಪೂರ್ತಿ ಕುಡಿದಿದ್ದ ವರ ಮದುವೆ ಮೆರವಣಿಗೆಯಲ್ಲೇ ಮೃತಪಟ್ಟ..!

ಬೆಂಗಳೂರು, ಶುಕ್ರವಾರ, 12 ಮೇ 2017 (15:45 IST)

Widgets Magazine

ಕಂಠಪೂರ್ತಿ ಕುಡಿದಿದ್ದ ವರ ಮದುವೆಯ ಮೆರವಣಿಗೆ ವೇಳೆ ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ಗುಜರಾತ್`ನ ಬೊರ್ಸಾದ್ ನಗರದಲ್ಲಿ ನಡೆದಿದೆ.


ಮಂಗಳವಾರ ರಾತ್ರಿ ಮದುವೆಯ ಸಂಭ್ರಮದ ಮೆರವಣಿಗೆ ನಡೆಯುತ್ತಿತ್ತು. ಸ್ನೇಹಿತನ ಹೆಗಲ ಮೇಲೆ ಕುಳಿತು ಸ್ನೇಹಿತರು ಮತ್ತು ಕುಟುಂಬ ವರ್ಗದವರ ಜೊತೆ ಕುಣಿಯುತ್ತಾ ನಲಿಯುತ್ತಾ ಬರುತ್ತಿದ್ದ ವರ ಹೃದಯಾಘಾತದಿಂದ ಕುಸಿದಿದ್ದಾನೆ. ಬಳಿಕ ವರನನ್ನ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಮಾರ್ಗ ಮಧ್ಯೆಯೇ ಪ್ರಾಣ ಪಕ್ಷಿ ಹಾರಿಹೋಗಿತ್ತು. ಮೃತ ವರನನ್ನ 25 ವರ್ಷದ ಸಾಗರ್ ಸೋಲಂಕಿ ಎಂದು ಗುರ್ತಿಸಲಾಗಿದೆ.
 
ಘಟನೆಯಿಂದಾಗಿ ವರ ಮತ್ತು ವಧುವಿನ ಎರಡೂ ಕುಟುಂಬಗಳಿಗೂ ಆಘಾತವಾಗಿದ್ದು, ಸಂಭ್ರಮದ ಮನೆಯಲ್ಲಿ ಸೂತಕದ ಛಾಯೆ ಆವರಿಸಿದೆ. ವರ ಸಾಗರ್ ಖಾಸಗಿ ಕಂಪನಿ ಉದ್ಯೋಗಿಯಾಗಿದ್ದು, ಅತಿಯಾದ ಮದ್ಯಪಾನ ಮಾಡಿದ್ದೇ ಘಟನೆಗೆ ಕಾರಣ ಎನ್ನಲಾಗುತ್ತಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿWidgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  
ಮದುವೆ ಮೆರವಣಿಗೆ ವಡೋದರ Marriage Possession Vadodara

Widgets Magazine

ಸುದ್ದಿಗಳು

news

ಎಸ್ಸೆಎಸ್ಸೆಎಲ್ಸಿ ಫಲಿತಾಂಶ ಪ್ರಕಟ: 60 ಶಾಲೆಗಳಲ್ಲಿ ಶೂನ್ಯ ಫಲಿತಾಂಶ

ಪ್ರಸಕ್ತ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷಾ ಫಲಿತಾಂಶ ಪ್ರಕಟಗೊಂಡಿದೆ. ಮಧ್ಯಾಹ್ನವೇ ಪ್ರೌಢಶಿಕ್ಷಣಾ ಇಲಾಖೆಯ ...

news

ಅನಾರೋಗ್ಯದಿಂದಾಗಿ ಆಸ್ಪತ್ರೆಗೆ ದಾಖಲಾದ ಸಿದ್ಧಗಂಗಾ ಶ್ರೀಗಳು

ಬೆಂಗಳೂರು: ಶತಾಯುಷಿ ಸಿದ್ಧಗಂಗಾ ಶ್ರೀಗಳ ಆರೋಗ್ಯದಲ್ಲಿ ಸ್ವಲ್ಪ ಏರು ಪೇರಾಗಿದ್ದು, ಬೆಂಗಳೂರಿನ ಬಿಜಿಎಸ್ ...

news

ಪಿಯುಸಿ ಆಯ್ತು, ಇಂದು ಎಸ್ಎಸ್ಎಲ್ ಸಿ ಫಲಿತಾಂಶ

ಬೆಂಗಳೂರು: ನಿನ್ನೆಯಷ್ಟೇ ಫಲಿತಾಂಶ ಪ್ರಕಟವಾದ ನೆಮ್ಮದಿಯಲ್ಲಿ ಪಿಯು ವಿದ್ಯಾರ್ಥಿಗಳಿದ್ದಾರೆ. ಇಂದು ...

news

ಸೋನಿಯಾ ಗಾಂಧಿ ಆರೋಗ್ಯ ಸ್ಥಿರ

ನವದೆಹಲಿ: ವ್ಯತ್ಯಾಸ ಆಹಾರ ಸೇವನೆಯಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ...

Widgets Magazine