ಗುಜರಾತ್‌ನಲ್ಲಿ ಮತ್ತೆ ಮುಸ್ಲಿಮರನ್ನು ಬೆದರಿಸುವ ತಂತ್ರ: ವೈರಲ್ ಆದ ಕೋಮುವಾದ ವಿಡಿಯೋ

ಗಾಂಧಿನಗರ, ಭಾನುವಾರ, 19 ನವೆಂಬರ್ 2017 (16:25 IST)

ಗುಜರಾತ್‌ನಲ್ಲಿ ವಿಧಾನಸಭೆ ಚುನಾವಣೆಗಳು ಘೋಷಣೆಯಾಗುತ್ತಿದ್ದಂತೆ ಮತದಾರರನ್ನು ಓಲೈಸಿಕೊಳ್ಳುವ ಇಲ್ಲವೇ ಬೆದರಿಸುವ ತಂತ್ರಗಳು ನಡೆಯುತ್ತಿರುವುದು ವಿಷಾದಕರವಾಗಿದೆ.
 
ಇದೀಗ ಮತ ನೀಡದಿದ್ದಲ್ಲಿ ಮುಂದೆ ಕಾದಿದೆ ಅಪಾಯ. 2002ರ ದಂಗೆ ಮರುಕಳಿಸಬಹುದು ಏನ್ನುವ ರೀತಿಯಲ್ಲಿ ಮುಸ್ಲಿಮರನ್ನು ಬೆದರಿಸುವ ವಿಡಿಯೋವೊಂದು ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್ ಆಗಿದೆ.  
 
ವಕೀಲರು, ಸಾಮಾಜಿಕ ಕಾರ್ಯಕರ್ತರಾಗಿರುವ ಗೋವಿಂದ ಪರ್ಮಾರ್ ಸಲ್ಲಿಸಿದ ದೂರಿನ ಮೇರೆಗೆ ಸೋಶಿಯಲ್ ಮೀಡಿಯಾದಲ್ಲಿ ಸುತ್ತುತ್ತಿರುವ ಮತ್ತು ಕೋಮುವಾದಿಯಾಗಿರುವ ವೀಡಿಯೊ ಬಗ್ಗೆ ತನಿಖೆ ನಡೆಸಲು ಚುನಾವಣಾ ಆಯೋಗ ಆದೇಶಿಸಿದೆ.
 
ಗುಜರಾತ್ ಅಸೆಂಬ್ಲಿ ಚುನಾವಣೆಗಳ ಮುಂಚೆ ಕೋಮು ದ್ವೇಷವನ್ನು ಪ್ರಚೋದಿಸುವ ಇಂತಹ ದೂರನ್ನು ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ಚುನಾವಣಾ ಆಯೋಗ, ಗುಜರಾತ್ ಮುಖ್ಯ ಚುನಾವಣಾಧಿಕಾರಿಗೆ ಅಪರಾಧಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದೆ.
 
1.15 ನಿಮಿಷದ ವಿಡಿಯೋ ಕ್ಲಿಪ್‌ನಲ್ಲಿ  ಮಹಿಳೆಯೊಬ್ಬಳು ನಿರ್ಜನ ಪ್ರದೇಶದಿಂದ ಅವಸರದಲ್ಲಿ ಓಡಿ ಬರುತ್ತಿರುತ್ತಾಳೆ. ನಿಮ್ಮ ಮತ ನಿಮ್ಮ ಸುರಕ್ಷೆ ಎನ್ನು ಕ್ಯಾಪ್ಶನ್‌ನೊಂದಿಗೆ ವಿಡಿಯೋ ಅಂತ್ಯವಾಗುತ್ತದೆ.
 
ಏತನ್ಮಧ್ಯೆ, ಅಹಮದಾಬಾದ್‌ಲ್ಲಿರುವ ಸೈಬರ್ ಅಪರಾಧ ಸೆಲ್, ಸಾಮಾಜಿಕ ಮಾಧ್ಯಮದ ವೀಡಿಯೊ ವಿರುದ್ಧ ಶುಕ್ರವಾರ ಸಲ್ಲಿಸಿದ ದೂರಿನ ಬಗ್ಗೆ ತನಿಖೆ ನಡೆಸಿದೆ. ಸಾಮಾಜಿಕ ಮಾಧ್ಯಮದ ವೇದಿಕೆಗಳಲ್ಲಿ ಪ್ರಸಾರವಾದ ವಿಡಿಯೋ ಕ್ಲಿಪ್ ಮತದಾನಕ್ಕೆ ಒಳಪಟ್ಟ ಗುಜರಾತ್‌ನಲ್ಲಿ "ಮತಗಳನ್ನು ಧ್ರುವೀಕರಿಸಲು" ಮುಸ್ಲಿಮರ ವಿರುದ್ಧ ದ್ವೇಷವನ್ನು ಹರಡಲು ಉದ್ದೇಶಿಸಿದೆ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಮಹಿಳೆ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಯುವಕನಿಗೆ ಥಳಿತ

ಕೋಲಾರ: ಮಹಿಳೆಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಕಾಮುಕನಿಗೆ ಸ್ಥಳೀಯರು ಮನಬಂದಂತೆ ಥಳಿಸಿ ಪೊಲೀಸರಿಗೆ ...

news

ಡಿಸೆಂಬರ್ 1 ರಂದು ರಾಹುಲ್ ಗಾಂಧಿಗೆ ಕಾಂಗ್ರೆಸ್ ಅಧ್ಯಕ್ಷ ಪಟ್ಟ?

ನವದೆಹಲಿ: ಕಾಂಗ್ರೆಸ್ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಅನಾರೋಗ್ಯದ ಹಿನ್ನೆಲೆಯಲ್ಲಿ ಉಪಾಧ್ಯಕ್ಷ ರಾಹುಲ್ ...

news

ಮಧ್ವರಾಜ್ ನೀನು ಬಿಜೆಪಿ ಸೇರುತ್ತೀಯಾ?: ಸಿಎಂ ನೇರ ಪ್ರಶ್ನೆ

ಮಂಗಳೂರು: ಕಾಂಗ್ರೆಸ್ ಶಾಸಕ ಪ್ರಮೋದ್ ಮದ್ವರಾಜ್ ಬಿಜೆಪಿ ಸೇರಲಿದ್ದಾರೆ ಎನ್ನುವ ಉಹಾಪೋಹ, ವದಂತಿಗಳಿಗೆ ...

news

ಪ್ರತಿಪಕ್ಷಗಳನ್ನು ಹಣಿಯಲು ಬಿಜೆಪಿಯಿಂದ ಚುನಾವಣೆಯಲ್ಲಿ ವಾಟ್ಸಪ್ ಸಮರ

ಬೆಂಗಳೂರು: ಮುಂಬರುವ ವಿಧಾನಸಭೆ ಚುನಾವಣೆ ಆಧುನೀಕರಣಗೊಳ್ಳುತ್ತಿದೆ. ಬಿಜೆಪಿ ನಾಯಕರು ಸಾಮಾಜಿಕ ಜಾಲ ...

Widgets Magazine
Widgets Magazine