ಇಂದಿನಿಂದ ಸಂಸತ್ ಮುಂಗಾರು ಅಧಿವೇಶನ: ಜಿಎಸ್ ಟಿಯ ಹೊಸ ಉತ್ಸಾಹದೊಂದಿಗೆ ಅಧಿವೇಶನ ನಡೆಯಲಿದೆ: ಪ್ರಧಾನಿ

ನವದೆಹಲಿ, ಸೋಮವಾರ, 17 ಜುಲೈ 2017 (13:02 IST)

ನವದೆಹಲಿ:ಇಂದಿನಿಂದ ಸಂಸತ್ತಿನ ಮುಂಗಾರು ಅಧಿವೇಶನ ಆರಂಭವಾಗಿದ್ದು, ಕಲಾಪ ಆರಂಭಕ್ಕೂ ಮುನ್ನ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಜಿಎಸ್‍ಟಿ ಪರಿಕಲ್ಪನೆಯಂತೆ ಹೊಸ ಹುರುಪಿನೊಂದಿಗೆ ಎಲ್ಲರೂ ಒಟ್ಟಾಗಿ ಸಾಗೋಣ. ಸರಕು ಮತ್ತು ಸೇವಾ ತೆರಿಗೆ ಯಶಸ್ವಿ ಜಾರಿಯು ಹೊಸ ಭರವಸೆ ಮತ್ತು ಉತ್ಸಾಹಗಳೊಂದಿಗೆ ಅಧಿವೇಶನವನ್ನು ತುಂಬಲಿದೆ ಎಂದು ತಿಳಿಸಿದ್ದಾರೆ.
 
ಜಿಎಸ್ ಟಿಯ ಪರಿಕಲ್ಪನೆ ಒಟ್ಟಿಗೆ ಬಲವಾಗಿ ಬೆಳೆಯುವುದಾಗಿದೆ (Growing Stronger Together). ಜಿಎಸ್ ಟಿ ಜಾರಿಯಿಂದ ಮುಂಗಾರು ಅಧಿವೇಶನ ಉತ್ಸಾಹದಿಂದ ತುಂಬಿರುತ್ತದೆ ಎಂದು ಭಾವಿಸುತ್ತೇನೆ. ಎಲ್ಲಾ ಪಕ್ಷಗಳು, ಸಂಸದರು ದೇಶದ ಜನರ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಅಧಿವೇಶನ ಕಲಾಪದಲ್ಲಿ ಭಾಗವಹಿಸುವ ವಿಶ್ವಾಸವನ್ನು ಹೊಂದಿದ್ದೇನೆ ಎಂದು ಹೇಳಿದರು.
 
ಈ ಬಾರಿಯ ಅಧಿವೇಶನದ ಆರಂಭ ದಿನವೇ ರಾಷ್ಟ್ರಪತಿ ಚುನಾವಣೆ ನಡೆಯುತ್ತಿದೆ. ಉಪ ರಾಷ್ಟ್ರಪತಿ ಚುನಾವಣೆ ಕೂಡ ಅಧಿವೇಶನ ಮುಕ್ತಾಯಕ್ಕೆ ಮುನ್ನ ನಡೆಯಲಿದೆ. ಆಗಸ್ಟ್ 9ಕ್ಕೆ ಕ್ವಿಟ್ ಇಂಡಿಯಾ ಚಳವಳಿ ನಡೆದು 75 ವರ್ಷ ತುಂಬಲಿದೆ ಎಂದು ಪ್ರಧಾನ ಮಂತ್ರಿ ಮೋದಿ ಹೇಳಿದರು.
 ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಬಿಎಸ್‌ವೈ ನಿವಾಸದಲ್ಲಿ ಮಧ್ಯರಾತ್ರಿ ತಲಾಶ್ ಸರಿಯಲ್ಲ: ಶೆಟ್ಟರ್ ಕಿಡಿ

ಬೆಂಗಳೂರು: ವಿಧಾನಪರಿಷತ್ ವಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ಆಪ್ತ ಸಹಾಯಕ ವಿನಯ್ ಅಪಹರಣ ಕುರಿತಂತೆ ಆರೋಪಿ ...

news

ಕರ್ಮಕಾಂಡ ಬಯಲಿಗೆಳೆದ ಡಿಐಜಿ ರೂಪಾ ವಿರುದ್ಧವೇ ಪ್ರತಿಭಟನೆ ಜೋರು

ಬೆಂಗಳೂರು: ಪರಪ್ಪನ ಅಗ್ರಹಾರ ಜೈಲಿನ ಕರ್ಮಕಾಂಡಗಳ ಬಗ್ಗೆ ಡಿಐಜಿ ರೂಪಾ ಎರಡನೇ ವರದಿ ನೀಡಿದ ಬೆನ್ನಲ್ಲೇ ಅವರ ...

news

ಫ್ರಂಟ್, ಬ್ಯಾಕ್, ರೈಟ್ ಲೆಫ್ಟ್ ಎಲ್ಲರಿಗೂ ಹುದ್ದೆ ದೊರೆತಿವೆ: ಅಂಜನೇಯ

ಬೆಂಗಳೂರು: ಕೆಪಿಸಿಸಿ ಪದಾಧಿಕಾರಿಗಳ ನೇಮಕದಲ್ಲಿ ತಾರತಮ್ಯವಾಗಿದೆ ಎನ್ನುವ ವರದಿಗಳಿಗೆ ಪ್ರತಿಕ್ರಿಯೆ ನೀಡಿದ ...

news

ಮಂಗಳೂರು, ಕಾರವಾರ ಸಮುದ್ರತಳದಲ್ಲಿ ಅಪಾರದ ಪ್ರಮಾಣ ನಿಧಿ ಪತ್ತೆ ಹಚ್ಚಿದ ವಿಜ್ಞಾನಿಗಳು..!

ಭೂಗರ್ಭ ಶಾಸ್ತ್ರದ ವಿಜ್ಞಾನಿಗಳು ಭಾರತದ ಸಾಗರ ತಳದಲ್ಲಿ ಅಪಾರ ಪ್ರಮಾಣದ ಅಮೂಲ್ಯ ಲೋಹಗಳು ಮತ್ತು ಖನಿಜಗಳು ...

Widgets Magazine